More

    ಇಷ್ಟೊಂದು ಮಳೆಯಾಗುತ್ತಿದ್ದರೂ ಟ್ಯಾಂಕರ್​ನಲ್ಲಿ ಗಿಡಗಳಿಗೆ ನೀರುಣಿಸಬೇಕಾ?

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು ಇಂದು ಬೆಳಗ್ಗಿನಿಂದ ಉತ್ತಮ ಮಳೆಯಾಗುತ್ತಿದೆ. ಬಿಸಿಲ ಬೇಗೆಯಿಂದ ಧಣಿದಿದ್ದ ಬೆಂಗಳೂರಿನ ಜನತೆಗೆ ವರುಣ ದೇವ ತಂಪೆರೆದಿದ್ದಾನೆ. ನಗರದ ವಿವಿಧೆಡೆ ಮಳೆ ಸುರಿಯುತ್ತಿದೆ. ಹೀಗಿದ್ದರೂ ಬಿಬಿಎಂಪಿ ಗುತ್ತಿಗೆ ಟ್ಯಾಂಕರ್​ನ ಫೋಟೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

    ಇದನ್ನೂ ಓದಿ: ಹಿಂದು ಯುವತಿಯನ್ನು ಅಪಹರಿಸಿ ಮದುವೆಯಾದ 5 ಪತ್ನಿಯರ ಗಂಡ! ಈತನ ಮೇಲಿದೆ ಮತಾಂತರದ ಆರೋಪ

    ಬೆಂಗಳೂರಿನಲ್ಲಿ ಉತ್ತಮ ಮಳೆಯಾಗುತ್ತಿರುವ ನಡುವೆ, ಬಿಬಿಎಂಪಿ ಗುತ್ತಿಗೆ ಟ್ಯಾಂಕರ್​ ಮೂಲಕ ರಸ್ತೆ ಡಿವೈಡರ್​ನಲ್ಲಿ ನೆಟ್ಟಿರುವ ಹೂವಿನ ಗಿಡಗಳಿಗೆ ನೀರು ಹಾಕುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಗುತ್ತಿಗೆ ಟ್ಯಾಂಕರ್ ಕಾರ್ಯವನ್ನು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.

    ಫೋಟೋ ವೈರಲ್

    ಟ್ಯಾಂಕರ್​ನಲ್ಲಿ ರಸ್ತೆ ಮಧ್ಯದ ಹೂವಿನ ಗಿಡಗಳಿಗೆ ನೀರು ಹಾಕುತ್ತಿರುವುದನ್ನು ದೃಶ್ಯವನ್ನು ಕ್ಲಿಕ್ಕಿಸಿ ರೋಹನ್ ಕಾಮತ್ (@Rohan_Disco) ಎಂಬುವರು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋವನ್ನು ಶೇರ್‌ ಮಾಡಿ, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಈ ಅಚಾತುರ್ಯ ಸಂಭವಿಸಿದೆ.

    ರಾಜ್ಯದಲ್ಲಿ ನಿನ್ನೆಯಿಂದ ಉತ್ತಮ ಮಳೆಯಾಗುತ್ತಿದ್ದರೂ, ಬರಗಾಲದ ಭೀತಿ ಇದ್ದೇ ಇದೆ. ಈಗಾಗಲೇ ಬಹುತೇಕ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಮಟ್ಟ ತಗ್ಗಿದೆ. ಹೀಗಿರುವಾಗ ಒಂದು ಹನಿ ನೀರು ಕೂಡ ಪೋಲಾಗದಂತೆ ಕಾಪಾಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯೂ ಹೌದು. ಆದರೆ ಇಷ್ಟೊಂದು ಮಳೆ ಸುರಿಯುತ್ತಿದ್ದರೂ, ಟ್ಯಾಂಕರ್​ ಮೂಲಕ ರಸ್ತೆ ಡಿವೈಡರ್​ನಲ್ಲಿ ನೆಟ್ಟಿರುವ ಗಿಡಗಳಿಗೆ ನೀರುಣಿಸುತ್ತಾ, ಬೇಜವಾಬ್ದಾರಿ ಮೆರೆದಿರುವುದು ಇದೀಗ ಸಾಕಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts