More

    ಮತ್ತೆ ಮೂಡೂರು-ಪಡೂರು ಕಂಬಳ

    ಬಂಟ್ವಾಳ: ಕಾವಳಕಟ್ಟೆಯಲ್ಲಿ 10 ವರ್ಷ ಅದ್ದೂರಿಯಾಗಿ ನಡೆದು ಸ್ಥಗಿತಗೊಂಡಿದ್ದ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಇದೇ ಅವಧಿಯಲ್ಲಿ ನಡೆಯಲಿದೆ. ಇದು ‘ಬಂಟ್ವಾಳ ಕಂಬಳ’ವಾಗಿ ಮೂಡಿ ಬರಲಿದೆ ಎಂದು ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

    18 ವರ್ಷಗಳ ಬಳಿಕ ಕೂಡಿಬೈಲಿನಲ್ಲಿ ಮತ್ತೆ ಕಂಬಳ ಆರಂಭಿಸಲು ಸಮಯ ಕೂಡಿ ಬಂದಿದೆ. ಹಿಂದೆ ಕಾವಳಮೂಡೂರು ಮತ್ತು ಕಾವಳಪಡೂರು ಗ್ರಾಮಗಳಲ್ಲಿ ನಡೆಯುತ್ತಿದ್ದ ಕಂಬಳ ‘ಮೂಡೂರು-ಪಡೂರು’ ಕಂಬಳ ಎಂದೇ ಪ್ರಸಿದ್ಧಿಯಾಗಿತ್ತು. ಈಗ ದೇವಸ್ಯಮೂಡೂರು ಮತ್ತು ದೇವಸ್ಯಪಡೂರು ಗ್ರಾಮಗಳ ಪರಿಸರದಲ್ಲಿ ಕಂಬಳ ನಡೆಯುತ್ತಿರುವುದರಿಂದ ಅದೇ ಹೆಸರು ಉಳಿದುಕೊಂಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇದೇ ಸಾಲಿನಲ್ಲಿ ಕಂಬಳ ಆರಂಭಿಸುವ ನಿಟ್ಟಿನಲ್ಲಿ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ನೇತೃತ್ವದಲ್ಲಿ ಅತಿ ಕಡಿಮೆ ಅವಧಿಯಲ್ಲಿ 145 ಅಡಿ ಉದ್ದದ ಸುಸಜ್ಜಿತ ಜೋಡುಕರೆ ನಿರ್ಮಾಣಗೊಂಡಿದೆ ಎಂದು ರಮಾನಾಥ ರೈ ತಿಳಿಸಿದರು. ಇದಕ್ಕೆ ಇಲ್ಲಿನ ಸ್ಥಳೀಯ ಕೃಷಿಕರು ಮತ್ತು ಕಂಬಳಾಸಕ್ತರು ಕೈ ಜೋಡಿಸಿದ್ದಾರೆ. ಈ ಕಂಬಳ ಗದ್ದೆ ಹಿಂದು, ಮುಸ್ಲಿಂ ಮತ್ತು ಕ್ರೈಸ್ತರಿಗೆ ಸೇರಿದ್ದು, ಇದೊಂದು ‘ಸೌಹಾರ್ದ ಕಂಬಳ’ವಾಗಿಯೂ ಮೂಡಿ ಬರಲಿದೆ ಎಂದರು.

    ಮಾಜಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಗ್ರಾಪಂ ಅಧ್ಯಕ್ಷ ಉಮೇಶ್ ಕುಲಾಲ್, ಕಂಬಳ ಕೋಣಗಳ ಮಾಲೀಕ ಅವಿಲ್ ಮಿನೇಜಸ್, ಪ್ರಮುಖರಾದ ಮೆಲ್ವಿನ್ ಡಯಾಸ್, ಸುರೇಶ್ ಪೂಜಾರಿ ಜೋರ, ಕೆ.ಮಾಯಿಲಪ್ಪ ಸಾಲ್ಯಾನ್, ಫಾರೂಕ್, ವಿಜಯ್ ಕೋಟ್ಯಾನ್ ಅಲ್ಲಿಪಾದೆ, ವೆಂಕಪ್ಪ ಪೂಜಾರಿ, ಸುವರ್ಣ ಕುಮಾರ್ ಜೈನ್, ಪುಷ್ಪರಾಜ್, ಡೆಂಜಿಲ್ ನೊರೋನ್ಹಾ, ಸುಜಿತ್ ಜೈನ್, ದಿಲೀಪ್ ಫ್ರಾಂಕ್, ರೂಪೇಶ್, ಸಂತೋಷ್, ಪುರುಷೋತ್ತಮ ಸುದ್ದಿಗೋಷ್ಠಿಯಲ್ಲಿದ್ದರು.

    ಕೊನೆಯ ಕಂಬಳ: ಈ ವಾರ (ಏ.9) ವೇಣೂರು ಕಂಬಳ ನಡೆಯಲಿದ್ದು, ಈ ಸಾಲಿನ ಕೊನೆಯ ಕಂಬಳವಾಗಿ ಮೂಡೂರು-ಪಡೂರು ಕಂಬಳ ಹೊರಹೊಮ್ಮಲಿದೆ. ಏ.16 ಅಥವಾ 23ರಂದು ಈ ಕಂಬಳ ನಡೆಯುವ ಸಾಧ್ಯತೆಗಳಿವೆ. ಬಂಗಾಡಿ ಮತ್ತು ಪೈವಳಿಕೆ ಕಂಬಳಗಳು ಈ ಬಾರಿ ಕಾರಣಾಂತರಗಳಿಂದ ರದ್ದುಗೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts