More

    ಕೋಟೆನಾಡಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ

    ಬಾಗಲಕೋಟೆ: ಸ್ವಾಮಿ ವಿವೇಕಾನಂದರ 158ನೇ ಜಯಂತಿಯನ್ನು ಜಿಲ್ಲೆಯ ವಿವಿಧೆಡೆ ಆಚರಿಸಲಾಯಿತು. ವಿವಿಧ ಸಂಘ, ಸಂಸ್ಥೆ, ಶಾಲಾ, ಕಾಲೇಜು, ರಾಜಕೀಯ ಪಕ್ಷಗಳ ಕಚೇರಿಯಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಂದಿಸಲಾಯಿತು.

    ಬಾಗಲಕೋಟೆ ನಗರದ ಬಿವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕಾನಂದ ಜಯಂತಿ ಆಚರಿಸಲಾಯಿತು.

    ಉಪನ್ಯಾಸಕ ಮಾರುತಿ ಪಾಟೋಳಿ ಮಾತನಾಡಿ, ಯುವಕರು ಚಲನಶೀಲರಾಗಬೇಕು. ದೇಹದಲ್ಲಿ ಚೈತನ್ಯವಿರುವವರೆಗೆ ಏನನ್ನಾದರು ಸಾಧಿಸಬಹುದು. ದೃಢ ಸಂಕಲ್ಪದೊಂದಿಗೆ ಹೆಜ್ಜೆ ಇಡಬೇಕು. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಹಿರಿದಾಗಿದೆ ಎಂದರು.

    ಜಯಂತಿಯ ಪ್ರಯುಕ್ತ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಮಲಿಂಗವ್ವ ಅಂಗಡಿ (ಪ್ರಥಮ), ರಾಧಾ ಗುದಗಿ ಮತ್ತು ಚಂದ್ರಕಾಂತ ಆರ್. (ದ್ವಿತೀಯ), ತೃಪ್ತಿ ಯಲಗೂರ ತೃತೀಯ ಬಹುಮಾನ ಪಡೆದರು. ಡಾ.ಮಮತಾಸಿಂಗ್ ಚವ್ಹಾಣ್, ಕಾಲೇಜಿನ ಪ್ರಾಚಾರ್ಯ ಡಾ.ವಿ.ಪಿ.ಹೊಸಕೇರಿ ಇತರರು ಉಪಸ್ಥಿತರಿದ್ದರು. ಯಮುನಾ ಘಂಟಿ, ವಿಶಾಲಾ ಇಲಾಳ ಪ್ರಾರ್ಥಿಸಿದರು. ಆರ್.ಸಿ.ಯಾನಮಶೆಟ್ಟಿ ಪರಿಚಯಿಸಿದರು. ಸೌಮ್ಯ ಉಗರಗೋಳ ವಂದಿಸಿದರು.

    ಎಬಿವಿಪಿ
    ನಗರದ ಬಸವೇಶ್ವರ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆ ಶಾಖೆ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಮುಖಂಡರಾದ ಆರ್.ಎನ್.ಕುಲಕರ್ಣಿ, ಎಲ್.ಜಿ.ವೈದ್ಯ, ಶಿವಕುಮಾರ ಸಲಬಣ್ಣವರ, ಪ್ರಕಾಶ ಪೂಜಾರ, ಉನ್ನತ ಬೇವಿನಕಟ್ಟಿ, ಶ್ರೇಯಸ ಹಯವದನ, ನಿಖಿಲ, ನಾಗರಾಜ್ ಸೇರಿದಂತೆ ಇತರರು ಇದ್ದರು.

    ಕಾಂಗ್ರೆಸ್ ಕಚೇರಿಯಲ್ಲಿ
    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರು ನವಭಾರತ ನಿರ್ಮಾಣಕ್ಕೆ ಬುನಾದಿ ಹಾಕಿದ್ದಾರೆ. ತಮ್ಮ ಜೀವನದೂದ್ದಕ್ಕೂ ರಾಷ್ಟ್ರೀಯತೆ ಮೈಗೂಡಿಸಿಕೊಂಡಿದ್ದರು. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದರು.

    ಮಾಜಿ ಸಚಿವ ಎಚ್.ವೈ.ಮೇಟ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಅಧ್ಯಕ್ಷ ಹಾಜಿಸಾಬ ದಂಡಿನ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ರಾಕುಂಪಿ, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಕಲಾದಗಿ, ಮುಖಂಡರಾದ ಮುತ್ತಪ್ಪ ಹುಗ್ಗಿ, ಕಲ್ಲು ಹಳ್ಳೂರ, ಶಬ್ಬೀರ ನದಾಫ್, ಕಿಶೋರ ಸುರುಪುರ, ಜಹೀರ ಮುಜಾವರ, ಸಂಗಮೇಶ ಕಾಳಗಿ ಉಪಸ್ಥಿತರಿದ್ದರು.

    ಕಲಾ ಮಹಾವಿದ್ಯಾಲಯ
    ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು. ಕಲಾ ಮಹಾವಿದ್ಯಾಲಯದ ಶಿಕ್ಷಣ ವಿಭಾಗದ ಮುಖ್ಯಸ್ಥ ಆರ್.ಕೆ. ಕುಲಕರ್ಣಿ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿ.ಎಸ್.ಕಟಗಿಹಳ್ಳಿಮಠ, ಪ್ರೊ.ಬಿ.ಆರ್.ಪಾಟೀಲ, ಡಾ.ಎ.ಎಂ. ಸತ್ಯನಾಯಕ, ಡಾ.ಎಸ್.ಎನ್.ರಾಂಪುರ, ಡಾ.ಕೆ.ವಿ.ಮಠ ಉಪಸ್ಥಿತರಿದ್ದರು. ಮಹೇಶ ಹುಂಡೇಕಾರ ಪ್ರಾರ್ಥಿಸಿದರು. ಪ್ರೊ.ಎಸ್.ಆರ್. ಮೂಗನೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರೇವಣ್ಣ ಬೆಣ್ಣೂರ ನಿರೂಪಿಸಿದರು.

    ವಾಣಿಜ್ಯ ಮಹಾವಿದ್ಯಾಲಯ
    ಕರ್ನಾಟಕ ಸರ್ಕಾರ, ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ರೆಡ್ ರಿಬ್ಬನ್ನ ಕ್ಲಬ್ ಆಶ್ರಯದಲ್ಲಿ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಸಭಾ ಭವನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು. ಜಿಲ್ಲಾ ಉಪ ಆರೋಗ್ಯ ಅಧಿಕಾರಿ ಕೆ.ಆರ್.ಪವಾರ, ಪ್ರಾಚಾರ್ಯ ಎಸ್.ಎಚ್.ಶೆಟ್ಟರ ಉಪಸ್ಥಿತರಿದ್ದರು. ಅನುಷಾ ಪತ್ತಾರ ಪ್ರಾರ್ಥಿಸಿದರು. ಡಾ. ಎಂ.ಪಿ.ಗೌಡಗಾಂವಿ ಸ್ವಾಗತಿಸಿದರು. ಎಂ.ಎಚ್.ಸುಬೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಎಚ್.ಬೀಳಗಿ ನಿರೂಪಿಸಿದರು, ಡಾ. ಬಿ.ಪಿ.ಕುಂಬಾರ ವಂದಿಸಿದರು.

    ಅಕ್ಕ ಮಹಾದೇವಿ ಕಾಲೇಜು
    ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಪ್ರೊ.ಆರ್.ವೈ.ಗೌಡರ, ಪ್ರೊ.ಎನ್. ಎಸ್. ದೊಡ್ಡಮನಿ, ಪ್ರಭಾರ ಪ್ರಾಚಾರ್ಯ ಜಿ.ಐ. ನಂದಿಕೋಲಮಠ ಉಪಸ್ಥಿತರಿದ್ದರು. ಸೌಮ್ಯಾ ಹೊನ್ಯಾಳ ಪ್ರಾರ್ಥಿಸಿದರು. ಕೆ.ವ್ಹಿ.ಜುಕ್ತಿಮಠ ಸ್ವಾಗತಿಸಿದರು. ವಿಜಯಲಕ್ಷ್ಮೀ ತುಂಬರಮಟ್ಟಿ ಪರಿಚಯಿಸಿತು. ಎ.ವಿ.ಪುರಾಣಿಕ ಹಾಗೂ ಭಾಗ್ಯಾ ಹೂಗಾರ ನಿರೂಪಿಸಿದರು.

    ಸಿಬಿಎಸ್‌ಇ ಶಾಲೆ
    ನಗರದ ಬಿವಿವಿ ಸಂಘದ ಬಸವೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯ ಸಿ.ಬಿ. ಸುರೇಶ ಹೆಗ್ಡೆ, ಉಪಪ್ರಾಚಾರ್ಯ ಮಂಗಳಗೌರಿ ಹೆಗ್ಡೆ ಉಪಸ್ಥಿತಿರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts