More

    ಗಮನ ಸೆಳೆದ ಸಮುದ್ರ ಸಾಹಸ , ಶ್ವಾನ ಸ್ಪರ್ಧೆ

    ಪಡುಬಿದ್ರಿ: ಕಾಪು ಲಾಲ್ ಬಹದುರ್ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್, ಕಾಪು ಪಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ದಿ. ಆರ್.ಡಿ. ಮೆಂಡನ್ ಕಾಪು ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ಮೂರು ದಿನ ನಡೆದ ಕಡಲ ಐಸಿರ ಬೀಚ್ ಫೆಸ್ಟ್-2022ರ ಕೊನೆಯ ದಿನ ಸಮುದ್ರ ಸಾಹಸ ಸ್ಪರ್ಧೆ ಹಾಗೂ ಶ್ವಾನ ಸ್ಪರ್ಧೆ ವಿಶೇಷ ಗಮನ ಸೆಳೆಯಿತು.

    ಸಮುದ್ರದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಸಾರ್ವಜನಿಕ ವಿಭಾಗದಲ್ಲಿ ತಮಿಳುನಾಡಿನ ಈಜುಪಟು ಹಾಗೂ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್ ಪಾಲ್ಗೊಂಡು ತೃತೀಯ ಬಹುಮಾನ ಗಳಿಸಿದರು. ಜೂನಿಯರ್ ವಿಭಾಗದಲ್ಲಿ ಜಿ.ನಿಶಾಲ್ ಭಟ್ ಪ್ರಥಮ, ಸಾಲಿಗ್ರಾಮದ ಮಹಾಲಸಾ ಪೈ ದ್ವಿತೀಯ. ಯಕ್ಷಿತ್ ತೃತೀಯ ಸ್ಥಾನ, ಸಾರ್ವಜನಿಕ ವಿಭಾಗದಲ್ಲಿ ತಮಿಳುನಾಡಿನ ಆಸ್ಟಿನ್ ಪ್ರಥಮ, ರಾಜನ್ ದ್ವಿತೀಯ, ಡಾ. ಸುಬ್ರಾಯ ಕಾಮತ್ ತೃತೀಯ ಬಹುಮಾನ ಗಳಿಸಿದರು. ನಾಡ ದೋಣಿ ಸ್ಪರ್ಧೆಗಳಲ್ಲಿಯೂ ತುರುಸಿನ ಸ್ಪರ್ಧೆ ನಡೆಯಿತು.

    ಶ್ವಾನ ಸ್ಪರ್ಧೆಯಲ್ಲಿ 21 ತಳಿಗಳ ನೂರಾರು ಶ್ವಾನಗಳು ಪಾಲ್ಗೊಂಡಿತ್ತು. ಪಶು ವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್ ಹೆಗ್ಡೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ಪುರುಷರ ವಾಲಿಬಾಲ್ ಹಾಗೂ ಮರಳು ಶಿಲ್ಪ ರಚನೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಕೊಳಲು ವಾದನ ಹಾಗೂ ಚೆಂಡೆ ವಾದನ ಸ್ಪರ್ಧೆ ನಡೆಯಿತು. ಬೀಚ್‌ಗೆ ಜನಸಾಗರ ಹರಿದು ಬಂದಿತ್ತು. ಶಾಸಕ ಲಾಲಾಜಿ ಆರ್. ಮೆಂಡನ್, ದ.ಕ.ಮೊಗವಿರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಗಂಗಾಧರ ಸುವರ್ಣ, ಲಾಲ್ ಬಹದುರು ಶಾಸ್ತ್ರಿ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ಅಧ್ಯಕ್ಷ ಶೀಲರಾಜ್ ಪುತ್ರನ್, ಉಪಾಧ್ಯಕ್ಷ ಆನಂದ ಶ್ರೀಯಾನ್, ಪ್ರಧಾನ ಕಾರ್ಯದರ್ಶಿ ಸಚಿನ್ ಪುತ್ರನ್, ಪದಾಧಿಕಾರಿಗಳಾದ ಸುಜಿತ್ ಸುವರ್ಣ, ಉದಯ ಶಂಕರ್, ನವೀನ್ ಅಮೀನ್, ಲಾಲಾಜಿ ಪುತ್ರನ್, ರಾಜೇಶ್ ಸುವರ್ಣ, ನಿತೇಶ್ ಕುಮಾರ್ ಉಪಸ್ಥಿತರಿದ್ದರು. ಮಧುಕರ್ ಎಸ್. ಹಾಗೂ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕ್ರೀಡಾಕೂಟಗಳನ್ನು ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts