More

    ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಿ – ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿಕೆ

    ಬಾಗಲಕೋಟೆ: ಮಹಿಳೆಯರು ಸ್ವಉದ್ಯೋಗ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು. ಆರ್ಥಿಕವಾಗಿ ಸಬಲರಾದಲ್ಲಿ ಕುಟುಂಬವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶಟ್ಟಿ ಹೇಳಿದರು.

    ನವನಗರದ ಬಸವೇಶ್ವರ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿ ಆವರಣದ ಬಸವ ಕಲಾ ವೇದಿಕೆಯಲ್ಲಿ ಶನಿವಾರ ಬಸವೇಶ್ವರ ಸಹಕಾರಿ ಬ್ಯಾಂಕ್, ಮಹಿಳಾ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ವನಿತಾಲೋಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಕೌಶಲ ತರಬೇತಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ನಮ್ಮ ಬ್ಯಾಂಕ್ ವತಿಯಿಂದ ಕಳೆದ 5 ವರ್ಷಗಳಿಂದ ಈ ರೀತಿ ತರಬೇತಿ ಶಿಬಿರ ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ. ತರಬೇತಿ ಪಡೆದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಸ್ವ-ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲಾಗಿರುವುದು ಹೆಮ್ಮೆಯ ವಿಷಯ ಎಂದರು.

    ಸಿಡಿಪಿಒ ಶಿಲ್ಪಾ ಹಿರೇಮಠ ಮಾತನಾಡಿ, ಪ್ರತಿಯೊಬ್ಬ ಮಹಿಳೆ ಹಾಗೂ ವಿದ್ಯಾರ್ಥಿನಿಯರಿಗೆ ತರಬೇತಿ ನಂತರ ತಮ್ಮ ಇಲಾಖೆಯಿಂದ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

    ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ರೂಪಕಗಳು, ಜಾನಪದ, ದೇಶಭಕ್ತಿಗೀತೆಗಳ ನೃತ್ಯ ಮುಂತಾದ ಕಾರ್ಯಕ್ರಮಗಳು ಜರುಗಿದವು. ಅಂಧ ಮಕ್ಕಳ ಹಾಗೂ ಬಾಲಮಂದಿರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ವೇದಿಕೆ ಮೇಲೆ ತರಬೇತುದಾರ ರಾಜೇಶ್ವರಿ ಬೋನಗೇರಿ, ವಿಜಯಲಕ್ಷ್ಮೀ ದಿಡ್ಡಿಬಾಗಿಲ, ವನಿತಾ ಲೋಕದ ಅಧ್ಯಕ್ಷೆ ಜಯಮ್ಮ ಅಬ್ದುಲಪೂರ, ಬ್ಯಾಂಕ್ ನಿರ್ದೇಶಕರಾದ ಉಷಾ ಜಿಗಜಿನ್ನಿ, ರವಿ ಪಟ್ಟಣದ, ವಿ.ವಿ.ಶಿರಗಣ್ಣವರ, ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಸಿ.ಕೇಮಾಳಿ, ಅಧಿಕಾರಿಗಳಾದ ಎಸ್. ಬಿ. ಬದಾಮಿ, ಪಿ.ಎನ್.ಹಳ್ಳಿಕೇರಿ, ವಿ.ಎಂ.ಹಿರೇಮಠ. ಅರವಿಂದ ಯಲಿಗಾರ, ಬಿ.ಜಿ. ಹೊನವಾಡ, ಜ್ಯೋತಿ ನಾವಲಗಿ. ಎಸ್.ಎಚ್.ಕುರ್ತಕೋಟಿ ಉಪಸ್ಥಿತರಿದ್ದರು. ಸಿರಿ ಸಾಂಸ್ಕೃತಿಕ ಅಧ್ಯಕ್ಷ ಶಿಲ್ಪಾ ಯರಾಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಷಾ ಕಂದಕೂರ ಸ್ವಾಗತಿಸಿದರು. ಸಂಗೀತಾ ಬೇವೂರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts