More

    ಬಂಜಾರರು ನಿಷ್ಠೆಗೆ ಮಾದರಿ: ಶಾಸಕ ಅಶೋಕ ನಾಯ್ಕ

    ಶಿವಮೊಗ್ಗ: ಬಂಜಾರ ಸಮಾಜದವರು ನಿಷ್ಠೆ, ಪ್ರಾಮಾಣಿಕತೆಗೆ ಹೆಸರಾದವರು. ಆದರೆ ಬದಲಾದ ಕಾಲಘಟ್ಟದಲ್ಲಿ ನಮ್ಮ ಸಮಾಜದ ಯುವ ಜನಾಂಗ ಹಾದಿ ತಪ್ಪುತ್ತಿದೆ. ಇದಕ್ಕೆ ಸಾಕ್ಷರತೆ ಹಾಗೂ ತಿಳುವಳಿಕೆಯ ಕೊರತೆಯೇ ಕಾರಣ ಎಂದು ಶಾಸಕ ಕೆ.ಬಿ.ಅಶೋಕ ನಾಯ್ಕ ಅಭಿಪ್ರಾಯಪಟ್ಟರು.
    ನಗರದಲ್ಲಿ ಶಿವಮೊಗ್ಗ ತಾಲೂಕು ಬಂಜಾರ ಸಂಘದಿಂದ ಗುರುವಾರ ತಾಲೂಕಿನ ತಾಂಡಾಗಳ ನಾಯ್ಕ, ಡಾವ್, ಕಾರಭಾರಿ ಮತ್ತು ಪ್ರಮುಖರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ತಾಂಡಾಗಳಲ್ಲಿ ಸಮಸ್ಯೆಗಳನ್ನು ಅಲ್ಲಿನ ಪ್ರಮುಖರೇ ಕುಳಿತು ಬಗೆಹರಿಸುವುದು ನಮ್ಮ ವ್ಯವಸ್ಥೆ. ಯಾವ ಪ್ರಕರಣಗಳೂ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಬಂಜಾರ ಸಮುದಾಯದವರು ಸ್ವಾಭಿಮಾನಿಗಳು. ಆದರೆ ಇಂದು ಅನೇಕರು ದುಶ್ಚಟದಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಕೌಟುಂಬಿಕ ವ್ಯವಸ್ಥೆಯೂ ಹಾಳಾಗುತ್ತಿದೆ. ಈ ಹಂತದಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತಪ್ಪನ್ನು ತಿದ್ದಿಕೊಂಡು ಆತ್ಮಗೌರವ ಹಾಗೂ ಸಮಾಜದ ಗೌರವ ಕಾಪಾಡಿಕೊಳ್ಳಬೇಕಿದೆ ಎಂದರು.
    ಕೇವಲ ಕಾರ್ಯಕ್ರಮಗಳ ಆಯೋಜನೆ ಮಾತ್ರ ಬಂಜಾರ ಸಂಘದ ಕೆಲಸವಲ್ಲ. ಸಮಾಜಕ್ಕೆ ಅಗತ್ಯ ಮಾರ್ಗದರ್ಶನ ನೀಡಬೇಕು. ಒಳ್ಳೆಯ ದೃಷ್ಠಿಕೋನದಿಂದ ಕೆಲಸ ಮಾಡಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
    ಸೂರಗೊಂಡನಕೊಪ್ಪ ಭಾಯಗಡ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ರುದ್ರಪ್ಪ ಲಮಾಣಿ ಕಾರ್ಯಾಗಾರ ಉದ್ಘಾಟಿಸಿದರು. ಮಾಜಿ ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ತಾಲೂಕು ಬಂಜಾರ ಸಂಘದ ಗೌರವಾಧ್ಯಕ್ಷ ಕೆ.ಶಶಿಕುಮಾರ್, ಉಪಾಧ್ಯಕ್ಷ ಯು.ಕುಮಾರ ನಾಯ್ಕ, ನಾನ್ಯಾ ನಾಯ್ಕ, ಬಂಜಾರ ತಾಲೂಕು ಮಹಿಳಾ ಸಂಘದ ಅಧ್ಯಕ್ಷೆ ಧನುಬಾಯಿ, ಪಶುಪಾಲನಾ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ.ಇಂದ್ರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ತಾಲೂಕು ಬಂಜಾರ ಸಂಘದ ಅಧ್ಯಕ್ಷ ಎಚ್.ಡಿ.ಬಸವರಾಜ ನಾಯ್ಕ ಉಪಸ್ಥಿತರಿದ್ದರು.
    ಬಂಜಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಬಂಜಾರ ಸಮುದಾಯದ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts