More

    ಸಾಮೂಹಿಕ ವಿವಾಹಗಳಿಗೆ ನೂತನ ಕಲ್ಯಾಣ ಮಂಟಪ ವೇದಿಕೆಯಾಗಲಿ

    ಬಸವನಬಾಗೇವಾಡಿ: ಇಂದಿನ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರು ವಿವಾಹಕ್ಕೆ ಸಾಲ ಮಾಡಿ ತೀರಿಸಲು ಗುಳೆ ಹೋಗುವ ವಾತಾವರಣ ಕಂಡು ಬರುತ್ತಿದ್ದು, ಸಾಮೂಹಿಕ ವಿವಾಹಗಳಿಗೆ ನೂತನ ಕಲ್ಯಾಣ ಮಂಟಪ ವೇದಿಕೆ ಒದಗಿಸಲಿ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

    ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದ ನೂತನ ಕಲ್ಯಾಣ ಮಂಟಪ ಕಟ್ಟಡ ಕಾಮಗಾರಿಗೆ ಭೇಟಿ ನೀಡಿ ಮಾತನಾಡಿದ ಅವರು, ಜನಸಾಮಾನ್ಯರು ವಿವಾಹಗಳಿಗೆ ಕಷ್ಟಪಟ್ಟು ಹಣಕಾಸಿನ ಹೊಂದಾಣಿಕೆಯಲ್ಲಿ ತಲ್ಲೀನರಾಗಿ ನಂತರದಲ್ಲಿ ಸಾಲ ಮುಟ್ಟಿಸಲು ದುಡಿಮೆಗೆ ಗುಳೆ ಹೋಗುತ್ತಿರುವುದು ನೋವಿನ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳು ಬಡ ಕುಟುಂಬಗಳಲ್ಲಿ ನೆಮ್ಮದಿ ಮೂಡಿಸಲು ಸಹಾಯಕವಾಗಿವೆ ಎಂದರು.

    ನೂತನ ಕಲ್ಯಾಣ ಮಂಟಪ ಕಾಮಗಾರಿ ಭರದಿಂದ ಸಾಗಿದೆ. ಮುಂಬರುವ ದಿನಗಳಲ್ಲಿ ಯಾವುದೇ ಜಾತಿ, ಪಂಥ ಎಣಿಸದೆ ಸರ್ವ ಸಮಾಜಕ್ಕೂ ಅವಕಾಶ ಕಲ್ಪಿಸಲು ಮುಂದಾಗಬೇಕು. ಹಿರೇಮಠದ ಶ್ರೀಗಳ ಸಮಾಜಮುಖಿ ಕಾರ್ಯಕ್ಕೆ ಭಕ್ತ ಸಮೂಹವೂ ಕೈಜೋಡಿಸಬೇಕೆಂದರು.

    ಮನಗೂಳಿ ಹಿರೇಮಠದ ಸಂಗನಬಸವ ಮಹಾಸ್ವಾಮೀಜಿ, ಕೆಸರಟ್ಟಿ ಸೋಮಲಿಂಗ ಮಹಾರಾಜರು, ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಎಪಿಎಂಸಿ ನಿರ್ದೇಶಕ ವಿಶ್ವನಾಥಗೌಡ ಪಾಟೀಲ, ಎಪಿಎಂಸಿ ಮಾಜಿ ನಿರ್ದೇಶಕ ಬಸವರಾಜ ಸೋಂಪೂರ, ರಾಜೇಂದ್ರ ಪಾಟೀಲ, ಭೀಮಗೊಂಡ ಹತ್ತರಕಿ, ನಾಗಪ್ಪ ಬನ್ಹಟ್ಟಿ, ಗುರುಸಿದ್ದಪ್ಪ ತಪಶೆಟ್ಟಿ, ಮಹಾಂತಪ್ಪಗೌಡ ಗುಜಗೊಂಡ, ಬಸಪ್ಪ ಕೋಟಗೊಂಡ, ಸಂಗಪ್ಪ ಪದ್ಮಗೊಂಡ, ಮಹಾದೇವ ಮೆಂಡೆಗಾರ, ಮುದಕಪ್ಪ ಮಣ್ಣೂರ, ವೆಂಕಪ್ಪ ಬನ್ನೂರ, ಮಹಾಂತೇಶ ಮನಗೂಳಿ, ರವಿ ತಪಶೆಟ್ಟಿ, ಮಲ್ಲಪ್ಪ ಅರ್ಜಪ್ಪಗೋಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts