More

    ಜಿಕೆವಿಕೆಯಲ್ಲಿ ಬೇಕರಿ ಇನ್‌ಕ್ಯೂಬೇಷನ್ ಘಟಕ ಸ್ಥಾಪನೆ

    ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ತನ್ನ ಬೇಕರಿ ಘಟಕ ಮೂಲಕ ಸ್ವಯಂಉದ್ಯೋಗ ಕೈಗೊಳ್ಳುವವರಿಗೆ ತರಬೇತಿ ಹಾಗೂ ಆವಿಷ್ಕಾರದ ಚಟುವಟಿಕೆಗೆ ಸೌಲಭ್ಯ ಒದಗಿಸಲು ಬೇಕರಿ ಇನ್‌ಕ್ಯೂಬೇಷನ್ ಘಟಕವನ್ನು ಸ್ಥಾಪನೆ ಮಾಡಿದೆ.

    ಇದಕ್ಕಾಗಿಯೇ ಹೊಸ ಕಟ್ಟಡವನ್ನು ನಿರ್ಮಿಸಿದ್ದು, ಇಲ್ಲಿ ತರಬೇತಿ ಜತೆ ಜತೆಗೆ ಬೇಕರಿ ನವೋದ್ಯಮಿಗಳು ಹಾಗೂ ಆಸಕ್ತ ಬೇಕರಿ ನಡೆಸುವ ಕಿರು ಉದ್ದಿಮೆದಾರರಿಗೆ ನೆರವಾಗುವ ಸೌಲಭ್ಯಗಳನ್ನು ಒದಗಿಸಲಾಗಿದೆ. ಇಲ್ಲಿ ಬೇಕರಿ ಉತ್ಪನ್ನಗಳ ತಯಾರಿ ಹಾಗೂ ಮೌಲ್ಯವರ್ಧಿತ ಕಾರ್ಯಕ್ಕೆ ಇಂಬು ನೀಡಲಾಗುತ್ತದೆ. ಸ್ವಂತ ಉದ್ಯಮ ಆರಂಭಿಸುವವರಿಗೆ ತರಬೇತಿಯೊಂದಿಗೆ ಇನ್‌ಕ್ಯೂಬೇಷನ್ ಘಟಕದಲ್ಲಿರುವ ವಿವಿಧ ಉಪಕರಣಗಳನ್ನು ಬಳಸಿಕೊಳ್ಳಲು ಅವಕಾಶ ಸಿಗಲಿದೆ. ಜತೆಗೆ ಎಲೆಕ್ಟ್ರಾನಿಕ್ ಯಂತ್ರಗಳನ್ನು ಕಡಿಮೆ ದರದಲ್ಲಿ ಬಾಡಿಗೆಗೂ ಲಭ್ಯವಿರಲಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ಯಾಂಡ್‌ವಿಚ್ ಸಹಿತ ಇತರ ಪದಾರ್ಥಗಳ ತಯಾರಿಕೆಯ ಪ್ರಾತ್ಯಕ್ಷಿಕೆ ಹಾಗೂ ಮಹಿಳೆಯರಿಗೆ ‘ಬೇಕ್ ್ರಂ ಹೋಂ’ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ ತಿಳಿಸಿದರು.

    18ರಂದು ದೇಸಿ ಸಮ್ಮೇಳನ:

    ಕೃಷಿ ಬೆಳೆಗಳಿಗೆ ಪೂರಕವಾದ ಔಷಧ ಮಾರಾಟ ಮಳಿಗೆಗಳನ್ನು ಆರಂಭಿಸುವವರಿಗಾಗಿ ಡಿಪ್ಲೊಮಾ ಕೋರ್ಸ್ ಪೂರೈಸಿರುವುದಕ್ಕೆ ಪರವಾನಗಿ ನೀಡುವ ಹಾಗೂ ಅಂತಹವರಿಗೆ ಮಾರ್ಗದರ್ಶನ ಮಾಡುವ ಉದ್ದೇಶದಿಂದ ಬುಧವಾರ (ಅ.18) ‘ದೇಸಿ ಸಮ್ಮೇಳನ’ವನ್ನು ಏರ್ಪಡಿಸಲಾಗಿದೆ. ಇದೇ ವೇಳೆ ಬೇಕರಿ ವಿಭಾಗದ ನೂತ ಕಟ್ಟಡದ ಲೋಕಾರ್ಪಣೆ ನಡೆಯಲಿದೆ. ಜಿಕೆವಿಕೆಯ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಅಂದು ನಡೆಯಲಿರುವ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಎನ್. ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ ಮತ್ತಿತರರು ಭಾಗವಹಿಸುವರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಡಾ. ಎಸ್.ವಿ. ಸುರೇಶ, ಕಷಿ ಇಲಾಖೆ ಹಾಗೂ ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ನಿರ್ವಹಣಾ ಸಂಸ್ಥೆ (ಮ್ಯಾನೇಜ್) ಸಹಯೋಗದಲ್ಲಿ ದೇಸಿ ಸಮ್ಮೇಳನವನ್ನು ಸಂಘಟಿಸಲಾಗಿದೆ. ದಕ್ಷಿಣ ಕರ್ನಾಟಕದ 16 ಜಿಲ್ಲೆಗಳ ಕೃಷಿ ಪರಿಕರ ಮಾರಾಟಗಾರರಿಗೆ ಒಂದು ವೇದಿಕೆಯನ್ನು ಕಲ್ಪಿಸಲಿರುವ ಈ ಕಾರ್ಯಕ್ರಮದಲ್ಲಿ ಅಂದಾಜು 3,000 ಕಷಿ ಪರಿಕರ ಉದ್ದಿಮೆದಾರರು ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನದಲ್ಲಿ ವಸ್ತುಪ್ರದರ್ಶನ, ವಿಚಾರ ವಿನಿಮಯ, ವಿಸ್ತರಣಾ ಕಾರ್ಯಕರ್ತರ ಯಶೋಗಾಥೆಗೂ ಅವಕಾಶ ಕಲ್ಪಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts