More

    ಬ್ಯಾಂಕ್, ಅಂಚೆ ವ್ಯವಸ್ಥೆ ಆರಂಭಿಸಿ

    ಉತ್ತರ ಕರ್ನಾಟಕ ಜನಸಂಗ್ರಾಮ ಪರಿಷತ್ ಪದಾಧಿಕಾರಿಗಳ ಒತ್ತಾಯ

    ಹಿರೇಬಾಗೇವಾಡಿ: ಗ್ರಾಮದಲ್ಲಿ ಬ್ಯಾಂಕ್ ಮತ್ತು ಅಂಚೆ ಕಚೇರಿ ಶೀಘ್ರ ಮರು ಪ್ರಾರಂಭಿಸಬೇಕು ಎಂದು ಉತ್ತರ ಕರ್ನಾಟಕ ಜನಸಂಗ್ರಾಮ ಪರಿಷತ್ ಬೆಳಗಾವಿ ಜಿಲ್ಲಾ ಕೇಂದ್ರ ಸಮಿತಿಯ ಪದಾಧಿಕಾರಿಗಳು ಮತ್ತು ವಿವಿಧ ಮುಖಂಡರು, ಈಚೆಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಅಂಗವಿಕಲರು, ವಿಧವೆಯರು, ವೃದ್ಧರು ಮಾಸಿಕ ಪಿಂಚಣಿ ಪಡೆಯಲು ಸಾಧ್ಯವಾಗುತ್ತಿಲ್ಲ. ಎಟಿಎಂ ಇದ್ದರೂ ಹಲವು ಕಡೆ ಅವು ಕಾರ್ಯ ನಿರ್ವಹಿಸುತ್ತಿಲ್ಲ. ಎಷ್ಟೋ ಜನ ಎಟಿಎಂ ಕಾರ್ಡ್ ಹೊಂದಿಲ್ಲ. ಹೊಂದಿದ್ದರೂ ಕೆಲವರು ಹಣ ತೆಗೆದುಕೊಡಲು ಬೇರೆಯವರನ್ನು ಅವಲಂಬಿಸಬೇಕಿದೆ. ಹೀಗಾಗಿ ಬ್ಯಾಂಕ್ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

    ಎಲ್ಲ ಉದ್ಯೋಗಗಳು ಸ್ಥಗಿತಗೊಂಡು ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಬ್ಯಾಂಕ್ ಮತ್ತು ಕಂಚೆ ಕಚೇರಿಗಳನ್ನಾದರೂ ತೆರೆದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಉದ್ಯೋಗ ಮತ್ತು ಸಂಬಳವಿಲ್ಲದೆ ನಷ್ಟ ಅನುಭವಿಸುತ್ತಿರುವವರಿಗೆ ನೆರವಾಗುತ್ತದೆ ಎಂದು ಮನವಿ ಮೂಲಕ ಸಚಿವರಿಗೆ ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಮಂಜುನಾಥ ವಸ್ತ್ರದ, ರೈತ ಮುಖಂಡ ಬಸವಣ್ಣೆಪ್ಪ ಗಾಣಗಿ, ಅನ್ವರ್ ದೇವಡಿ, ಸಂಜಯ ದೇಸಾಯಿ, ಪ್ರಭು ಬೂದಯ್ಯನವರಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts