More

    ಕೃತಿಗಳ ರೂಪದಲ್ಲಿ ಬನ್ನಂಜೆ ಜೀವಂತ, ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಸಂಸ್ಮರಣೆ

    ಉಡುಪಿ: ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದಂತೆ ವಿಶೇಷ ವ್ಯಕ್ತಿಗಳಲ್ಲಿ ಭಗವಂತನಿರುತ್ತಾನೆ. ಬನ್ನಂಜೆಯವರಲ್ಲಿ ವ್ಯಾಸರೂಪಿ ಭಗವಂತನ ಸನ್ನಿಧಾನವಿತ್ತು. ತಾನು ತಿಳಿದಿದ್ದನ್ನು ಜನರಿಗೆ ಮನದಟ್ಟು ಮಾಡುವ ಕೌಶಲ ಅವರಿಗೆ ಸಿದ್ಧಿಸಿತ್ತು. ಕೃತಿಗಳ ರೂಪದಲ್ಲಿ ಅವರು ಜೀವಂತ ಇರುತ್ತಾರೆ ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

    ಕೃಷ್ಣ ಮಠದ ರಾಜಾಂಗಣದಲ್ಲಿ ಬನ್ನಂಜೆ ಗೋವಿಂದ ಆಚಾರ್ಯರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು, ಸಾಗರಕ್ಕೆ ಸಾಗರವೇ ಉಪಮೆ ಇದ್ದಂತೆ; ಅದೇ ರೀತಿ ಬನ್ನಂಜೆ ಉಪನ್ಯಾಸಕ್ಕೆ ಸಾಟಿಯಿಲ್ಲ. ಶಾಸ್ತ್ರೀಯ ವಿಚಾರಗಳನ್ನು ಕರಾರುವಕ್ಕಾಗಿ ಹೇಳುವ ಸಾಮರ್ಥ್ಯ ಬೆರಗುಮೂಡಿಸುವಂತದ್ದು ಎಂದರು.

    ಅಮೆರಿಕಕ್ಕೆ ಹೋಗಲು ಸಹಾಯ: ಪರದೇಶದಲ್ಲಿ ಮಧ್ವ ಮತ ಬಗ್ಗೆ ತಿಳಿವಳಿಕೆ ಮೂಡಿಸಲು ಬನ್ನಂಜೆ ಗೋವಿಂದಾಚಾರ್ಯರು ಸಮರ್ಥ ವ್ಯಕ್ತಿ ಎಂದು ಭಾವಿಸಿದ್ದ ನಮ್ಮ ಗುರುಗಳಾದ ವಿಬುಧೇಶ ತೀರ್ಥರು ಪ್ರಥಮ ಬಾರಿಗೆ ಅವರು ಅಮೆರಿಕಕ್ಕೆ ತೆರಳಲು ಧನ ಸಹಾಯ ಮಾಡಿದ್ದರು ಎಂದು ಶ್ರೀಗಳು ನೆನಪಿಸಿಕೊಂಡರು.

    ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಬನ್ನಂಜೆಯವರ ಶಿಷ್ಯ ವಿಜಯಸಿಂಹ ಆಚಾರ್ಯ ನುಡಿನಮನ ಸಲ್ಲಿಸಿದರು. ವಿದ್ವಾನ್ ಲಕ್ಷೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

    ಗೀತೆಯಲ್ಲಿ ಹೇಳಿದಂತೆ ಹಳೆ ಬಟ್ಟೆ ಕಳಚಿ ಹೊಸ ಬಟ್ಟೆ ತೊಟ್ಟಂತೆ ಈ ಶರೀರವನ್ನು ತೊರೆಯುವುದು ಸಹಜ. ಬನ್ನಂಜೆಯವರು ಇದೇ ಉಡುಪಿಯಲ್ಲಿ ಮತ್ತೆ ಹುಟ್ಟಿ ಬಂದು ಅರ್ಧದಲ್ಲಿ ನಿಲ್ಲಿಸಿದ ವ್ಯಾಖ್ಯಾನಗಳನ್ನು ಪೂರ್ತಿಗೊಳಿಸುವಂತಾಗಲಿ.
    – ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts