More

    ಈ ಎಣ್ಣೆ ಜತೆ ಯಾವ ಎಣ್ಣೆಯನ್ನೂ ಮಿಕ್ಸ್​ ಮಾಡುವ ಹಾಗಿಲ್ಲ.. ಅ. 1ರಿಂದಲೇ ನಿಷೇಧ ಜಾರಿ..

    ನವದೆಹಲಿ: ಲೂಸ್​ ಸ್ವೀಟ್ಸ್​​ಗೂ ಟೈಟ್​ ರೂಲ್ಸ್​ ಮಾಡಿ, ಬಿಡಿಯಾಗಿ ಮಾರಾಟ ಮಾಡುವ ಸಿಹಿತಿಂಡಿಗಳ ಮೇಲೂ ‘ಬೆಸ್ಟ್​ ಬಿಫೋರ್ ಡೇಟ್’ ಪ್ರದರ್ಶಿಸಬೇಕು ಎಂದು ಆದೇಶ ಮಾಡಿರುವ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ಮತ್ತೊಂದು ಮಹತ್ವದ ಆದೇಶವೊಂದನ್ನು ಮಾಡಿದೆ.

    ವಿಶೇಷವೆಂದರೆ ಸ್ವೀಟ್​ಗಳ ಬಿಡಿ ಮಾರಾಟಕ್ಕೆ ಸಂಬಂಧಿಸಿದಂತೆ ಮಾಡಿದ ಆದೇಶದ ಹಾಗೆ ಇದನ್ನೂ ಅ. 1ರಿಂದಲೇ ಅನ್ವಯಿಸುವಂತೆ ಆದೇಶ ಹೊರಡಿಸಿದೆ. ಅಂದಹಾಗೆ ಈ ಹೊಸ ಆದೇಶ ಎಣ್ಣೆಗೆ ಸಂಬಂಧಿಸಿದ್ದು.

    ಎಣ್ಣೆಗಳ ಕಲಬೆರಕೆಯಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಎಫ್​ಎಸ್​ಎಸ್ಎಐ ಈ ನಿಯಮ ಜಾರಿಗೆ ತರಲು ಮುಂದಾಗಿದೆ. ಇದರ ಪ್ರಕಾರ, ಸಾಸಿವೆ ಎಣ್ಣೆಯೊಂದಿಗೆ ಬೇರೆ ಯಾವ ಎಣ್ಣೆಯನ್ನೂ ಬೆರೆಸಿ ಕಲಬೆರಕೆ ಮಾಡುವಂತಿಲ್ಲ. ಸಾಸಿವೆ ಎಣ್ಣೆಯೊಂದಿಗೆ ಬೇರೆ ಖಾದ್ಯತೈಲಗಳನ್ನು ಕಲಬೆರಕೆ ಮಾಡುತ್ತಿರುವುದನ್ನು ತಡೆಯಲು ಈ ಕ್ರಮಕೈಗೊಂಡಿದೆ.

    ಇದನ್ನು ಓದಿ: ಲೂಸ್​ ಸ್ವೀಟ್​ಗೂ ಟೈಟ್​ ರೂಲ್ಸ್​.. ಇದು ಸ್ವೀಟ್​ ಅಂಗಡಿಯವರಿಗೆ ಸಿಹಿ ಸುದ್ದಿನಾ?

    ಸಾಸಿವೆ ಎಣ್ಣೆಯಲ್ಲಿ ಉತ್ತಮ ಪೋಷಕಾಂಶಗಳಿದ್ದು, ಅದನ್ನು ಅಡುಗೆಗೂ ಬಳಸಲಾಗುತ್ತಿದೆ. ರೋಗನಿರೋಧಕ, ಡಿಟಾಕ್ಸಿಫಿಕೇಷನ್​, ತ್ವಚೆಗೆ ಸೌಂದರ್ಯ ನೀಡುವ ಶಕ್ತಿ ಹೊಂದಿರುವ ಸಾಸಿವೆ ಎಣ್ಣೆಯನ್ನು ಬಳಸುವಂತೆ ಹೃದ್ರೋಗ ತಜ್ಞರು, ಡಯೆಟಿಷನ್ಸ್​ ಕೂಡ ಶಿಫಾರಸು ಮಾಡುತ್ತಿದ್ದಾರೆ. ಈ ಹಿಂದೆ ಶೇ. 20 ಬೇರೆ ಎಣ್ಣೆಯನ್ನು ಸಾಸಿವೆ ಎಣ್ಣೆ ಜತೆ ಬೆರೆಸಲು ತೈಲ ಕಂಪನಿಗಳಿಗೆ ಅನುಮತಿ ಇತ್ತು. ಈಗ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅದಕ್ಕೆ ನಿಷೇಧ ಹೇರಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts