More

    ಜಗತ್ತಿನ ಮೊಟ್ಟಮೊದಲ ಜನತಂತ್ರವಾದಿ: ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ

    ಹನ್ನೆರಡನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಚಳವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ತಮ್ಮ ವಚನಗಳ ಮೂಲಕ ಕಾಯಕ, ಸಮಾನತೆಯ ಮಹತ್ವವನ್ನು ಸಾರಿದವರು. ಅವರ ಜೀವನ-ಬೋಧನೆಗಳು ಹೇಗೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂಬುದನ್ನು ನಾಡಿನ ಅನೇಕ ಮಠಾಧೀಶರು, ಗಣ್ಯರು ‘ಬಸವ ಜಯಂತಿ’ಯ ಈ ಶುಭ ಸಂದರ್ಭದಲ್ಲಿ ವಿವರಿಸಿದ್ದಾರೆ.

    ಜಗತ್ತಿನ ಮೊಟ್ಟಮೊದಲ ಜನತಂತ್ರವಾದಿ

    ಭಾರತದ ಸಂವಿಧಾನ ರಚನೆಗೂ 800 ವರ್ಷಗಳ ಹಿಂದೆ, ಇಂಗ್ಲೆಂಡಿನಲ್ಲಿ ಜನತಂತ್ರದ ಬುನಾದಿಯಾಗುವುದಕ್ಕೆ ನೂರು ವರ್ಷಗಳ ಮುಂಚೆ, ಅಮೆರಿಕ ಮತ್ತು ಫ್ರಾನ್ಸ್​ನಲ್ಲಿ ಸಮಾಜವಾದಿ ಸರ್ಕಾರಗಳು ಅಸ್ತಿತ್ವಕ್ಕೆ ಬರುವುದಕ್ಕೆ 600 ವರ್ಷಗಳ ಮುಂಚೆ, ರಷ್ಯಾದಲ್ಲಿ ದುಡಿಯುವ ವರ್ಗಗಳಿಗೆ ಸ್ವಾತಂತ್ರ್ಯ ಸಿಗುವುದಕ್ಕೆ 800 ವರ್ಷಗಳ ಮುಂಚೆಯೇ ಬಸವಣ್ಣ ಜನತಂತ್ರ, ಸಮಾನತೆ, ಸ್ವಾತಂತ್ರ್ಯಸಮಾಜವಾದ, ಜಾತ್ಯತೀತತೆ, ಕಾಯಕಜೀವಿಗಳ ವೃತ್ತಿಘನತೆ, ಸಾಮಾಜಿಕ ನ್ಯಾಯ, ಕಲ್ಯಾಣ ರಾಜ್ಯ ಇವುಗಳನ್ನು ಒಳಗೊಂಡ ಸಂವಿಧಾನವನ್ನು 12ನೇ ಶತಮಾನದಲ್ಲಿಯೇ ಜನರಿಗೆ ತಿಳಿಸಿ ಜಾಗೃತಿಗೊಳಿಸಿ ಅನುಷ್ಠಾನಗೊಳಿಸಿದ್ದರು ಎಂಬುದು ನಿಜಕ್ಕೂ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಕನ್ನಡದ ಉಪನಿಷತ್ತುಗಳು ಎಂದೇ ನಾವು ಭಾವಿಸುವ ವಚನಗಳು ಶರಣರ ಸಂವಿಧಾನವನ್ನು ಅರುಹುತ್ತವೆ. ನಮ್ಮ ಇಂದಿನ ಸಂವಿಧಾನದ ಎಲ್ಲ ಆಶಯಗಳೂ ಅಂದೇ ಆ ವಚನಗಳಲ್ಲಿ ಸಾಕಾರಗೊಂಡಿವೆ. ನನ್ನ ದೃಷ್ಟಿಯಲ್ಲಿ ಜಗತ್ತಿನ ಮೊತ್ತಮೊದಲ ಜನತಂತ್ರವಾದಿ ಎಂದರೆ ಬಸವಣ್ಣ. ಹಾಗೆ ನೋಡಿದರೆ ಜನತಂತ್ರದ ವ್ಯಾಖ್ಯೆ ನೀಡಿದ ವ್ಯಕ್ತಿಯೂ ಬಸವಣ್ಣನವರೇ.

    | ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿ

    ಎಷ್ಟು ನಡೆದರೋ ಅಷ್ಟು ಮಾತ್ರ ನುಡಿದರು: ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts