More

    ನಿವೇಶನ ಖರೀದಿಗೂ ಮುನ್ನ ಎಚ್ಚರವಹಿಸಿ

    ಬಾಗಲಕೋಟೆ: ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ವು ತನ್ನ ಯೋಜನಾ ಪ್ರದೇಶ ವ್ಯಾಪ್ತಿ ವಿಸ್ತರಣೆಗೆ ಕ್ರಮ ತೆಗೆದುಕೊಂಡು, ಹೊಸದಾಗಿ 12 ಗ್ರಾಮಗಳ ಸೇರ್ಪಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ನಿವೇಶನ ಖರೀದಿಗೂ ಮುನ್ನ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ಹೇಳಿದರು.

    ಬಾಗಲಕೋಟೆ ಸುತ್ತಮುತ್ತಲೂ ಅನಧಿಕೃತ ಲೇಔಟ್, ಗುಂಟಾ ನಿವೇಶನ ಮಾಡಲಾಗುತ್ತಿದೆ. ಅವುಗಳು ಎನ್‌ಎ, ಕೆಜೆಪಿ ಹಾಗೂ ಭೂ ಪರಿವರ್ತನೆಯಾಗಿರುವುದಿಲ್ಲ. ಯಾವುದೇ ಮೂಲ ಸೌಕರ್ಯ ಕೂಡ ಕಲ್ಪಿಸಿರುವುದಿಲ್ಲ. ಬುಡಾದಿಂದ ಪರವಾನಗಿ ಕೂಡ ಪಡೆದಿರುವುದಿಲ್ಲ. ಸರ್ಕಾರದ ನಿಯಮಗಳನ್ನು ಮೀರಿ ನಿವೇಶನ ರಚಿಸಿರುವುದು ಅನಧಿಕೃತವಾಗಿರುತ್ತವೆ. ಆದ್ದರಿಂದ ಸಾರ್ವಜನಿಕರು ನಿವೇಶನ ಖರೀದಿಗೂ ಮುನ್ನ ಎಚ್ಚರ ವಹಿಸಬೇಕು. ಬುಡಾ ಕಚೇರಿಯಲ್ಲಿ ನಿರಪೇಕ್ಷಿತ ಪ್ರಮಾಣ ಪಡೆದುಕೊಂಡು ಖರೀದಿಗೆ ಮುಂದಾಗಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

    ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳನ್ನು ಖರೀದಿಸದಂತೆ ಬುಡಾ ಸಾರ್ವಜನಿಕರದಲ್ಲಿ ಜಾಗೃತಿ ಮೂಡಿಸಲಿದೆ. ಅಲ್ಲದೆ, ಅನಧಿಕೃತವಾಗಿ ನಿವೇಶನ ಸಿದ್ಧಪಡಿಸಿದವರಿಗೂ ನೋಟಿಸ್ ನೀಡಲಿದ್ದೇವೆ. ಇಂತಹ ನಿವೇಶನಗಳ ನೋಂದಣಿ ಮಾಡಿಕೊಳ್ಳದಂತೆ ಬಾಗಲಕೋಟೆ ನೋಂದಣಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳಿಗೂ ಕೂಡ ಈ ಬಗ್ಗೆ ಪತ್ರ ಬರೆಯಲಾಗುತ್ತದೆ. ಇನ್ನು ಈಗಾಗಲೇ ನಿಯಮಾನುಸಾರ ಸಿದ್ಧಪಡಿಸಿದ ಲೇಔಟ್‌ಗಳಿಗೆ ಬುಡಾ ಸಹಕಾರ ನೀಡಲಿದೆ ಎಂದು ಹೇಳಿದರು.

    ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ರಾಮತೀರ್ಥ ನಗರ, ಕುಮಾರಸ್ವಾಮಿ ಲೇಔಟ್ ಸಿದ್ಧಪಡಿಸಿ ಮಾದರಿ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿದೆ. ಸಾರ್ವಜನಿಕರಿಗೂ ಯೋಗ್ಯ ದರದಲ್ಲಿ ನಿವೇಶನಗಳನ್ನು ಮಾರಾಟ ಮಾಡಿದೆ. ಇದೇ ರೀತಿ ಬಾಗಲಕೋಟೆ ನಗರದಲ್ಲಿ ಲೇಔಟ್ ಸಿದ್ಧಪಡಿಸಲಾಗುವುದು. ಖಾಸಗಿ ಲೇಔಟ್‌ಗಳಲ್ಲಿ ಲಭ್ಯವಿರುವ ಸಿಎ ನಿವೇಶನಗಳನ್ನು ಸರ್ಕಾರಿ ಕಚೇರಿಗಳಿಗೆ ಹಾಗೂ ಸಂಘ, ಸಂಸ್ಥೆಗಳಿಗೆ ನಿಯಮಾನುಸಾರ ಲೀಜ್ ಆಧಾರದ ಮೇಲೆ ಹಂಚಿಕೆ ಮಾಡುವ ಬಗ್ಗೆ ಬುಡಾ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.

    ಬುಡಾ ಸದಸ್ಯರಾದ ಚನ್ನಪ್ರಕಾಶ ಚೌದರಿ, ಸವಿತಾ ಲೆಂಕೆನ್ನವರ, ಶಾಂತಾ ಐಕೂರ, ಜಯಂತ ಕುರಂದವಾಡ, ರಾಜು ನಾಯ್ಕರ, ಆಯುಕ್ತ ಗಣಪತಿ ಪಾಟೀಲ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಹೊಸದಾಗಿ 8 ಗ್ರಾಮಗಳ ಸೇರ್ಪಡೆ
    ಬುಡಾ ತನ್ನ ಯೋಜನಾ ವ್ಯಾಪ್ತಿಯನ್ನು ವಿಸ್ತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಮೊದಲು ಬಾಗಲಕೋಟೆ, ಛಬ್ಬಿ, ಯಡಹಳ್ಳಿ, ಆನದಿನ್ನಿ, ಬನ್ನಿದಿನ್ನಿ, ಕೇಸನೂರ, ಮುರನಾಳ, ವೀರಾಪುರ, ಶೀಗಿಕೇರಿ, ಮುಚಖಂಡಿ, ಗದ್ದನಕೇರಿ, ಸೀಮಿಕೇರಿ ಸೇರಿ 12 ಗ್ರಾಮಗಳನ್ನು ಪ್ರಾಧಿಕಾರದ ವ್ಯಾಪ್ತಿಯಲ್ಲಿವೆ. ಇದೀಗ ಮಲ್ಲಾಪುರ, ಕಿರಸೂರ, ಮನ್ನಿಕಟ್ಟಿ, ಹೊನ್ನಾಕಟ್ಟಿ, ಬೇವಿನಮಟ್ಟಿ, ನೀರಲಕೇರಿ, ಬೆನಕಟ್ಟಿ ಸೇರಿ ಒಟ್ಟು 8 ಗ್ರಾಮಗಳನ್ನು ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನೇಕ ಗ್ರಾಮಗಳಲ್ಲಿ ಗುಂಟಾ ನಿವೇಶನ ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿದ್ದು, ಇವುಗಳ ಅನಧಿಕೃತವಾಗಿರುತ್ತವೆ. ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ತಿಳಿಸಿದರು.

    ಬಾಗಲಕೋಟೆ ನಗರದ ಸುತ್ತಮುತ್ತಲೂ ಬುಡಾ ಭೂಮಿ ಖರೀದಿಸಿ ಲೇಔಟ್ ಸಿದ್ಧಪಡಿಸಲಿದೆ. ಬಡ, ಮಧ್ಯಮ ವರ್ಗದವರು, ಬಿಟಿಡಿಯಲ್ಲಿ ನಿವೇಶನ ದೊರೆಯದ ಸಂತ್ರಸ್ತರಿಗೆ ಯೋಗ್ಯ ದರದಲ್ಲಿ ಹಂಚಿಕೆ ಮಾಡಲಾಗುವುದು.
    ಜಯಂತ ಕುರಂದವಾಡ ರಾಜು ನಾಯ್ಕರ ಬುಡಾ ಸದಸ್ಯರು



    ನಿವೇಶನ ಖರೀದಿಗೂ ಮುನ್ನ ಎಚ್ಚರವಹಿಸಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts