More

    ಸಾಮರಸ್ಯ ಬೆಳೆಸುವುದೇ ಧರ್ಮದ ಗುರಿ

    ಗದಗ: ಸಮುದಾಯದ ಹಿತಕ್ಕಾಗಿ ಎಲ್ಲ ಧರ್ಮಗಳು ಸಾಮರಸ್ಯ, ಸದ್ಭಾವನೆಗಳನ್ನು ಬೆಳೆಸುವ ಗುರಿ ಹೊಂದಿವೆ. ಅವರವರ ಧರ್ಮ ಅವರಿಗೆ ಶ್ರೇಷ್ಠವೆನಿಸಿದರೂ ಸಾಮಾಜಿಕ ಬದುಕಿನಲ್ಲಿ ಮಾನವ ಧರ್ಮ ಪಾಲನೆಯಿಂದ ಶಾಂತಿ-ಸಾಮರಸ್ಯ ನೆಲೆಗೊಳ್ಳಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಅಮೃತವಾಹಿನಿ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಲಿಂ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳ 38ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಧಾರ್ವಿುಕ ಮೌಲ್ಯಗಳ ಪುನರುತ್ಥಾನದಿಂದ ಸಮಾಜದಲ್ಲಿ ಉನ್ನತಿ ಕಾಣಲು ಸಾಧ್ಯವಾಗುತ್ತದೆ. ಯುಗಪುರುಷ ಲಿಂ. ವೀರಗಂಗಾಧರ ಜಗದ್ಗುರುಗಳು ಮಾನವ ಧರ್ಮದ ಅಭ್ಯುದಯಕ್ಕಾಗಿ ನಿರಂತರ ಶ್ರಮಿಸಿದರು ಎಂದರು. ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬದುಕಿನ ಶ್ರೇಯಸ್ಸಿಗೆ ಗುರು ಮತ್ತು ಗುರಿ ಬೇಕು. ಇವೆರಡನ್ನು ಅನುಸರಿಸಿ ಬಾಳಿದರೆ ಯಾವುದರ ಭಯವಿಲ್ಲ. ಲಿಂ.ವೀರಗಂಗಾಧರ ಜಗದ್ಗುರುಗಳು ಧಮೋದ್ಧಾರಕ್ಕಾಗಿಯೇ ಅವತರಿಸಿ ಬಂದ ಮಹಾತ್ಮರು. ಇಷ್ಟಲಿಂಗ ಮಹಾಪೂಜೆ ಮೂಲಕ ಸಂಸ್ಕಾರ-ಸದ್ವಿಚಾರಗಳನ್ನು ಬೆಳೆಸುವ ಬಹು ದೊಡ್ಡ ಕೆಲಸ ಮಾಡಿದರು ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ಸಂದೇಶ ಸಾರಿದ ವೀರಗಂಗಾಧರ ಜಗದ್ಗುರುಗಳ ನುಡಿ ಸರ್ವರ ಕಾಲಕ್ಕೂ ಪ್ರಸ್ತುತ. ಜಾತ್ಯತೀತ ಮನೋಭಾವ ಮೂಡಿಸುವ ಈ ಸಂದೇಶ ಸಂವಿಧಾನದ ಆಶಯವನ್ನು ಎತ್ತಿದಂತಾಗಿದೆ ಎಂದು ಅವರು ಹೇಳಿದರು.

    ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿ.ಎಫ್. ದಂಡಿನ, ಆಶುಕವಿ ರಾಮಣ್ಣ ಬ್ಯಾಟಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ನೂತನ ಅಧ್ಯಕ್ಷ ಆನಂದ ಪೊತ್ನೀಸ್, ಗೌರವ ಕಾರ್ಯದರ್ಶಿ ವೀರೇಶ ಕೂಗು, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ ಅವರು ಶ್ರೀಗಳಿಂದ ಗುರುರಕ್ಷೆ ಪಡೆದರು. ಸುಳ್ಳದ ಶಿವಸಿದ್ಧರಾಮ ಸ್ವಾಮೀಜಿ, ಶಕುಂತಲಾ ದಂಡಿನ ಮತ್ತಿತರರು ಇದ್ದರು. ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರ ಟ್ರಸ್ಟಿನ ಕಾರ್ಯಾಧ್ಯಕ್ಷ ಸೋಮಣ್ಣ ಮಲ್ಲಾಡದ ಅಧ್ಯಕ್ಷತೆ ವಹಿಸಿದ್ದರು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಶಿಗ್ಲಿ ಸ್ವಾಗತಿಸಿದರು. ಪ್ರಕಾಶ ಬೇಲಿ ನಿರೂಪಿಸಿದರು.<

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts