More

    ಬ್ಯಾಂಕ್ ಮ್ಯಾನೇಜರ್‌ಗೆ 13 ಲಕ್ಷ ರೂ. ವಂಚಿಸಿದ ಸೈಬರ್ ಖದೀಮರು

    ಹಾವೇರಿ: ಖಾಸಗಿ ಬ್ಯಾಂಕ್ ಮ್ಯಾನೇಜರ್‌ವೊಬ್ಬರಿಗೆ ಪಾರ್ಸಲ್ ಬಂದಿರುವ ನೆಪದಲ್ಲಿ ಸೈಬರ್ ಖದೀಮರು ಬರೋಬ್ಬರಿ 13.15 ಲಕ್ಷ ರೂ. ವಂಚಿಸಿದ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
    ಇಲ್ಲಿಯ ಅಶ್ವಿನಿ ನಗರದ ನಿವಾಸಿ ಹಾಗೂ ಹುಬ್ಬಳ್ಳಿಯ ಖಾಸಗಿ ಫೈನಾನ್ಸ್ ಕಂಪನಿಯ ಮ್ಯಾನೇಜರ್ ವಿರುಪಾಕ್ಷಿ ವೀರಪ್ಪ ಶಿರಗಣ್ಣನವರ (43) ಮೋಸ ಹೋದವರು.
    ಇವರಿಗೆ ಫೋನ್ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ‘ನಾನು ಫೆಡೆಕ್ಸ್ ಕೋರಿಯರ್ ಕಂಪನಿಯಿಂದ ಕರೆ ಮಾಡಿದ್ದು, ನಿಮ್ಮ ಹೆಸರಿನಲ್ಲಿರುವ ಪಾರ್ಸೆಲ್ ಮುಂಬೈಯಿಂದ ತೈವಾನ್ ದೇಶದ ಲಿಯಾಂಗ್ ಅನ್ನುವ ವ್ಯಕ್ತಿಗೆ ಕಳಿಸುವ ಇಂಟರ್ ನ್ಯಾಷನಲ್ ಕೋರಿಯರ್ ಬುಕ್ ಆಗಿದೆ. ಅದು ಡೆಲಿವರಿ ಆಗದೆ ಮುಂಬೈ ಏರಪೋರ್ಟ್‌ನಲ್ಲಿ ಇಳಿದಿದೆ. ಅದರಲ್ಲಿ ಕ್ಲಾತ್, ಎಕ್ಸಪೈಡ್ ಪಾಸಪೋರ್ಟ, ಲ್ಯಾಪಟಾಪ್ ಹಾಗೂ 950 ಗ್ರಾಂ ಎಂಡಿಎಂಸಿ ಡ್ರಗ್ಸ್ ಇದೆ ಎಂದು ಹೇಳಿದ್ದಾನೆ. ಅಲ್ಲದೆ ಅದರ ವೆರಿಫಿಕೆಷನ್‌ಗಾಗಿ ವಿರುಪಾಕ್ಷಿ ಅವರ ಮೊಬೈಲ್‌ನಲ್ಲಿ ಸ್ಕೈಪ್ ಅಪ್ಲಿಕೇಷನ್ ಇನಸ್ಟಾಲ್ ಮಾಡಿಸಿ ಅದರ ಪಾಸ್‌ವರ್ಡ್ ತೆಗೆದುಕೊಂಡು ವಿವಿಧ ಖಾತೆಯಿಂದ 13.15 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts