More

    ಕೋಟೆನಾಡಲ್ಲಿ ಮೊಳಗಿತು ಕನ್ನಡ ಡಿಂಡಿಮ!

    ಬಾಗಲಕೋಟೆ: 65ನೇ ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾದ್ಯಂತ ಸರಳವಾಗಿ ಆಚರಿಸಲಾಯಿತು. ಕೋಟೆನಾಡು ಇಡೀ ದಿನ ಕನ್ನಡಯವಾಗಿತ್ತು. ಎಲ್ಲೆಡೆ ಕನ್ನಡ ಡಿಂಡಿಮ ಮೊಳಗಿತು.

    ಬಾಗಲಕೋಟೆ ನಗರದಲ್ಲಿರುವ ಜಿಲ್ಲಾಡಳಿತ ಭವನ, ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿ, ಶಾಲೆ-ಕಾಲೇಜು, ಸಂಘ-ಸಂಸ್ಥೆ, ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಸೇರಿ ನಾನಾ ಕಡೆ ಕನ್ನಡಾಂಬೆ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕನ್ನಡಪರ ಸಂಘಟನೆಗಳಿಂದ ವಿವಿಧೆಡೆ ವಿಶೇಷವಾಗಿ ರಾಜ್ಯೋತ್ಸವ ಆಚರಿಸಲಾಯಿತು.

    ಬಸವೇಶ್ವರ ಪದವಿ ಪೂರ್ವ ಕಾಲೇಜು
    ನಗರದ ಬಿವಿವಿ ಸಂಘದ ಬಸವೇಶ್ವರ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಕನ್ನಡ ರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಪ್ರಾಚಾರ್ಯ ಎಸ್.ಎಚ್. ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಡಾ.ಜೆ.ವಿ.ಚವಾಣ್, ಡಾ.ಎಂ.ಆರ್. ಮಲಕಶೆಟ್ಟಿ, ಪ್ರೊ.ಎಂ.ಎಂ.ಹುನಗುಂದ, ಪ್ರೊ.ಯು.ವೈ.ಕೋನೇರಿ ಉಪಸ್ಥಿತರಿದ್ದರು. ಪಿ.ಬಿ.ತಿಪ್ಪನ್ನವರ ವಂದಿಸಿದರು. ಪ್ರೊ.ಸಂಗೀತಾ ಗರಗದಮಠ ನಿರೂಪಿಸಿದರು.


    ಕನ್ನಡ ಪ್ರೀತಿಸಿ
    ಬೆಳೆಸಿನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಬಿವಿವಿ ಸಂಘದ ಬಸವೇಶ್ವರ ಸಿಬಿಎಸ್‌ಇ (ಬಿಪ್ಸ್) ಶಾಲೆಯಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಶಾಲೆ ಪ್ರಾಚಾರ್ಯ ಸಿ.ಬಿ.ಸುರೇಶ ಹೆಗ್ಡೆ ಮಾತನಾಡಿ, ಕನ್ನಡಿಗರು ಸರಳ ಸಜ್ಜನಿಕೆಯ ಹಾಗೂ ಸೃಜನಾತ್ಮಕ ಚಿಂತನೆಯುಳ್ಳವರು, ಕನ್ನಡ ನುಡಿ ನಮ್ಮ ತಾಯ್ನುಡಿಯಾಗಿದ್ದು, ಅದನ್ನು ಪ್ರೀತಿಸಿ, ಬೆಳೆಸಿ, ಉಳಿಸಬೇಕು. ಆ ಮೂಲಕ ಕನ್ನಡದ ಕಂಪು ಜಗತ್ತಿನಾದ್ಯಂತ ಪಸರಿಸುವಂತಾಗಬೇಕು ಎಂದರು. ಉಪಪ್ರಾಚಾರ್ಯ ಮಂಗಳಗೌರಿ ಹೆಗ್ಡೆ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

    ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಬಿವಿವಿ ಸಂಘದ ಬಸವೇಶ್ವರ ಸಿಬಿಎಸ್‌ಇ (ಬಿಪ್ಸ್) ಶಾಲೆಯಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಶಾಲೆ ಪ್ರಾಚಾರ್ಯ ಸಿ.ಬಿ.ಸುರೇಶ ಹೆಗ್ಡೆ ಮಾತನಾಡಿ, ಕನ್ನಡಿಗರು ಸರಳ ಸಜ್ಜನಿಕೆಯ ಹಾಗೂ ಸೃಜನಾತ್ಮಕ ಚಿಂತನೆಯುಳ್ಳವರು, ಕನ್ನಡ ನುಡಿ ನಮ್ಮ ತಾಯ್ನುಡಿಯಾಗಿದ್ದು, ಅದನ್ನು ಪ್ರೀತಿಸಿ, ಬೆಳೆಸಿ, ಉಳಿಸಬೇಕು. ಆ ಮೂಲಕ ಕನ್ನಡದ ಕಂಪು ಜಗತ್ತಿನಾದ್ಯಂತ ಪಸರಿಸುವಂತಾಗಬೇಕು ಎಂದರು. ಉಪಪ್ರಾಚಾರ್ಯ ಮಂಗಳಗೌರಿ ಹೆಗ್ಡೆ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

    ಅಕ್ಕ ಮಹಾದೇವಿ ಕಾಲೇಜು
    ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿನಿಯರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕನ್ನಡ ಪ್ರಾಧ್ಯಾಪಕಿ ಎಸ್.ಕೆ.ಹಿರೇಮಠ ಉಪನ್ಯಾಸ ನೀಡಿದರು. ಪ್ರೊ.ರೇಖಾ ಗೂಗಿ, ಕಾಲೇಜಿನ ಹಳೇ ವಿದ್ಯಾರ್ಥಿ ಪಿಡಿಒ ಶ್ರುತಿ ರಾಮಾಪುರ, ಪ್ರೊ.ಎಸ್.ಜೆ. ಒಡೆಯರ ಉಪಸ್ಥಿತರಿದ್ದರು. ವಾಣಿಶ್ರೀ ತಾಳಿಕೋಟಿ ಪ್ರಾರ್ಥಿಸಿದರು. ಡಾ.ಜಿ.ಐ.ನಂದಿಕೋಲಮಠ ಸ್ವಾಗತಿಸಿದರು. ಎ.ವಿ.ಪುರಾಣಿಕ ನಿರೂಪಿಸಿ, ವಂದಿಸಿದರು.

    ಕರವೇ ಸಂಘಟನೆ
    ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಎಚ್.ಶಿವರಾಮೇಗೌಡ) ಬಣದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ಜಿಲ್ಲಾ ಗೌರವಾಧ್ಯಕ್ಷ ಪ್ರಶಾಂತ ಬಾವಿಕಟ್ಟಿ, ನಗರ ಅಧ್ಯಕ್ಷ ಶಂಕರ ಮುತ್ತಲಗೇರಿ, ನಗರ ಉಪಾಧ್ಯಕ್ಷ ಸಂತೋಷ ಚಿನಿವಾಲ, ಸಂಗಮೇಶ ದುಬಲಗುಂಡಿ, ನಗರ ಕಾರ್ಮಿಕ ಅಧ್ಯಕ್ಷ ಪರಶುರಾಮ ಬುಳ್ಳಾಪುರ, ವಾಹನ ಚಾಲಕರ ಅಧ್ಯಕ್ಷ ವಿಷ್ಣು ಬಾರಕೇರ, ನವೀನ ಕಪಾಲಿ ಉಪಸ್ಥಿತರಿದ್ದರು.

    ಬಸವೇಶ್ವರ ಕಲಾ ಮಹಾವಿದ್ಯಾಲಯ
    ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ಸಂಸ್ಕೃತಿ, ಜ್ಞಾನ, ಅನ್ನ ನೀಡಿರುವಂತಹ ಭಾಷೆ ಕನ್ನಡ. ಇದು ನಮ್ಮ ನಾಡಿನ ಬಹು ದೊಡ್ಡ ಸಂಪತ್ತು. ಅದನ್ನು ನಾವು ವಿವೇಕಯುತವಾಗಿ ಬಳಸಿ, ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದರು.

    ಪ್ರಾಚಾರ್ಯ ಡಾ.ವಿ.ಎಸ್.ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಬಿ.ಆರ್.ಪಾಟೀಲ, ಪ್ರೊ.ಎಸ್.ಆರ್.ಮೂಗನೂರಮಠ, ಪ್ರೊ.ನೀಲಗಿರಿ ತಳವಾರ, ಡಾ.ಸಿದ್ದರಾಮಯ್ಯ ಮಠಪತಿ ಉಪಸ್ಥಿತರಿದ್ದರು. ಡಾ.ಕೆ.ಪ್ರಹ್ಲಾದ ಸ್ವಾಗತಿಸಿದರು. ಪ್ರೊ.ವಿ.ಎಸ್.ಚಿಗರಿ ನಿರೂಪಿಸಿದರು. ಡಾ.ಬಸವರಾಜ ವಿ.ಖೋತ ವಂದಿಸಿದರು.

    ಶರಣ ಕೊಡುಗೆ ಮರೆಯಲಾಗದು
    ನಗರದ ಬಿವಿವಿ ಸಂಘದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಾಹಿತಿ ಪ್ರೊ.ಆರ್.ಎಸ್ ಅಲ್ಲೂರಕರ ಮಾತನಾಡಿ, ಕನ್ನಡ ನಾಡಿನ ಬಸವಾದಿ ಶರಣರು ನೀಡಿದ ಕೊಡುಗೆ ಮರೆಯಲಾಗದು. ಕುವೆಂಪು, ಬೇಂದ್ರೆ, ಡಿ.ಎಸ್. ಕರ್ಕಿ ಅವರಂತಹ ದಿಗ್ಗಜರ ಪರಿಶ್ರಮದಿಂದ ಕನ್ನಡ ನಾಡು ಶ್ರೀಮಂತವಾಗಿದೆ. ಅಲ್ಲದೆ, ಕನ್ನಡ ನಾಡು ಕಟ್ಟುವಲ್ಲಿ ಔದ್ಯೋಗಿಕ ರಂಗದ ಕೊಡುಗೆ ಅಪಾರವಾಗಿದೆ ಎಂದರು.

    ಪ್ರೊ. ಬಿ.ಎಸ್.ಹರವಿ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ಚಂದ್ರಶೇಖರ, ಡಾ.ವಿನೋದ ಪುರಾಣಿಕ, ಡಾ.ಪಿ.ಎನ್. ಕುಲಕರ್ಣಿ, ಡಾ.ಶೋಭಾ ಪಾಟೀಲ, ಸುಭಾಷ ಅಂಗಡಿ ಉಪಸ್ಥಿತರಿದ್ದರು. ಶ್ರೀವತ್ಸ ಕುಲಕರ್ಣಿ ಕನ್ನಡಾಂಬೆಯ ಕುರಿತು ಭಾವಗೀತೆ ಹಾಡಿದರು. ಪ್ರೊ.ಗಿರಿಸಾಗರ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts