More

    ದೇಶದ ಮೊದಲ ಶಿಕ್ಷಕಿಯ ಜೀವನ ಪಠ್ಯವಾಗಲಿ

    ಬ್ಯಾಡಗಿ: ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಜಯಂತ್ಯುತ್ಸವ ಶಾಲಾ- ಕಾಲೇಜ್​ಗಳಲ್ಲಿ ಆಚರಿಸಲು ಆದೇಶಿಸುವ ಜತೆಗೆ ಅವರ ಜೀವನ ಚರಿತ್ರೆ ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಡಾ. ಲತಾ ಮಳ್ಳೂರು ಸರ್ಕಾರಕ್ಕೆ ಆಗ್ರಹಿಸಿದರು.
    ಪಟ್ಟಣದ ಶಿಕ್ಷಕಿಯರ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಜಯಂತ್ಯುತ್ಸವ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    2018-19ರಲ್ಲಿ ಸ್ಥಾಪಿಸಿದ ಸಂಘ ಸಾಕಷ್ಟು ಹೋರಾಟ ನಡೆಸಿದೆ. ರಾಜ್ಯದ ಪ್ರಾಥಮಿಕ, ಮಾಧ್ಯಮಿಕ ಸರ್ಕಾರಿ ಹಾಗೂ ಅನುದಾನಿತ, ಖಾಸಗಿ ಸಂಸ್ಥೆಗಳು ಸೇರಿದಂತೆ ವಿವಿಧ ಹಂತದಲ್ಲಿ ಮಹಿಳಾ ಶಿಕ್ಷಕಿಯರ ಸಂಘ ಕಾರ್ಯನಿರ್ವಹಿಸಿದೆ ಎಂದರು.
    ಉಪನ್ಯಾಸಕಿ ಮಾಲುತಾಯಿ ಗಜೇಂದ್ರಗಡ, ಜಯಶ್ರೀ ನೀರಲಗಿಮಠ ಅವರು ರಾಷ್ಟ್ರೀಯ ಶಿಕ್ಷಣ ನೀತಿ, ಮಹಿಳಾ ಶಿಕ್ಷಕಿಯರ ಪಾತ್ರ ಹಾಗೂ ಸಾಮಾಜಿಕ ಸ್ಥಾನಮಾನ ಕುರಿತು ವಿಷಯ ಮಾತನಾಡಿದರು.
    ಶಿಕ್ಷಕಿಯರಾದ ಬಸವಣ್ಣೆವ್ವ ಬಣಕಾರ, ಶಮಶಾದಬೇಗಂ ಸರಖಾಜಿ, ಪಾರ್ವತೆವ್ವ ಕೊರಟಿಕೇರಿ, ರಾಜೇಶ್ವರಿ ಪಿಸೆ ಅವರನ್ನು ಸನ್ಮಾನಿಸಲಾಯಿತು.
    ರಾಜೇಶ್ವರಿ ಬಿಲ್ಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಕಲಾವತಿ ಬಡಿಗೇರ, ತಾ.ಪಂ. ಇಒ ಎನ್. ತಿಮ್ಮಾರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಇದ್ದರು. ಶಿಕ್ಷಕಿ ರೇಣುಕಾ ಬೈರವನಪಾದಮಠ, ಮಂಗಳಾ ಕಂಬಳಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts