More

    ಮೊಬೈಲ್‌ನಿಂದ ಮಕ್ಕಳ ಶಿಕ್ಷಣ ಹಾಳಾಗದಂತೆ ಎಚ್ಚರ ವಹಿಸಿ

    ಸುಂಟಿಕೊಪ್ಪ: ಕೊಡಗರಹಳ್ಳಿ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆ ವಾರ್ಷಿಕೋತ್ಸವ ಬುಧವಾರ ಆಯೋಜಿಸಲಾಗಿತ್ತು.


    ಭಾರತೀಯ ಎಜುಕೇಷನಲ್ ಸರ್ವೀಸ್ ಟ್ರಸ್ಟ್ ಕಾರ್ಯದರ್ಶಿ ರಂಜಿತ್ ಕಾರ್ಯಪ್ಪ ಮಾತನಾಡಿ, ಸಮರ್ಪಣಾ ಮನೋಭಾವದಿಂದ 16 ವರ್ಷಗಳಿಂದ ಶಾಲೆ ಉತ್ತಮ ಫಲಿತಾಂಶ ನೀಡುತ್ತಿದೆ ಎಂದು ಹೇಳಿದರು.


    ಮುಖ್ಯಶಿಕ್ಷಕಿ ಮೇರಿ ಫಾತೀಮಾ ಮಾತನಾಡಿ, ಮೊಬೈಲ್ ಗೀಳಿನಿಂದ ಮಕ್ಕಳ ವಿದ್ಯಾಭ್ಯಾಸ ಹಾಳಾಗದಂತೆ ಪಾಲಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.


    ಅಧ್ಯಕ್ಷತೆ ವಹಿಸಿದ್ದ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ.ಉತ್ತಯ್ಯ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಿದಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.


    ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು. ಎಜುಕೇಷನ್ ಸೊಸೈಟಿ ಟ್ರಸ್ಟಿಗಳಾದ ಟಾಟ್ಟು ಚಂಗಪ್ಪ, ಅನಿಲ್ ಪೊನ್ನಪ್ಪ, ಅಜಿತ್ ಅಪ್ಪಚ್ಚು, ಬಿ.ಡಿ.ಸುಭಾಷ್ ಇದ್ದರು. 30 ತಂಡಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts