More

    ಜಗಜಟ್ಟಿಗಳ ಸೆಣಾಸಾಟಕ್ಕೆ ಪೂರ್ವ ಸಿದ್ಧತೆ

    ಹಗರಿಬೊಮ್ಮನಹಳ್ಳಿ: ಶ್ರೀವೆಂಕಟೇಶ್ವರ ಸ್ವಾಮಿ 67ನೇ ವರ್ಷದ ರಥೋತ್ಸವ ನಿಮಿತ್ತ ಫೆ.15ಮತ್ತು 16ರಂದು ಕುಸ್ತಿ ಪಂದ್ಯಾವಳಿಯನ್ನು ನಾಣೀಕೇರಿ ದೈವಸ್ಥರ ಸಮಿತಿ ಆಯೋಜಿಸಿದೆ ಎಂದು ಸಮಿತಿಯ ಪ್ರಮುಖರಾದ ಹುಳ್ಳಿ ಪ್ರಕಾಶ್ ತಿಳಿಸಿದರು.

    ಇದನ್ನೂ ಓದಿ: ಸೆಣಾಸಾಟ

    ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ತಾಲೂಕು ಕ್ರೀಡಾಂಗಣದಲ್ಲಿ ಸಿದ್ಧಗೊಳಿಸುತ್ತಿರುವ ಕುಸ್ತಿ ಅಖಾಡಾವನ್ನು ವಿಕ್ಷಿಸಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು.

    ಪಂದ್ಯಾವಳಿಗೆ ರಾಷ್ಟ್ರಮಟ್ಟದ ಕುಸ್ತಿಪಟರನ್ನು ಆಹ್ವಾನಿಸಲಾಗಿದೆ. ದೇಶವನ್ನು ವಿಶ್ವ ಕುಸ್ತಿಯಲ್ಲಿ ಪ್ರತಿನಿಧಿಸಿರುವ ಹರಿಯಾಣ ರಾಜ್ಯದ ವಿಕ್ಕಿ ಚಹರ್, ಅಂತರಾಷ್ಟ್ರೀಯ ಕುಸ್ತಿಪಟು ದೆಹಲಿಯ ಮೊನು ಪೈಲ್ವಾನ್, ಜ್ಯೂನಿಯರ್, ಸಿನಿಯರ್ ವಿಭಾಗದ ಕುಸ್ತಿಪಟು ಉತ್ತರ ಪ್ರದೇಶದ ಕರಣ್ ಕುಮಾರ್, ಪಂಜಾಬ್ ಕೇಸರಿ ವಿಜೇತ ಹ್ಯಾಪಿಸಿಂಗ್ ಬರಲಿದ್ದಾರೆ.

    ಎರಡು ದಿನಗಳ ಕಾಲ ಪೈಲ್ವಾನ್‌ರು ಕುಸ್ತಿ ಅಖಾಡದಲ್ಲಿ ಜಗಜಟ್ಟಿಗಳಾಗಿ ಸೆಣಾಸಾಟ ನಡೆಸಲಿದ್ದಾರೆ. ರಾಷ್ಟ್ರೀಯ ಕುಸ್ತಿಪಟುಗಳೊಂದಿಗೆ ಕರ್ನಾಟಕದ ಉದಯೋನ್ಮುಖ ಪೈಲ್ವಾನರಾದ ಕಲಬುರ್ಗಿ ಅಂಬರೀಷ್, ಬೆಳಗಾವಿ ಮುಬಾರಕ್, ದಾವಣಗೆರೆ ಶರತ್, ಶ್ರೀಶೈಲ್, ಕಿರಣ್, ಯಾದಗಿರಿ ಶರಣು, ಹರಪನಹಳ್ಳಿ ತಿಪ್ಪೇಶ್ ಸೇರಿ ನೂರಾರು ಪೈಲ್ವಾನರು ಗೆಲುವಿಗಾಗಿ ಕುಸ್ತಿ ಅಖಾಡಕ್ಕಿಳಿಯಲಿದ್ದಾರೆ ಎಂದರು.

    ಬೃಹತ್ ಅಖಾಡ ನಿರ್ಮಾಣ: ಎರಡು ದಿನಗಳ ಕುಸ್ತಿ ಪಂದ್ಯಾವಳಿಗಾಗಿ ಬೃಹತ್ ಕೆಂಪು ಮಣ್ಣಿನ ಅಖಾಡವನ್ನು ನಾಣಿಕೆರಿ ದೈವಸ್ಥರು ಸಿದ್ದಗೊಳಿಸಿದ್ದಾರೆ. ಹಿರಿಯ ಪೈಲ್ವಾನ್‌ರಾದ ಪ್ಲಂಬರ್ ಮಾರುತಿ, ಡ್ರೈವರ್ ಚಂದ್ರು ನೇತೃತ್ವದಲ್ಲಿ ಅಖಾಡ ತಯಾರಿ ಕಾರ್ಯಗಳು ಬಿರುಸುಗೊಂಡಿವೆ.

    ನಾಣಿಕೆರಿ ದೈವಸ್ಥರ ಸಮಿತಿ ಅಧ್ಯಕ್ಷ ಬಾರಿಕರ ಬಾಪೂಜಿ, ಕಾರ್ಯದರ್ಶಿ ಸೆರೆಗಾರ ಹುಚ್ಚಪ್ಪ, ಪ್ರಮುಖರಾದ ಎಚ್.ಪಿ.ಶಿವಶಂಕರಗೌಡ, ವಿ.ಸೋಮಣ್ಣ, ಉಪ್ಪಾರ ಪ್ರಕಾಶ, ಹುಗ್ಗಿ ಹುಲುಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts