More

    ‘ಮನೆ ಮನೆಗೆ ರಂಗಾಯಣ, ಮನ ಮನಕ್ಕೆ ಬಹುರೂಪಿ’ಗೆ ಚಾಲನೆ

    ಮೈಸೂರು: ಮಾ. 11ರಿಂದ 20ರವರೆಗೆ ನಡೆಯಲಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಪ್ರಚಾರಾಂದೋಲನದ ಅಂಗವಾಗಿ ರಂಗಾಯಣ ಆಯೋಜಿಸಿರುವ ‘ಮನೆ ಮನೆಗೆ ರಂಗಾಯಣ, ಮನ ಮನಕ್ಕೆ ಬಹುರೂಪಿ’ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ದೊರೆಯಿತು.


    ರಾಮಕೃಷ್ಣನಗರದ ಅಪರ ಜಿಲ್ಲಾಧಿಕಾರಿ ವಸತಿಗೃಹದ ಬಳಿ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಲಾವಣಿ ವಾದ್ಯ ನುಡಿಸುವ ಮೂಲಕ ಚಾಲನೆ ನೀಡಿದರು. ಬಳಿಕ ರಂಗಾಯಣ ವತಿಯಿಂದ ಡಾ.ಬಿ.ಎಸ್.ಮಂಜುನಾಥಸ್ವಾಮಿ ಅವರನ್ನು ಬಹುರೂಪಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.


    ಮಂಜುನಾಥಸ್ವಾಮಿ ಮಾತನಾಡಿ, ಮನೆ ಮನೆಗೆ ರಂಗಾಯಣ ಹೊಸ ಕಲ್ಪನೆ. ಇದು ಆಪ್ತತೆಯನ್ನು ಮೂಡಿಸುತ್ತದೆ. ಒಂದು ಸಂಸ್ಥೆಯ ಕಾರ್ಯಕ್ರಮವನ್ನು ಜನರ ಮನ ಮನಕ್ಕೆ ಮುಟ್ಟಿಸುವ ಸಾಂಸ್ಕೃತಿಕ ಕಲ್ಪನೆ ಸೊಗಸಾಗಿದೆ. ನಾವೆಲ್ಲರೂ ಬಹುರೂಪಿ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸೋಣ. ಜಿಲ್ಲಾಡಳಿತ ಈ ಉತ್ಸವಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.


    ಗದಗಿನ ವೀರಣ್ಣ ಲಾವಣಿ ತಂಡದ ಕಲಾವಿದರು ತಾಯಿ ಬಗ್ಗೆ ಲಾವಣಿ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಇತರರಿದ್ದರು.
    ಬಳಿಕ ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು ಕುವೆಂಪುನಗರದ ಅವರ ನಿವಾಸದಲ್ಲಿ ಸ್ವಾಗತಿಸಲಾಯಿತು. ಸಾಹಿತಿ, ವಿಮರ್ಶಕ ಪ್ರಧಾನ ಗುರುದತ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts