More

    ವಿಪತ್ತು ನಿರ್ವಹಣೆಗೆ ಸರ್ವ ಸನ್ನದ್ದವಾಗಿರಿ; ಎಡಿಸಿ ಮಹಾದೇವ ಮುರಗಿ

    ವಿಜಯಪುರ: ಸಂಭವನೀಯ ವಿಪತ್ತು ನಿರ್ವಹಣೆಗೆ ಸರ್ವ ಸನ್ನದ್ಧವಾಗಿರುವಂತೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೂಚಿಸಿದರು.

    ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದ ವಿಕೋಪ ನಿರ್ವಹಣಾ ಯೋಜನೆ ವಿಜಯಪುರ ಹಾಗೂ ಕಂದಾಯ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ವಿಪತ್ತು ನಿರ್ವಹಣಾ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರಕೃತಿ ವಿಕೋಪಗಳನ್ನು ನಿರ್ವಹಿಸಲು ಮುಂಚಿತವಾಗಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಮಳೆಗಾಲದಲ್ಲಿ ಸಂಭವಿಸಬಹುದಾದ ಅತಿವೃಷ್ಟಿಯ ಕುರಿತು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ವಿಕೋಪಗಳ ಕುರಿತು ಸೂಕ್ತ ಅಧ್ಯಯನ ನಡೆಸಿ, ತುರ್ತು ಪರಿಹಾರೋಪಾಯಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂಬುದರ ಬಗ್ಗೆ ನೀಲಿನಕ್ಷೆ ಸಿದ್ಧವಾಗಿಟ್ಟುಕೊಂಡಿರಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ವ್ಯಾಪ್ತಿಯಲ್ಲಿರುವ ನದಿ, ಹಳ್ಳ, ಕೊಳ್ಳ , ಕೆರೆ ಸೇರಿದಂತೆ ಇವುಗಳ ಕುರಿತು ಸಮಗ್ರ ಮಾಹಿತಿ ಹೊಂದಿರಬೇಕು. ಇದರಿಂದ ಯೋಜನೆಗಳನ್ನು ರೂಪಿಸಲು ಅನೂಕೂಲವಾಗುತ್ತದೆ ಸಂಭವಿಸಬಹುದಾದ ವಿಕೋಪಗಳ ಸ್ಥಳಗಳ ಕುರಿತು ಮುಂಚಿತವಾಗಿಯೇ ಅರಿವು ಹೊಂದಿರಬೇಕು. ಯಾವುದೇ ಜೀವ-ಜಾನುವಾರುಗಳ ಹಾನಿ ಸಂಭವಿಸದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

    ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಸಂಯೋಜಕ ಡಾ.ಪರಮೇಶ ಜಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿ ಸಂಸ್ಥೆ ಪ್ರಾಂಶುಪಾಲ ಅಶೋಕ ಕಲಘಟಗಿ, ವಿ.ವಿ. ಕಮಲಾಪುರ, ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞ ರಾಜೇಶ ಜೈನಾಪುರ, ಪಿ.ಬಿ. ದಿವಾನಜಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts