More

    20ರಂದು ಆಯವ್ಯಯ ಮಂಡನೆಗೆ ಸಿದ್ಧತೆ ಬಜೆಟ್ ಗಾತ್ರ ಕಡಿತಕ್ಕೆ ಚಿಂತನೆ ಪಾಲಿಕೆ ಬಜೆಟ್​ನಲ್ಲಿ ರಸ್ತೆ, ವೃತ್ತ, ಕೆರೆ ಅಭಿವೃದ್ಧಿಗೆ ಒತ್ತು

    ಬೆಂಗಳೂರು: 2020-21ನೇ ಸಾಲಿನ ಬಿಬಿಎಂಪಿಯಲ್ಲಿ ಬಜೆಟ್ ಅನ್ನು ಮಾ.20ರಂದು ಮಂಡಿಸಲು ಸಿದ್ಧತೆ ನಡೆಸಲಾಗಿದ್ದು, ಕಳೆದ ಸಾಲಿಗಿಂತ ಕಡಿಮೆ ಮೊತ್ತದ ಆಯವ್ಯಯ ಚಿಂತನೆ ಮಾಡಲಾಗಿದೆ.

    ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಯಾದ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹೊಂದಿದೆ. ಸೆಪ್ಟೆಂಬರ್​ನಲ್ಲಿ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಪಾಲಿಕೆ ಹೆಚ್ಚು ಮೊತ್ತದ ಯೋಜನೆಗಳನ್ನುಘೋಷಣೆ ಮಾಡುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ನಿರೀಕ್ಷೆಯನ್ನು ಹುಸಿ ಮಾಡಿರುವ ಆಡಳಿತ ಪಕ್ಷ ವಾಸ್ತವಿಕ ಬಜೆಟ್ (ಕೆಲಸ ಹಾಗೂ ಕಾಮಗಾರಿಗಳಿಗೆ ವಾಸ್ತವವಾಗಿ ಖರ್ಚು ಮಾಡಲು ಸಾಧ್ಯವಿರುವಷ್ಟು ಹಣ) ಮಂಡಿಸುವ ಉದ್ದೇಶ ಹೊಂದಿದೆ.
    ಬಜೆಟ್ ಗಾತ್ರದ ನಿರೀಕ್ಷೆ?: 2029- 20ನೇ ಸಾಲಿನಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಪಿ. ಹೇಮಲತಾ ಒಟ್ಟು 10,688 ಕೋಟಿ ರೂ. ಬಜೆಟ್ ಮಂಡನೆ ಮಾಡಿದ್ದರು. ಆದರೆ ಈ ಬಾರಿ ಅದಕ್ಕಿಂತ ಕಡಿಮೆ ಬಜೆಟ್ ಮಂಡನೆ ಮಾಡಲು ತೀರ್ವನಿಸಲಾಗಿದ್ದು, ಸರಿಸುಮಾರು 10ರಿಂದ 10.5 ಸಾವಿರ ಕೋಟಿ ರೂ. ಬಜೆಟ್ ಸಿದ್ಧಪಡಿಸುವ ನಿರೀಕ್ಷೆಯಿದೆ. ಈ ಬಗ್ಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸದಸ್ಯರ ಜತೆಗೆ ರ್ಚಚಿಸಲಾಗಿದೆ ಎಂದು ಸಮಿತಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

    ರಸ್ತೆ, ವೃತ್ತ, ಕೆರೆಗಳಿಗೆ ಅಧಿಕ ಅನುದಾನ: ಮುಂದಿನ ಬಜೆಟ್​ನಲ್ಲಿ ಬೆಂಗಳೂರಿನ ಹೊರರಸ್ತೆಗಳು, ಸ್ವಾಗತ ಕಮಾನುಗಳು, ಪ್ರಮುಖ ವೃತ್ತಗಳು, ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಚಿಂತನೆಗಳು ವ್ಯಕ್ತವಾಗಿದೆ. ಕಳೆದ ವರ್ಷ ಕೆರೆಗಳ ಅಭಿವೃದ್ಧಿಗೆ 343 ಕೋಟಿ ರೂ. ಮೀಸಲಿಡಲಾಗಿತ್ತು. ಈ ಬಾರಿ 1,200 ಕೋಟಿ ರೂ.ಗಿಂತ ಅಧಿಕ ಹಣ ಮೀಸಲಿಡುವ ಸಾಧ್ಯತೆ ಇದೆ. ಪ್ರಸ್ತುತ (2019-20ನೇ ಸಾಲಿನ) ಆರ್ಥಿಕ ವರ್ಷದಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚು ಅನುದಾನ ಮೀಸಲಿಡಲಾಗಿತ್ತು. ವೈಟ್ ಟಾಪಿಂಗ್, ಸ್ವಚ್ಛತೆಗಾಗಿ ಘನತ್ಯಾಜ್ಯ ನಿರ್ವಹಣೆ ಹಾಗೂ ಕೆರೆಗಳ ಅಭಿವೃದ್ಧಿ ಸೇರಿ ಒಟ್ಟು 4 ಸಾವಿರ ಕೋಟಿ ರೂ.ಗಿಂತ ಅಧಿಕ ಹಣ ಮೀಸಲಿಡಲಾಗಿತ್ತು.

    7 ಸಾವಿರ ಕೋಟಿ ರೂ. ಬೇಡಿಕೆ: ರಾಜ್ಯ ಸರ್ಕಾರ ಮಾ.5ರಂದು ಬಜೆಟ್ ಮಂಡನೆ ಮಾಡುವ ಸಾಧ್ಯತೆಯಿದ್ದು, ಆಯುಕ್ತರ ಲೆಕ್ಕಾಚಾರದಂತೆ ಪಾಲಿಕೆಗೆ 7 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣಕಾಸು ಇಲಾಖೆ ಹೊಂದಿರುವ ಬಿಎಸ್​ವೈ ಬಜೆಟ್ ಮಂಡನೆ ಮಾಡಲಿದ್ದು, ತಮ್ಮ ಉಸ್ತುವಾರಿ ಜಿಲ್ಲೆಯಾದ ಬೆಂಗಳೂರು ನಗರದ ಅಭಿವೃದ್ಧಿಗೆ ಕೇಳಿದಷ್ಟು ಅನುದಾನ ನೀಡುವ ಸಾಧ್ಯತೆಯಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.

    ಪಾಲಿಕೆಯಲ್ಲಿ ಬೃಹತ್ ಗಾತ್ರದ ಸುಳ್ಳು ಬಜೆಟ್ ಮಂಡನೆ ಮಾಡುವುದಕ್ಕಿಂತ, ವಾಸ್ತವಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆ ಮಾಡುವುದು ಸೂಕ್ತ. ಆದ್ದರಿಂದ ಪಾಲಿಕೆಗೆ ವಾರ್ಷಿಕವಾಗಿ ಬರುವ ಎಲ್ಲ ಮೂಲಗಳ ಆದಾಯ ಮತ್ತು ರಾಜ್ಯ ಸರ್ಕಾರ ಕೊಡುವ ಅನುದಾನ ಗಮನದಲ್ಲಿ ಇಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗುವುದು.
    | ಎಲ್. ಶ್ರೀನಿವಾಸ್
    ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts