More

    ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ ಬೋಧನೆಗಳು ಇಂದಿಗೂ ಪ್ರಸ್ತುತ

    ಮೈಸೂರು: ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ರಾಜ ವಂಶಸ್ಥ ಯದುವೀರ್ ಒಡೆಯರ್ ಹೇಳಿದರು.

    ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಅವರು ಮಾತನಾಡಿದರು. ಬಸವಣ್ಣನವರ ತತ್ವ-ಆದರ್ಶಗಳನ್ನು ಅನುಸರಿಸಿದರೆ ನಮ್ಮ ಬದುಕು, ನಮ್ಮ ಸಮಾಜ, ನಮ್ಮ ದೇಶ ಸ್ವರ್ಗವಾಗುತ್ತದೆ. ಆದ್ದರಿಂದ ಶರಣರ ಹಿತನುಡಿಗಳನ್ನು ಪಾಲಿಸುವುದು ಅವಶ್ಯವಾಗಿದೆ ಎಂದರು.

    ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ನೆಮ್ಮದಿಯಿಂದ, ಸಂತೃಪ್ತ್ತಿಯಿಂದ ಹಾಗೂ ಆತ್ಮಗೌರವದಿಂದ ಬದುಕಬೇಕು ಎನ್ನುವ ಆಶಯ ಬಸವಣ್ಣನವರದ್ದಾಗಿತ್ತು ಎಂದು ತಿಳಿಸಿದರು.

    ಈ ದೇಶದ ಸಂಪತ್ತು ಒಂದೇ ಕಡೆ ಕೇಂದ್ರೀಕೇತವಾಗಬಾರದು. ಶ್ರೀಮಂತರು ಶ್ರೀಮಂತರಾಗೇ, ಬಡವರು ಬಡವರಾಗೇ ಇರಬಾರದು. ಸಂಪತ್ತು ಸಮಾನಾಗಿ ಹಂಚಿಕೆಯಾಗಬೇಕು. ಸರ್ವರು ಸಮಾನತೆಯಿಂದ ಬದುಕಬೇಕು. ದೇಶದ ಸಂಪತ್ತು ಇರುವುದು ದೇಶದ ಜನರಿಗಾಗಿ ಎಂದು ಪ್ರತಿಪಾದಿಸಿದ ಬಸವಣ್ಣ ಸಮಾನತೆಯ ಹಕ್ಕಿಗಾಗಿ ಹೋರಾಟ ಮಾಡಿದರು ಎಂದರು.

    ದೇಶದ ಸಂಪತ್ತು,ರಾಜ್ಯದ ಸಂಪತ್ತು ಸಮೃದ್ಧಿಯಾಗಿರಬೇಕಾದರೇ ಭಂಡಾರ ಭದ್ರವಾಗಿರಬೇಕು. ಆದ್ದರಿಂದ ಪ್ರಾಮಾಣಿಕರಾಗಿರುವವರು ಭಂಡಾರದ ನೇತೃತ್ವವಹಿಸಿಕೊಳ್ಳಬೇಕು ಎಂದು ಬಸವಣ್ಣ ಪ್ರತಿಪಾದಿಸುತ್ತಿದ್ದ್ದರು. ಅಲ್ಲದೇ ರಾಜ್ಯದ ಕೆಲಸ ಮಾಡುವಾಗ ಮಾತ್ರ ಬಿಜ್ಜಳನ ಬೊಕ್ಕಸದ ಹಣವನ್ನು ಬಳಸುತ್ತಿದ್ದ ಬಸವಣ್ಣ, ತಮ್ಮ ಸ್ವಂತ ಕೆಲಸ ಮಾಡುವ ಸಮಯದಲ್ಲಿ ತಾವು ದುಡಿದ ಹಣವನ್ನು ಬಳಕೆ ಮಾಡುತ್ತಿದ್ದರು. ಇಂತಹ ಕಾಯಕ ನಿಷ್ಠೆೆಯ ಫಲದಿಂದಲೇ ಅವರು ವಚನ ಕ್ರಾಂತಿಯನ್ನು ಮಾಡುತ್ತಿದ್ದ ಸಮಯದಲ್ಲಿ ನಾ ಏಕೆ ಬಿಜ್ಜಳನಿಗೆ ಹೆದರಲಿ ಎಂದು ಧೈರ್ಯದಿಂದ ಹೇಳಿದ್ದರು. ಬಸವಣ್ಣನ ಪ್ರೇರೆಪಣೆಯಿಂದ ನೂರಾರು ಶರಣರು ಅಂದು ಸಾಮಾಜಿಕ ಕ್ರಾಂತಿಯನ್ನೇ ಉಂಟು ಮಾಡಿದರು ಎಂದರು.

    ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಶಾಸಕ ಟಿ.ಎಸ್.ಶ್ರೀವತ್ಸ, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ಕೌಟಿಲ್ಯ ರಘು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅನಿಲ್ ಥಾಮಸ್, ಮುಖಂಡರಾದ ಎನ್. ವಿ.ಫಣೀಶ್, ರಾಕೇಶ್ ಗೌಡ, ಶೈಲೇಂದ್ರ, ಬಿ.ಎಂ.ರಘು, ಕೇಬಲ್ ಮಹೇಶ್, ಎಚ್.ಜಿ.ಗಿರಿಧರ್, ಮಹೇಶ್ ಮಟವಡಿ, ಕಿರಣ್ ಗೌಡ, ಬಾಲು, ವಸಂತಕುಮಾರ್, ಜೋಗಿ ಮಂಜು, ಮಹೇಶ್ ರಾಜೇ ಅರಸ್, ಮೈ.ಪು .ರಾಜೇಶ್, ರೇಣುಕಾ ರಾಜು, ಮೋನಿಕಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts