More

    ಬಿಬಿಎಲ್​ನಲ್ಲಿ ಅಫ್ಘಾನಿಸ್ತಾನದ ಲೆಗ್​ಸ್ಪಿನ್ನರ್​ ರಶೀದ್ ಹ್ಯಾಟ್ರಿಕ್

    ಅಡಿಲೇಡ್: ಅಫ್ಘಾನಿಸ್ತಾನದ ಲೆಗ್​ಸ್ಪಿನ್ನರ್ ರಶೀದ್ ಖಾನ್, ಬುಧವಾರ ಬಿಗ್ ಬಾಷ್ ಲೀಗ್​ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ನಡುವಿನ ಪಂದ್ಯದ ವೇಳೆ ಈ ಸಾಧನೆ ಮಾಡಿದರು.

    ಅಡಿಲೇಡ್ ಪರವಾಗಿ ಆಡುತ್ತಿರುವ ರಶೀದ್ ಖಾನ್, ಇನಿಂಗ್ಸ್​ನ 10ನೇ ಓವರ್​ನ ಕೊನೇ ಎರಡು ಎಸೆತಗಳಲ್ಲಿ ಹಾಗೂ 12ನೇ ಓವರ್​ನ ಮೊದಲ ಎಸೆತದಲ್ಲಿ ಕ್ರಮವಾಗಿ ಜೇಮ್ಸ್ ವಿನ್ಸ್(27), ಜೋರ್ಡನ್ ಸಿಲ್ಕ್ (16), ಜಾಕ್ ಎಡ್ವರ್ಡ್ಸ್ ವಿಕೆಟ್ ಉರುಳಿಸುವ ಮೂಲಕ ಈ ಸಾಧನೆ ಮಾಡಿದರು.

    ಆ ಮೂಲಕ ಬಿಗ್ ಬಾಷ್​ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡದ ಪರವಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಹಾಗೂ ಒಟ್ಟಾರೆ ಬಿಬಿಎಲ್​ನಲ್ಲಿ 5ನೇ ಹ್ಯಾಟ್ರಿಕ್ ಎನಿಸಿದೆ. ತಮ್ಮ ನಾಲ್ಕು ಓವರ್​ಗಳ ಕೋಟಾದಲ್ಲಿ 22 ರನ್​ಗೆ 4 ವಿಕೆಟ್ ಉರುಳಿಸಿದರೂ ತಂಡದ ಗೆಲುವಿಗೆ ಇದು ಸಾಕಾಗಲಿಲ್ಲ. ಅಡಿಲೇಡ್ ಸ್ಟ್ರೈಕರ್ಸ್ 2 ವಿಕೆಟ್​ಗಳಿಂದ ಸಿಡ್ನಿ ಸಿಕ್ಸರ್ಸ್​ಗೆ ಶರಣಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts