More

    ಬಸವಣ್ಣನವರ ಸೆವೆನ್ ಕಮಾಂಡ್​ಮೆಂಟ್ಸ್​: ನಟ ರಮೇಶ್ ಅರವಿಂದ್

    ಹನ್ನೆರಡನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಚಳವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ತಮ್ಮ ವಚನಗಳ ಮೂಲಕ ಕಾಯಕ, ಸಮಾನತೆಯ ಮಹತ್ವವನ್ನು ಸಾರಿದವರು. ಅವರ ಜೀವನ-ಬೋಧನೆಗಳು ಹೇಗೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂಬುದನ್ನು ನಾಡಿನ ಅನೇಕ ಮಠಾಧೀಶರು, ಗಣ್ಯರು ‘ಬಸವ ಜಯಂತಿ’ಯ ಈ ಶುಭ ಸಂದರ್ಭದಲ್ಲಿ ವಿವರಿಸಿದ್ದಾರೆ.

    ಬಸವಣ್ಣನವರ ಸೆವೆನ್ ಕಮಾಂಡ್​ಮೆಂಟ್ಸ್​

    ಕೊಲಂಬಸ್ ಹೊರಟಿದ್ದು ಭಾರತಕ್ಕೆ. ಆದರೆ, ಆಕಸ್ಮಿಕವಾಗಿ ಅಮೆರಿಕಾ ಎಂಬ ಬೃಹತ್ ಖಂಡವೇ ಅವನಿಗೆ ಸಿಕ್ಕಿತು. ಅದೇ ತರಹ ನಾನು ಹೊರಟಿದ್ದು, ‘ಮಹಾಶರಣ ಹರಳಯ್ಯ’ ಎನ್ನುವ ಚಿತ್ರದಲ್ಲಿ ಬಸವಣ್ಣನವರ ಪಾತ್ರ ಮಾಡೋಕೆ. ಅವರ ಚರಿತ್ರೆ ಮತ್ತು ವಚನಗಳನ್ನು ಓದಿದಾಗ, ನನಗೆ ದೊಡ್ಡ ಸ್ಪೂರ್ತಿಯ ಲೋಕ ಸಿಕ್ಕಿತು. ಏಕೆಂದರೆ, ಅವರು ಹೇಳಿದ ಹಲವು ವಿಷಯಗಳು ಚಿತ್ರವನ್ನು ದಾಟಿ, ನನ್ನ ಜೀವನದಲ್ಲಿ ಈಗಲೂ ಸಹಾಯ ಆಗುತ್ತಿದೆ. ನನ್ನ ಪ್ರಕಾರ, ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ…’ ಎಂಬ ವಚನ ಸೆವೆನ್ ಕಮಾಂಡ್​ವೆುಂಟ್ಸ್ ಅಂದರೆ ತಪ್ಪಿಲ್ಲ. ಈ ಏಳು ಅಂಶಗಳನ್ನು ಪಾಲಿಸುವುದಷ್ಟೇ ಅಲ್ಲ, ನಮ್ಮ ಮಕ್ಕಳಿಗೆ ಈ ಏಳು ಅಂಶಗಳನ್ನು ಹೇಳಿಕೊಡಬೇಕು. ಜೀವನ ಪೂರ್ತಿ ಆ ಮಗು ಖುಷಿಯಾಗಿರುತ್ತದೆ. ಈ ಏಳು ಅಂಶಗಳಿಗಿಂತ ದೊಡ್ಡ ಮಾರಲ್ ಸೈನ್ಸ್ ಬುಕ್ ಬೇಕಾಗಿಲ್ಲ. ನಮ್ಮ ಏಳ್ಗೆಗೆ ಬೇಕಾಗಿರುವುದು ಈ ಏಳು ಸೂತ್ರಗಳು ಮಾತ್ರ. ನನಗೆ ಬಸವಣ್ಣನವರು ವೇದಾಂತಿಯಾಗಿ ಕಾಣುತ್ತಾರೆ, ಸಂಘಟಕರಾಗಿ ಕಾಣುತ್ತಾರೆ, ದಕ್ಷ ಮಂತ್ರಿಯಾಗಿ ಮತ್ತು ಒಬ್ಬ ನಾಯಕನಾಗಿ ಕಾಣುತ್ತಾರೆ. ಇದೆಲ್ಲದರ ಮಧ್ಯೆ ‘ಎನಗಿಂತ ಕಿರಿಯರಿಲ್ಲ…’ ಎನ್ನುತ್ತಾರೆ.ಪ್ರತಿಯೊಬ್ಬ ಮನುಷ್ಯನಿಗೂ ವಿನಯ ಇರಬೇಕು ಮತ್ತು ಎಲ್ಲರೂ ಶ್ರೇಷ್ಠರು ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಇರಬೇಕು. ಅದು ನಿಮ್ಮ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

    | ರಮೇಶ್ ಅರವಿಂದ್ ಹಿರಿಯ ನಟ

    ಜಗತ್ತಿನ ಮೊಟ್ಟಮೊದಲ ಜನತಂತ್ರವಾದಿ: ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts