More

    ಕಡಸೂರು ಭಾಗದಲ್ಲಿ ವರದಾ ನದಿಗೆ ಬ್ಯಾರೇಜ್: ಮಧು ಬಂಗಾರಪ್ಪ

    ಸೊರಬ: ನೆರೆ ಪೀಡಿತ ಜಮೀನುಗಳನ್ನು ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

    ಬುಧವಾರ ಸಂಜೆ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಸೈದೂರು, ಕಾನಲೆ ತಾಲೂಕಿನ ತಟ್ಟಿಕೆರೆ, ಕಡಸೂರು, ಚಂದ್ರಗುತ್ತಿಯ ಜೋಳದಗುಡ್ಡೆ, ಬಂಕಸಾಣ ಮುಂತಾದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳೆ ಹಾನಿಗೊಳಗಾದ ಸಂತ್ರಸ್ತ ರೈತರಿಗೆ ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ. ಕೃಷಿ ಕಾರ್ಯಗಳಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅವಘಡಗಳಿಗೆ ತುತ್ತಾಗಿ ಸಾವನ್ನಪ್ಪಿದ ರೈತರಿಗೆ ಯಾವುದೇ ವಿಳಂಬ ಮಾಡದೆ ತಕ್ಷಣವೇ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
    ಪ್ರತಿವರ್ಷ ವರದಾ ನದಿ ಪಾತ್ರದಲ್ಲಿ ಇರುವ ಕಡಸೂರು, ತಟ್ಟಿಕೆರೆ, ಬಾಡದಬೈಲು, ಜೋಳದಗುಡ್ಡೆ ಮೊದಲಾದ ಗ್ರಾಮಗಳಲ್ಲಿ ಪ್ರವಾಹ ಎದುರಾಗಿ ಬೆಳೆ ನಷ್ಟವಾಗತ್ತದೆ. ಬೇಸಿಗೆಯಲ್ಲಿ ನೀರಿಲ್ಲದೆ ಬೆಳೆ ಹಾಳಾಗುತ್ತದೆ. ಇದರಿಂದ ಬೆಳೆ ಕೈಗೆ ಸಿಗದೆ ರೈತರು ಸಂಕಷ್ಟ ಎದುರಿಸುವಂತಾಗಿದೆ. ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯಲು ಒಂದು ಶಾಶ್ವತ ಪರಿಹಾರ ಕಂಡುಕೊಂಡಿದ್ದು ಸಾಗರ ತಾಲೂಕಿನ ತಾಳಗುಪ್ಪದವರೆಗೆ ಅನುಕೂಲವಾಗುವಂತೆ ಈಗಾಗಲೇ ಯೋಜನೆ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಬೇಸಿಗೆ ಕಾಲದಲ್ಲಿ ರೈತರ ನೀರಿನ ಸಮಸ್ಯೆ ಪರಿಹರಿಸಲು ಬೃಹತ್ ಹಾಗೂ ಸಣ್ಣ ನೀರಾವರಿ ಇಲಾಖೆಯೊಂದಿಗೆ ಚರ್ಚಿಸಿ ಕಡಸೂರು ಭಾಗದಲ್ಲಿ ಬ್ಯಾರೇಜ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸೊರಬ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡಲು ಯೋಜಿಸಲಾಗಿದೆ. ಶರಾವತಿ ನದಿಯಲ್ಲಿ ನೀರಿದ್ದು ನಮ್ಮ ಭಾಗಕ್ಕೆ ಹೇಗೆ ಕುಡಿಯುವ ನೀರು ತರಬೇಕು ಎಂಬುದರ ಬಗ್ಗೆ ಚಿಂತನೆ ನಡೆದಿದೆ. ಈಗಾಗಲೇ ಹಿರಿಯ ಇಂಜಿನಿಯರ್ ಜತೆ ಸಭೆ ಸಹ ಮಾಡಲಾಗಿದೆ. ಇವುಗಳಿಗೆ ಅನುದಾನ ಬೇಕು. ನಮ್ಮದೇ ಸರ್ಕಾರ ಇರುವುದರಿಂದ ಹೇಗಾದರು ಹೋರಾಟ ಮಾಡಿ ಅನುದಾನ ತರುತ್ತೆನೆ ಎಂದರು.
    ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಸೀಲ್ದಾರ್ ಹುಸೇನ್ ಸರಕಾವಸ್, ಇಒ ಪ್ರದೀಪ್, ಕೃಷಿ ಸಹಾಯಕ ನಿದೇರ್ಶಕ ಕೆ.ಜಿ.ಕುಮಾರ್, ಆರ್‌ಎಫ್‌ಒ ಜಾವೇದ್ ಅಂಗಡಿ ಬಾಷಾ, ಪ್ರಮುಖರಾದ ಎಚ್.ಗಣಪತಿ, ಎಂ.ಡಿ.ಶೇಖರ್, ಕೆ.ವಿ.ಗೌಡ, ಶ್ರೀಧರ ಹುಲ್ತಿಕೊಪ್ಪ, ಸತ್ಯನಾರಾಯಣ, ಆರ್.ಸಿ.ಪಾಟೀಲ್, ಕೆ.ಪಿ.ರುದ್ರಗೌಡ, ಸದಾನಂದ ಗೌಡ ಬಿಳಗಲಿ, ಜಗದೀಶ್ ಕುಪ್ಪೆ ಇತರರಿದ್ದರು.

    ರಾಜ್ಯದಲ್ಲಿ ಬಹುಮತದ ಸರ್ಕಾರವಿದೆ. ಹೈಜಾಕ್ ಮಾಡುವುದು ಹಲಸಿನ ಹಣ್ಣು ತಿಂದಷ್ಟು ಸುಲಭವಲ್ಲ. ಸರ್ಕಾರವನ್ನು ನೋಡಿ ಸಹಿಸಿಕೊಳ್ಳಲಾಗದೆ ಹೊಟ್ಟೆಕಿಚ್ಚಿನಿಂದ ಮಾತನಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ.
    ಮಧು ಬಂಗಾರಪ್ಪ,ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts