More

    ಕಣ್ಣಿನ ಆರೋಗ್ಯದ ಕಾಳಜಿ ಅವಶ್ಯ

    ಬಾಗಲಕೋಟೆ: ಕಣ್ಣು ನಮ್ಮ ದೇಹದ ಪ್ರಮುಖ ಹಾಗೂ ಸೂಕ್ಷ್ಮ ಅಂಗವಾಗಿದೆ. ಅದರ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಅವಶ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.

    ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯ ಕೇದರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಎಂ.ಆರ್.ಎನ್.(ನಿರಾಣಿ) ೌಂಡೇಷನ್ ನೇತೃತ್ವದಲ್ಲಿ ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೇತ್ರ ಉಚಿತ ತಪಾಸಣೆ ಹಾಗೂ ಶಸ ಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಅನಿರೀಕ್ಷಿತವಾಗಿ ಹಾಗೂ ವಯೋ ಸಹಜವಾಗಿ ದೃಷ್ಟಿದೋಷಕ್ಕೆ ಒಳಗಾದವರ ಸಮಸ್ಯೆಗೆ ಸ್ಪಂದಿಸುವ ಉದ್ದೇಶದಿಂದ ನೇತ್ರ ತಪಾಸಣೆ ಶಿಬಿರ ಆಯೋಜನೆ ಮಾಡಿರುವುದು ಆತ್ಮತೃಪ್ತಿ ತಂದುಕೊಟ್ಟಿದೆ ಎಂದರು.

    ಶಿಬಿರದಲ್ಲಿ 512 ಜನರು ತಪಾಸಣೆಗೊಳಗಾಗಿದ್ದು, 142 ಜನ ಶಸ ಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಶಸ ಚಿಕಿತ್ಸೆಗೆ ಆಯ್ಕೆಯಾದವರನ್ನು ಹುಬ್ಬಳ್ಳಿಯ ಎಂ.ಎಂ. ಜೋಶಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಚಿತ ಶಸ ಚಿಕಿತ್ಸೆ ಮಾಡಿಸಿ ಮರಳಿ ಸುರಕ್ಷಿತವಾಗಿ ಊರಿಗೆ ಕಳುಹಿಸುವ ಕಾರ್ಯವನ್ನು ೌಂಡೇಷನ್ ಸಿಬ್ಬಂದಿ ಮಾಡಲಿದ್ದಾರೆ ಎಂದು ತಿಳಿಸಿದರು.

    ಡಾ.ಮನೋಹರ ಟಂಕಸಾಲಿ, ಡಾ.ಎ.ಎಸ್. ಹಲಗಲಿ, ಹೂವಪ್ಪ ರಾಠೋಡ, ಆನಂದರಾವ್ ದೇಸಾಯಿ, ರವಿ ಪಾಟೀಲ, ಹಣಮಂತಗೌಡ ಪಾಟೀಲ, ಎಲ್.ಪಿ. ಪಾಟೀಲ, ಚನ್ನಪ್ಪ ಗಿಡ್ಡಪ್ಪಗೋಳ, ನಿಂಗನಗೌಡ ಹೊಸಮನಿ, ಸಂಗಯ್ಯ ಸರಗಣಾಚಾರಿ, ಗೊವಿಂದಗೌಡ ಕೈನಕಟ್ಟಿ, ಹುಬ್ಬಳ್ಳಿ ಜೋಶಿ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಹಾಗೂ ೌಂಡೇಷನ್ ಅಧಿಕಾರಿಗಳು ಉಪಸ್ಥಿತರಿದ್ದರು.



    ಕಣ್ಣಿನ ಆರೋಗ್ಯದ ಕಾಳಜಿ ಅವಶ್ಯ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts