More

    ಸಂಪೂರ್ಣ ಬರಪಟ್ಟಿಗೆ ಸೇರಲಿ ಜಗಳೂರು ತಾಲೂಕು

    ಜಗಳೂರು: ತಾಲೂಕನ್ನು ಸಂಪೂರ್ಣ ಬರಪೀಡಿತ ಪಟ್ಟಿಗೆ ಸೇರಿಸುವಂತೆ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಡಿಕೆ ಮಳೆ ಕೊರತೆಯಿಂದ ಬೆಳೆ ಬಾಡಿವೆ. ಇಂತಹ ಪರಿಸ್ಥಿತಿಯಲ್ಲಿ ತಾಲೂಕನ್ನು ಮಧ್ಯಮ ಬರಪೀಡಿತ ಪಟ್ಟಿಗೆ ಸೇರಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

    ಶಾಸಕ ಬಿ.ದೇವೇಂದ್ರಪ್ಪ ಸಂಪೂರ್ಣ ಬರಪೀಡಿತ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ್ದಾರೆ. ಆದರೆ, ಉಪಗ್ರಹ ಆಧರಿತ ಸಮೀಕ್ಷೆ ಪ್ರಕಾರ ಜಿಲ್ಲಾಡಳಿತ ಮಧ್ಯಮ ಬರಪೀಡಿತ ತಾಲೂಕು ಎಂದು ಪರಿಗಣಿಸಿದೆ ಇದು ಸರಿಯಲ್ಲ ಎಂದರು.

    ಮೊದಲ ಹಂತದಲ್ಲಿ 116 ಸಂಪೂರ್ಣ ಬರಪೀಡಿತ, 2ನೇ ಹಂತದಲ್ಲಿ 86 ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಗಳೂರಿನ ಹೆಸರಿಲ್ಲ. ಪಕ್ಕದ ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಸಂಪೂರ್ಣ ಬರಪೀಡಿತ ಪಟ್ಟಿಗೆ ಸೇರಿವೆ. ಜಗಳೂರು ಕಡೆಗಣಿಸಿದ್ದರ ವಿರುದ್ದ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

    ಮಾಜಿಯಾದರೂ ಸುಮ್ಮನೆ ಕೂರಲ್ಲ: ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿವೆ. ನಾನು ಮಾಜಿಯಾದರೂ ಸುಮ್ಮನೆ ಕೂರುವುದಿಲ್ಲ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇನೆ. ಹಾಲಿ ಶಾಸಕ ಬಿ.ದೇವೇಂದ್ರಪ್ಪ ಅವರು ಹೆಚ್ಚು ಅನುದಾನ ತಂದು ಅಭಿವೃದ್ಧಿಪಡಿಸುವುದಾದರೆ ಅವರಿಗೆ ಸಹಕಾರ ನೀಡುತ್ತೇನೆ ಎಂದರು.

    ಕೆಲವರು ಶಾಸಕರ ಜತೆ ರಾಮಚಂದ್ರ ಅವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಯಾರ ಜತೆಗೂ ನನ್ನ ಹೊಂದಾಣಿಕೆ ಇಲ್ಲ. ಶಾಸಕರ ಕಾಲು ಎಳೆಯುವ ವ್ಯಕಿ ನಾನಲ್ಲ. ಅಭಿವೃದ್ಧಿ ಕೆಲಸಕ್ಕೆ ಪ್ರೋತ್ಸಾಹ ನೀಡುವೆ ಎಂದು ತಿಳಿಸಿದರು.

    ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಪಪಂ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಪಾಪಲಿಂಗಪ್ಪ, ದೇವರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts