More

    ಕಲರ್ಸ್ ಕನ್ನಡದಲ್ಲಿ ಬಾಹುಬಲಿ: ನ. 15ರ ಸಂಜೆ 4.30ಕ್ಕೆ ಪ್ರಸಾರ

    ಬೆಂಗಳೂರು : ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರವು ಮಹೋನ್ನತ ದೃಶ್ಯಕಾವ್ಯಗಳಲ್ಲೊಂದು. ದೃಶ್ಯಕಾವ್ಯವೇನೋ ಸರಿ, ಅದು ಶ್ರಾವ್ಯಕಾವ್ಯವೂ ಆಗಬೇಕೆಂದರೆ ಮಾತುಗಳೂ ನಮ್ಮ ಕನ್ನಡದಲ್ಲಿ ಇರಬೇಕಲ್ಲವೆ? ಇದೀಗ ಕಲರ್ಸ್ ಕನ್ನಡ ಆ ಕೆಲಸ ಮಾಡಿದೆ. ಇದೇ ನವೆಂಬರ್ 15ರಂದು ಬಾಹುಬಲಿಯ ಮೊದಲ ಭಾಗವನ್ನು ನೀವು ಕನ್ನಡದಲ್ಲಿ ನೋಡಬಹುದು. ಅದೂ ನಿಮ್ಮ ಮನೆಯಲ್ಲೇ ಕೂತು.

    ‘ಬಾಹುಬಲಿ’ ತಾಂತ್ರಿಕವಾಗಿ ಭಾರತೀಯ ಸಿನಿಮಾಗಳಿಗೆ ಹೊಸ ಬಾಗಿಲು ತೆರೆದ ಸಿನಿಮಾ. ಭಾರತೀಯ ಸಿನಿಮಾ ಮಾರುಕಟ್ಟೆಗೆ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ ಸಿನಿಮಾ. ಅಮ್ಮ ಮಕ್ಕಳ ಸಂಬಂಧ, ದಾಯಾದಿಗಳ ವೈಮನಸ್ಸು, ಒಡೆಯ-ಸೇವಕನ ನಂಟುಗಳೆಲ್ಲವನ್ನೂ ಕನಸಿನಂಥಾ ಕ್ಯಾನ್ವಾಸ್​ನಲ್ಲಿ ಬಿಡಿಸಿಟ್ಟ ಚಿತ್ರವಿದು. ಮೂಲತಃ ತೆಲುಗಿನಲ್ಲಿ ತಯಾರಾದ ಈ ಚಿತ್ರ ನಂತರ ತಮಿಳು, ಹಿಂದಿ ಸೇರಿದಂತೆ ಬೇರೆ ಭಾಷೆಗಳಿಗೂ ಡಬ್ ಆಗಿತ್ತು. ಇದೀಗ, ಕನ್ನಡಕ್ಕೂ ಈ ಚಿತ್ರ ಡಬ್ ಆಗಿ ಪ್ರಸಾರವಾಗಲಿದೆ.

    ಈ ಕುರಿತು ಮಾತನಾಡುವ ವಯಾಕಾಂ 18ನ ಕನ್ನಡ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್, ‘ಈ ಚಿತ್ರದ ಸಂಭಾಷಣೆಯನ್ನ ತುಂಬ ನಾಜೂಕಾಗಿ ಕನ್ನಡಕ್ಕೆ ತಂದಿದ್ದೇವೆ. ಕತೆಯ ಭಾವ ಮುಕ್ಕಾಗದಂತೆ ಮಾತುಗಳನ್ನು ಕನ್ನಡಕ್ಕೆ ಒಗ್ಗಿಸಲು ಶ್ರಮವಹಿಸಿದ್ದೇವೆ’ ಎನ್ನುತ್ತಾರೆ. ಅಂದಹಾಗೆ, ಇದೇ ನವೆಂಬರ್ 15ರಂದು ಸಂಜೆ 4.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಚಿತ್ರ ಪ್ರಸಾರವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts