More

    ಜ.27 ರಿಂದ ಮೂಲೆ ನಿವೇಶನ ಹರಾಜು ಆರಂಭ

    ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನವನಗರ ಯೂನಿಟ್-1ರಲ್ಲಿ ಬರುವ ವಸತಿ, ವಾಣಿಜ್ಯ ಮೂಲೆ ನಿವೇಶನಗಳ ಬಹಿರಂಗ ಹರಾಜು ಪ್ರಕ್ರಿಯೆ ಜ.27 ರಿಂದ ೆಬ್ರವರಿ 19 ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ, ಬಿಟಿಡಿಎ ಅಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

    ನವನಗರ ಯೂನಿಟ್-1 ರಲ್ಲಿ 1129 ಮೂಲೆ ನಿವೇಶನಗಳ ಪೈಕಿ ಸದ್ಯ 200 ಮೂಲೇ ನಿವೇಶನಗಳನ್ನು ಬಹಿರಂಗ ಹರಾಜು ಮಾಡಲು 200 ಮೂಲೆ ನಿವೇಶನಗಳನ್ನು ಗುರುತಿಸಲಾಗಿದೆ. ಈಗಾಗಲೇ ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಹರಾಜಿನಲ್ಲಿ ಭಾಗವಹಿಸಲು ಜ.21 ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    200 ಮೂಲೆ ನಿವೇಶನಗಳ ಪೈಕಿ 145 ವಸತಿ ಮೂಲೆ ನಿವೇಶನಗಳಿವೆ. ಎ ಮಾದರಿಯ 35 ನಿವೇಶನಗಳು, ಎ.ಎಸ್.ಪಿ.ಎಲ್ ಮಾದರಿಯ 2, ಬಿ ಮಾದರಿಯ 58, ಸಿ ಮಾದರಿಯ 35, ಡಿ ಮಾದರಿಯ 11, ಇ ಮಾದರಿಯ 3, ಇಎಸ್‌ಪಿಎಲ್ ಮಾದರಿಯ 1 ಇದ್ದು, ಪ್ರತಿ ಚದರ ಅಡಿಗೆ 1130 ರೂ. ಹಾಗೂ 26 ಸಂತ್ರಸ್ತರಲ್ಲದವರ ಮೂಲೆ ನಿವೇಶನಗಳಲ್ಲಿ ಎಸ್ ಮಾದರಿಯ 15, ಎಂ ಮಾದರಿಯ 9, ಎಲ್ ಮಾದರಿಯ 2 ನಿವೇಶನಗಳಿದ್ದು, ಪ್ರತಿ ಚದರ ಅಡಿಗೆ 1480 ರೂ.ಗಳಿಗೆ ನಿಗದಿಪಡಿಸಲಾಗಿದೆ ಎಂದರು.

    19 ವಾಣಿಜ್ಯ ಮೂಲೆ ನಿವೇಶನಗಳಲ್ಲಿ ಎ ಮಾದರಿಯ 3, ಎ1 ಮಾದರಿಯ 1, ಬಿ ಮಾದರಿಯ 4, ಬಿ2 ಮಾದರಿಯ 1, ಸಿ ಮಾದರಿಯ 4, ಸಿ1 ಮಾದರಿಯ 1, ವಿಎ್ ಮಾದರಿಯ 1, ಓಡಿಡಿ ಮಾದರಿಯ 4 ನಿವೇಶನಗಳಿಗೆ ಪ್ರತಿ ಚದುರ ಅಡಿಗೆ 2540 ರೂ, 10 ಆಟೋ ಸೆಕ್ಟರ ಮೂಲೆ ನಿವೇಶನಗಳಲ್ಲಿ ಆಟೋ ಎಸ್ ಮಾದರಿಯ 4, ಆಟೋ ಎಸ್‌ಆರ್ ಮಾದರಿಯ2, ಆಟೋ ಓಡಿಡಿ ಮಾದರಿಯ 4 ನಿವೇಶಗಳಿಗೆ ಪ್ರತಿ ಚದುರ ಅಡಿಗೆ 910 ರೂ. ಬೆಲೆ ನಿಗಧಿಪಡಿಸಿದೆ ಎಂದು ಹೇಳಿದರು.

    ನಿವೇಶನಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಜ.21 ಸಂಜೆ 5.30 ರೊಳಗಾಗಿ ಡಿಡಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಎ.ಬಿ.ಎಸ್ ವಸತಿ ಹಾಗೂ ಎ, ಎ1, ಬಿ, ಬಿ1, ಬಿ2, ಎಸ್, ಹಾಗೂ ವಿ.ಎ್ ವಾಣಿಜ್ಯ ನಿವೇಶನಗಳಿಗೆ 50 ಸಾವಿರ ರೂ.ಗಳ ಡಿಡಿಯನ್ನು ಸಲ್ಲಿಸಬೇಕು. ಸಿ, ಡಿ, ಇ, ಇ ಸ್ಪೇಷಲ್ ವಸತಿ ಹಾಗೂ ಸಿ, ಸಿ1, ಎಸ್.ಆರ್ ವಿಷಮ ಅಳತೆಯ ವಾಣಿಜ್ಯ ನಿವೇಶನಗಳಿಗೆ 1 ಲಕ್ಷ ರೂ.ಗಳ ಡಿಡಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.

    ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ದಿನ 10 ನಿವೇಶನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬಿಟಿಡಿಎ ಯಿಂದ ಕಳೆದ ನಿವೇಶನ ಹರಾಜಿನಲ್ಲಿ 95 ಕೋಟಿ ರೂ.ಗಳು ಬಂದಿದ್ದು ಅದನ್ನು ಕಾರ್ಪಸ್ ಪಂಡ್‌ನಲ್ಲಿ ಇಡಲಾಗಿದೆ. ಇನ್ನೂ 100 ಕೋಟಿ ರೂ. ಇದ್ದು, 95 ಕೋಟಿ ರೂ. ಹಾಗೂ 100 ಕೋಟಿ ರೂ., ಹೆಚ್ಚುವರಿಗಾಗಿ 5 ಕೋಟಿ ರೂ. ಸೇರ್ಪಡೆಗೊಳಿಸಿ 200 ಕೋಟಿ ರೂ. ವರೆಗೆ ಕಾರ್ಫಸ್ ಫಂಡ್‌ಗಿ ಪರಿವರ್ತಿಸಲು ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಬರುವ ಬಡ್ಡಿ ಹಣದಿಂದ ನವನಗರ ಮೆಂಟೆನೆನ್ಸ್, ಅಭಿವೃದ್ಧಿ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದರು.

    ನವನಗರದ ಮೂಲೆ ನಿವೇಶನ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತದೆ. ಬಾಗಲಕೋಟೆ ಸೇರಿದಂತೆ ಬೇರೆ ಜಿಲ್ಲೆಯ ಆಸಕ್ತರು ಭಾಗವಹಿಸಬಹುದು. ಇನ್ನೂ ನವನಗರದಲ್ಲಿ ಬಿಟಿಡಿಎ ವತಿಯಿಂದ 300 ಮಳಿಗೆಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಸಹ ಹರಾಜು ಹಾಕಲಾಗುವುದು. ಮಳಿಗೆಗಳನ್ನು ಬಾಡಿಗೆ ಪಡೆದಿರುವ ಅಂಗಡಿಕಾರರಿಗೆ ಮೊದಲ ಆದ್ಯತೆ ನೀಡಲಾಗುವುದು.
    – ವೀರಣ್ಣ ಚರಂತಿಮಠ ಬಿಟಿಡಿಎ ಅಧ್ಯಕ್ಷ

    
    
    ಜ.27 ರಿಂದ ಮೂಲೆ ನಿವೇಶನ ಹರಾಜು ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts