More

    ಪಿಎಫ್‌ಐ ಕಾರ‌್ಯಕರ್ತರತ್ತ ಹದ್ದಿನಕಣ್ಣು: ಚಿತ್ರದುರ್ಗದಲ್ಲಿ ಎಡಿಜಿಪಿ ಅಲೋಕ್ ಹೇಳಿಕೆ

    ಚಿತ್ರದುರ್ಗ: ನಿಷೇಧಿತ ಸಂಘಟನೆ ಪಿಎಫ್‌ಐ ಕಾರ‌್ಯಕರ್ತರ ಮೇಲೆ ಸದಾ ಕಣ್ಣಿಟ್ಟಿರುತ್ತೇವೆ ಎಂದು ಎಡಿಜಿಪಿ ಅಲೋಕ್‌ಕುಮಾರ್ (ಕಾ.ಸು) ಹೇಳಿದರು.

    ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲೂ ಸಂಘಟನೆ ನಿಷೇಧಿಸಲಾಗಿದೆ. ಕಾರ‌್ಯಕರ್ತರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಮಾಯಕರಿಗೆ ತೊಂದರೆ ಕೊಡುವುದಿಲ್ಲ ಎಂದರು.

    ಆದರೆ, ಯಾರು ತರ‌್ಲೆ ಮಾಡುತ್ತಾರೋ ಅವರನ್ನು ಖಂಡಿತಾ ಮಟ್ಟ ಹಾಕುತ್ತೇವೆ. ಎನ್‌ಐಎ ಕರ್ನಾಟಕದಲ್ಲೂ ತನಿಖೆ ನಡೆಸಿರಬಹುದು, ನಮಗೆ ಮಾಹಿತಿ ಕೊಡುವುದಿಲ್ಲ ಎಂದು ಹೇಳಿದರು.

    ಪಿಎಎಫ್ ಕೆಂಗಣ್ಣಿಗೆ ಪೊಲೀಸರು ಗುರಿಯಾಗಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ವೃತ್ತಿ ಅಪಾಯ ಇದ್ದೇ ಇರುತ್ತದೆ. ರೌಡಿಗಳು,ನಕ್ಸಲರು, ಸಮಾಜಘಾತುಕ ಶಕ್ತಿಗಳಿಗೆ ಟಾರ್ಗೆಟ್ ಆಗಿರುತ್ತೇವೆ ಎಂದರು.

    ಮುರುಘಾ ಸ್ವಾಮೀಜಿ ಪ್ರಕರಣವನ್ನು ಸಿಬಿಐಗೆ, ಶಾಸಕರ ಹನಿಟ್ರಾೃಪ್ ಪ್ರಯತ್ನದ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂಬುದರ ಕುರಿತು ಪ್ರತಿಕ್ರಿಯಿಸುವುದಿಲ್ಲ. ಪೋಕ್ಸೋ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆದಿದೆ. ಒಂದನೇ ಕೇಸ್‌ನಲ್ಲಿ ತನಿಖೆ ಬಾಕಿಯೊಂದಿಗೆ ಜಾರ್ಜ್‌ಶೀಟ್ ಸಲ್ಲಿಸಲಾಗಿದೆ.

    ಇನ್ನು ಕೆಲವು ಸಾಕ್ಷಿಗಳ, ನೊಂದವರ ಹೇಳಿಕೆ ಆಗಬೇಕಿದೆ. ಒಡನಾಡಿ ಸಂಸ್ಥೆ ಪ್ರಮುಖರು, ಸಂತ್ರಸ್ತ ಬಾಲಕಿಯರ ಪಾಲಕರ ಜತೆ ಮಾತನಾಡಿದ್ದೇನೆ. ಮಾಹಿತಿ ಇದ್ದರೆ ತಿಳಿಸುವಂತೆ ಕೋರಿದ್ದು, ಪೋಕ್ಸೋ ಪ್ರಕರಣಗಳ ಸಮಗ್ರ ತನಿಖೆ ನಡೆಸಲಾಗುವುದು. ಸಾರ್ವಜನಿಕರ ಗಮನ ಸೆಳೆದಿರುವ ಚಿತ್ರದುರ್ಗದ ಶಾಸಕರ ಹನಿಟ್ರಾೃಪ್ ಪ್ರಕರಣದ ಮಾಹಿತಿಗಳನ್ನು ಕಲೆ ಹಾಕಲಾಗಿದೆ ಎಂದರು.

    ಸೈಬರ್ ಅಪರಾಧಗಳ ತಡೆಗೆ ಸಿಇಎನ್ ಠಾಣೆಗಳನ್ನು ಬಲಪಡಿಸುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಕರ್ನಾಟಕದಲ್ಲಿ ಗಾಂಜಾ ಹಾವಳಿ ಇದೆ. ಆಂಧ್ರಪ್ರದೇಶ, ತೆಲಂಗಾಣ, ಓಡಿಶಾದ ಗಡಿ ಭಾಗದಿಂದ ರಾಜ್ಯಕ್ಕೆ ಗಾಂಜಾ ಪೂರೈಕೆ ಆಗುತ್ತಿದ್ದು, ನಿಯಂತ್ರಿಸಬೇಕಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts