More

    ಬಾಗಲಕೋಟೆಗೆ ಬಂದಿಳಿದ 156 ಕೂಲಿ ಕಾರ್ಮಿಕರು

    ಬಾಗಲಕೋಟೆ: ಕೂಲಿಗಾಗಿ ವಲಸೆ ಹೋಗಿದ್ದ 156 ಕಾರ್ಮಿಕರು ಮರಳಿ ತವರು ಜಿಲ್ಲೆ ಬಾಗಲಕೋಟೆಗೆ ಗುರುವಾರ ಬಸ್‌ನಲ್ಲಿ ಬಂದಿಳಿದರು.

    ಮಂಗಳೂರಿನಿಂದ 51, ಬೆಂಗಳೂರಿನಿಂದ 49, ಕುಣಿಗಲ್‌ನಿಂದ 10, ಚನ್ನರಾಯಪಟ್ಟಣದಿಂದ 30, ತುಮಕೂರಿನಿಂದ 5 ಸೇರಿ ಒಟ್ಟು 156 ಕೂಲಿ ಕಾರ್ಮಿಕರು ಬೆಳಗಿನ ಜಾವ ನವನಗರದ ಹೊಸ ಬಸ್ ನಿಲ್ದಾಣಕ್ಕೆ ಬಂದು ತಲುಪಿದರು. ಅವರನ್ನು ಥರ್ಮಲ್ ಸ್ಕ್ರೀನಿಂಗ್ ಮತ್ತು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ನಂತರ ಅವರ ಸ್ವಗ್ರಾಮಕ್ಕೆ ತಲುಪಿಸುವ ಕಾರ್ಯ ನಡೆಯಿತು.

    ಜಿಲ್ಲೆಗೆ ಆಗಮಿಸಿದ ಕೂಲಿ ಕಾರ್ಮಿಕರು ಬಾದಾಮಿ ತಾಲೂಕಿನ ಯರಗೊಪ್ಪ, ಲಖಮಾಪುರ, ಕರ್ಲಕೊಪ್ಪ, ಹಾಗನೂರು, ಸುತಗುಂಡಾರ, ಚೀರ್ಲಕೊಪ್ಪ, ಕುಳಗೇರಿ ಕ್ರಾಸ್, ಹುನಗುಂದ ತಾಲೂಕಿನ ಮುಳ್ಳೂರ, ಕಮತಗಿ, ಬಾಗಲಕೋಟೆ ತಾಲೂಕಿನಲ್ಲಿ ನವನಗರ, ಹೊನ್ನಾಕಟ್ಟಿ, ಶಿರೂರ, ಗುಳೇದಗುಡ್ಡ ತಾಲೂಕಿನ ಗುಳೇದಗುಡ್ಡ, ಆಸಂಗಿ, ಕಲ್ಲಾಪುರ ಎಸ್.ಕೆ., ಕೋಟೆಕಲ್ಲ, ಬೀಳಗಿ ತಾಲೂಕಿನ ಕಾತರಕಿ, ಲವಳೇಶ್ವರ ಹಾಗೂ ಮುಧೋಳ ತಾಲೂಕಿನ ಮಹಾಲಿಂಗಪುರದವರಾಗಿದ್ದಾರೆ.

    ಪರಸ್ಪರ ಅಂತರದಲ್ಲಿ ನಿಲ್ಲಿಸಿ ಮಾಹಿತಿ ಪಡೆದು ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಲಾಯಿತು. ಹೋಮ್ ಕ್ವಾರಂಟೈನ್ ನಿಯಮದಂತೆ 14 ದಿನಗಳ ಕಾಲ ಮನೆಯಲ್ಲಿಯೇ ಇರುವಂತೆ ತಿಳಿಸಲಾಯಿತು. ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಬಿ.ಆರ್. ಜಾಧವ, ಬಾಲ ಕಾರ್ಮಿಕ ಸಂಸ್ಥೆ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts