More

    ಕೇವಲ ಸಹಾಯಧನಕ್ಕಾಗಿ ಅರ್ಜಿ ಸಲ್ಲ

    ಬಾಗಲಕೋಟೆ: ಮಹಿಳಾ ಅಭಿವೃದ್ಧಿ ನಿಗಮದಿಂದ ಸಿಗುವ ಸೌಲಭ್ಯಗಳಿಂದ ಕೇವಲ ಸಹಾಯಧನಕ್ಕಾಗಿ ಮಾತ್ರ ಅರ್ಜಿ ಸಲ್ಲಿಸದೆ ಸೌಲಭ್ಯದ ಸದುಪಯೋಗ ಪಡೆದು ಸ್ವಾವಲಂಬನೆ ಜೀವನ ನಡೆಸಬೇಕು ಎಂದು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಹೇಳಿದರು.

    ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಸಹಯೋಗದಲ್ಲಿ ಧನಶ್ರೀ, ಚೇತನ, ಲಿಂಗತ್ವ ಅಲ್ಪಸಂಖ್ಯಾತರ ಯೋಜನೆ, ಉದ್ಯೋಗಿನಿ ಸೇರಿ ಇತರ ಯೋಜನೆಗಳ ಲಾನುಭವಿಗಳೊಂದಿಗೆ ಬುಧವಾರ ಹಮ್ಮಿಕೊಂಡ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಮಹಿಳಾ ಅಭಿವೃದ್ಧಿ ನಿಗಮದಿಂದ ನೀಡುತ್ತಿರುವ ಸೌಲಭ್ಯಗಳನ್ನು ಎಷ್ಟು ಜನ ಮಹಿಳಾ ಲಾನುಭವಿಗಳು ಪಡೆದಿದ್ದಾರೆ. ಅದರಿಂದ ಅವರಿಗೆ ಅನುಕೂಲವಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ಪ್ರವಾಸ ಹಮ್ಮಿಕೊಂಡಿದ್ದು, ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ನಂತರ ಈಗಾಗಲೇ 8 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ ಲಾನುಭವಿಗಳ ಸಮಸ್ಯೆ ಆಲಿಸಿದ್ದೇನೆ ಎಂದರು.

    ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಪರಿಶಿಷ್ಟ ಕಾಲನಿ ಹಾಗೂ ಅಂಕಲಗಿ ದೇವದಾಸಿ ಮಹಿಳೆಯರ ಕಾಲನಿಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ. ಮಾಸಾಶನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಈ ಕುರಿತು ಚರ್ಚಿಸಲಾಗಿದೆ. ನಿಗಮದಿಂದ ಈ ಹಿಂದೆ ಕಡಿಮೆ ಸಹಾಯಧನ ನೀಡಲಾಗುತ್ತಿತ್ತು. ಈಗ ಹೆಚ್ಚಿನ ಸಹಾಯಧನ ನೀಡಲಾಗುತ್ತಿದೆ. ದೇವದಾಸಿ ಮಹಿಳೆಯರು 2016 ರಿಂದ ಹೊರಬಂದಿದ್ದಾರೆ. ಅವರಿಗೆ ನಿಗಮದಿಂದ ಸಾಲ ಸೌಲಭ್ಯಗಳನ್ನು ನೀಡಿ ಎಲ್ಲರಂತೆ ಸಮಾಜದಲ್ಲಿ ಗೌರವ ಸಿಗುಂತೆ ಮಾಡುವ ಉದ್ದೇಶ ನಿಗಮ ಹೊಂದಿದೆ ಎಂದರು.

    ಜಿಪಂ ಸಿಇಒ ಗಂಗೂಬಾಯಿ ಮಾನಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ದೇವದಾಸಿ ಪುನರ್ವಸತಿ ಯೋಜನೆ ಜಿಲ್ಲಾ ವ್ಯವಸ್ಥಾಪಕ ಕೆ.ಕೆ. ದೇಸಾಯಿ, ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿ ದ್ರಾಕ್ಷಾಯಿಣಿ ಪಾಟೀಲ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಸಂವಾದದಲ್ಲಿ ದೇವದಾಸಿ ಮಹಿಳೆಯರು, ಸೀಶಕ್ತಿ ಒಕ್ಕೂಟಗಳು, ಲಿಂಗತ್ವ ಅಲ್ಪಸಂಖ್ಯಾತರು ಪಾಲ್ಗೊಂಡಿದ್ದರು.

    ನಮಗೆ ವಸತಿ ಕಲ್ಪಿಸಿ
    ಸಂವಾದದಲ್ಲಿ ಜೋಗತಿಗಳು ಮಾತನಾಡಿ, ಸಮುದಾಯದವರಿಗೆ ಮನೆಗಳ ಕೊರತೆ ಬಹಳಷ್ಟು ಇದೆ. ದೇವಸ್ಥಾನಗಳಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಉಂಟಾಗಿದೆ. ತೇರದಾಳದಲ್ಲಿ 7 ಜನ ಜೋಗತಿ ಸಮೂಹ ಇದ್ದು, ಜೋಗಪ್ಪನ ಹಾಡುಗಳನ್ನು ಹಾಡುವ ಮೂಲಕ ಜೀವನ ಸಾಗಿಸುತ್ತಿದ್ದೇವೆ. ನಮಗೆ ವಸತಿ ಕಲ್ಪಿಸಬೇಕು ಎಂದು ಮನವಿ ಮಾಡಿದರು.

    ದೇವದಾಸಿ ಮಹಿಳೆಯರಿಗೆ ಭೂ ಒಡೆತನ ಯೋಜನೆಯಡಿ ಜಮೀನು ನೀಡಬೇಕು, ಮಾಸಾಶನ ಹೆಚ್ಚಳ ಮಾಡಬೇಕು. ನಮ್ಮ ಮಕ್ಕಳು ಪದವಿವರೆಗೆ ಶಿಕ್ಷಣ ಮುಗಿಸಿದ್ದು, ಅವರಿಗೆ ಒಳ್ಳೆಯ ಉದ್ಯೋಗ ನೀಡಬೇಕು. ಮನೆ ಕಟ್ಟಲು ಹೆಚ್ಚಿನ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದ ಅವರು, ಬ್ಯಾಂಕ್‌ನವರು ಸಹಾಯಧನವನ್ನು ಡಿಪಾಜಿಟ್ ಮಾಡಿದರೆ ಮಾತ್ರ ಸಾಲ ನೀಡುವುದಾಗಿ ತಿಳಿಸುತ್ತಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ನಿಗಮದ ಅಧ್ಯಕ್ಷರ ಬಳಿ ಅಳಲು ತೋಡಿಕೊಂಡರು.

    ಸೀಶಕ್ತಿ ಸಂಘದಿಂದ ಬ್ಯಾಗ್ ಉದ್ಯೋಗ
    ಮಹಿಳಾ ಅಭಿವೃದ್ಧಿ ನಿಗಮದಿಂದ ಕಿರು ಸಾಲ ಯೋಜನೆಯಡಿ ಸಾಲ ಸೌಲಭ್ಯ ಪಡೆದು ವಿವಿಧ ತರಹದ ಬ್ಯಾಗ್ ತಯಾರಿಸುವ ಉದ್ಯೋಗ ಕೈಗೊಂಡು 11 ಲಕ್ಷ ರೂ. ಉಳಿತಾಯ ಮಾಡಿರುವುದಾಗಿ ಬಾದಾಮಿ ತಾಲೂಕಿನ ಕಟಗೇರಿ ಲಕ್ಷ್ಮೀ ಸೀ ಶಕ್ತಿ ಸಂಘದ ಪ್ರತಿನಿಧಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts