More

    ನೀರಿಗಾಗಿ ಕೂಡಲಸಂಗಮದಿಂದ ರಾಜಭವನಕ್ಕೆ ರೈತರ ಪಾದಯಾತ್ರೆ: ವೈಎಸ್​ವಿ ದತ್ತಾ ಘೋಷಣೆ

    ರಾಯಚೂರು: ರೈತರ ಹಿತಕ್ಕಾಗಿ ಪಾದಯಾತ್ರೆ ಮಾಡುವ ಅಗತ್ಯವಿದೆ. ದೇವೇಗೌಡರು ಅನುಮತಿ ನೀಡಿದ್ರೆ ನೀರಾವರಿ ಯೋಜನೆಗಾಗಿ ಪಾದಯಾತ್ರೆ ಮಾಡಲು ನಾವು ಸಿದ್ಧ ಎಂದು ಜೆಡಿಎಸ್​ನ ಹಿರಿಯ ನಾಯಕ ವೈಎಸ್​ವಿ ದತ್ತಾ ಘೋಷಿಸಿದರು.

    ದೇವದುರ್ಗದಲ್ಲಿ ಬುಧವಾರ ಆಯೋಜಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ವೈಎಸ್​ವಿ ದತ್ತಾ, ನೀರಾವರಿ ಯೋಜನೆಗಾಗಿ ಕೂಡಲಸಂಗಮದಿಂದ ರಾಜಭವನದವರೆಗೂ ಪಾದಯಾತ್ರೆ ‌ಮಾಡೋಣ. ಪಾದಯಾತ್ರೆಯನ್ನು ಉದ್ಘಾಟಿಸುವ ಅರ್ಹತೆಯಿರುವ ಏಕೈಕ ವ್ಯಕ್ತಿ ಮಾಜಿ ಪ್ರಧಾನಿ ದೇವೇಗೌಡ ಎಂದರು. ಇದನ್ನೂ ಓದಿರಿ ಜೇನುತುಪ್ಪದ ಬಾಟಲಿಗೆ ವಿಷದ ಚಿತ್ರ ಅಂಟಿಸಿದಂತೆ ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಿದ್ದರು…

    ಕೃಷ್ಣ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿ ಘೋಷಿಸಬೇಕು. ಎಸ್​ಎಲ್​ಪಿ ಅರ್ಜಿ ವಿಲೇವಾರಿ ಮಾಡಿ ಯೋಜನೆಯ ಲಾಭ ರೈತರಿಗೆ ತಲುಪುವಂತೆ ಮಾಡಬೇಕು ಎಂದ ವೈಎಸ್​ವಿ ದತ್ತಾ, ದೇವೇಗೌಡರು ಅನುಮತಿ ನೀಡಿದರೆ ನೀರಾವರಿ ಯೋಜನೆಗಾಗಿ ಕೂಡಲಸಂಗಮದಿಂದ ಬೆಂಗಳೂರಿನ ರಾಜ ಭವನದವರೆಗೆ ಪಾದಯಾತ್ರೆ ಮಾಡಲು ಎಲ್ಲ ರೈತರೂ ಸಿದ್ಧರಾಗೋಣ. ಬಸವಜಯಂತಿ ದಿನವೇ ಪಾದಯಾತ್ರೆ ಆರಂಭಿಸೋಣ. ಕೃಷ್ಣ ಮೇಲ್ದಂಡೆ ಯೋಜನೆಯ ಲಾಭ ರೈತರಿಗೆ ಸಿಗುವಂತೆ ಮಾಡಲು ಕೇಂದ್ರವನ್ನು ಆಗ್ರಹಿಸೋಣ ಎಂದರು.

    ಎಚ್​.ಡಿ.ದೇವೇಗೌಡ ಮಾತನಾಡಿ, ರಾಜ್ಯಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಕುರಿತು ಹೇಳುತ್ತೇನೆ. ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ, ವ್ಯವಸ್ಥೆ ಸರಿ ಇಲ್ಲ. ಉತ್ತಮ ಪಡಿಸಿಕೊಂಡು ಹೋಗುವುದು ಅವರಿಗೆ ಬಿಟ್ಟದ್ದು. ಮಹಾದಾಯಿ, ಕೃಷ್ಣಾ ಹಾಗೂ ಕಾವೇರಿ ನೀರನ್ನು ನಾನು ಇರೋವರೆಗೂ ವ್ಯರ್ಥ ಆಗಲು ಬಿಡುವುದಿಲ್ಲ ಎಂದರು. ನಿವೆಲ್ಲರೂ ಇರುವಾಗ ನಾನು ಧೃತಿಗೆಡುವುದಿಲ್ಲ ಎಂದರು.

    ನಮ್ಮತ್ರ ಹಣವಿಲ್ಲ, ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಹಾಕುತ್ತಿಲ್ಲ: ದೇವೇಗೌಡ

    ಜೇನುತುಪ್ಪದ ಬಾಟಲಿಗೆ ವಿಷದ ಚಿತ್ರ ಅಂಟಿಸಿದಂತೆ ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಿದ್ದರು…

    ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!

    ಛೇ, ಅದೆಂಥ ಅಸಹ್ಯ ಮಾತು ಹೇಳಿಬಿಟ್ಟೆ? ನೊಂದ ಪ್ರಿಯತಮೆ ಸತ್ತೇ ಹೋದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts