More

    ಆಡಳಿತ ಹಿತದೃಷ್ಟಿಯಿಂದ ಬಿಬಿಎಂಪಿ ವಿಭಜಿಸಲು ಮುಂದಾದ ಸರ್ಕಾರ: ಸಮಿತಿ ರಚನೆ ಮಾಡಿ ಆದೇಶ

    ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯನ್ನು ವಿಭಜಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮಹತ್ವದ ಆದೇಶದ ಹೊರಡಿಸಿದೆ. ಬಿಬಿಎಂಪಿಯನ್ನು ಪುನರ್​ ರಚಿಸಲು ಸಮಿತಿಯನ್ನು ರಚಿಸಿದೆ.

    ಪಾಲಿಕೆಯ ಆಡಳಿತದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸುವುದು ಸೂಕ್ತವೆಂದು ಸರ್ಕಾರ ಪರಿಗಣಿಸಿದೆ. ವಿಭಜಿಸುವ ಮುನ್ನ ತಜ್ಞರ ಸಮಿತಿಯನ್ನು ನೇಮಿಸಿ, ತಜ್ಞರ ಸಮಿತಿಯಿಂದ ನಿಗಧಿತ ಕಾಲಮಿತಿಯೊಳಗೆ ವರದಿಯನ್ನು ಪಡೆದು, ವರದಿಯ ಆಧಾರದ ಮೇಲೆ ಸಾರ್ವಜನಿಕ ಸಲಹೆಯನ್ನು ಪಡೆದು ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡುವುದಾಗಿ ಸರ್ಕಾರ ತಿಳಿಸಿದೆ.

    ಇದನ್ನೂ ಓದಿ: ಕಾವೇರಿ 2.0ಗೆ ನೂರೆಂಟು ವರಿ: ಸ್ವೀಕೃತವಾಗದ ಆನ್​ಲೈನ್ ಪೇಮೆಂಟ್; ಹೆಸರು, ಫೋಟೋ, ಬೆರಳಚ್ಚು ಮಾಯ

    ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರನ್ನು ಒಳಗಂಡಂತೆ ಪುನರ್ ರಚನೆ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಬಿ.ಎಸ್. ಪಾಟೀಲ್, ಮಾಜಿ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಹಾಗೂ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಸದಸ್ಯ ರವಿಚಂದರ್ ಸಮಿತಿಯಲ್ಲಿದ್ದಾರೆ.

    ಸಮಿತಿಗೆ ಬೇಕಾಗುವ ಅಗತ್ಯ ಮಾಹಿತಿ ಒದಗಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸರ್ಕಾರ ಸೂಚನೆ ನೀಡಿದೆ. ಬಿಬಿಎಂಪಿ ಆಡಳಿತ ಹಿತದೃಷ್ಟಿಯಿಂದ ವಿಭಜಿಸಲು ಸರ್ಕಾರ ಮುಂದಾಗಿದೆ. ಗ್ರೇಟರ್ ಬೆಂಗಳೂರು ರಚನೆ, ವಲಯ ಸಂಖ್ಯೆ ಹೆಚ್ಚಳ ಸಂಬಂಧ ಸಮಿತಿ ವರಧಿ ಆಧರಿಸಿ ಸರ್ಕಾರ ತೀರ್ಮಾನ ಮಾಡಲಿದೆ. (ದಿಗ್ವಿಜಯ ನ್ಯೂಸ್​)

    ಕಾವೇರಿ 2.0ಗೆ ನೂರೆಂಟು ವರಿ: ಸ್ವೀಕೃತವಾಗದ ಆನ್​ಲೈನ್ ಪೇಮೆಂಟ್; ಹೆಸರು, ಫೋಟೋ, ಬೆರಳಚ್ಚು ಮಾಯ

    ಮನೇಲಿದ್ದ ದುಡ್ಡು-ವಸ್ತು ಹೆಂಡತಿ ತೆಗೆದುಕೊಂಡು ಹೋಗಿದ್ದಾಳೆ, ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts