More

    ಏರೋನ್ಯಾಟಿಕ್ ಇಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ

    ಬಾಗಲಕೋಟೆ: ರಬಕವಿ -ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಪ್ರಗತಿಪರ ರೈತ ದೇವರಾಜ ರಾಠಿ ಅವರ ಪುತ್ರಿ ಅಶ್ವಿನಿ ಪ್ರಸಕ್ತ ವರ್ಷ ಮಣಿಪಾಲ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಏರೋನ್ಯಾಟಿಕ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ.

    ನಾಲ್ಕು ವರ್ಷಗಳ ಲಿತಾಂಶದಲ್ಲಿ 10 ಕ್ಕೆ 9.49 ರಷ್ಟು ಅಂಕಗಳನ್ನು ಪಡೆದು ಮಹತ್ಸಾಧನೆ ಮಾಡಿದ್ದಾರೆ. ಹೆಚ್ಚಿನ ವ್ಯಾಸಂಗಕ್ಕಾಗಿ ಸ್ಕಾಲರ್‌ಶಿಪ್ ಮೂಲಕ ಪ್ರಮುಖವಾಗಿ ಮಿಸೈಲ್‌ಗಳ ವಿಷಯಗಳ ಕುರಿತು ಹೆಚ್ಚಿನ ವ್ಯಾಸಂಗಕ್ಕಾಗಿ ್ರಾನ್ಸ್ ರಾಷ್ಟ್ರ ಆಹ್ವಾನಿಸಿರುವುದು ವಿಶೇಷ. ರೈತ ಕುಟುಂಬದಿಂದ ಬಂದಿರುವ ಇವರ ತಂದೆ ದೇವರಾಜ ರಾಠಿ ಅವರು ಕೃಷಿಯಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆದು ರಾಜ್ಯ ಉತ್ತಮ ರೈತ ಪ್ರಶಸ್ತಿ ಪಡೆದವರು. ಅಲ್ಲದೆ, ಉತ್ತಮ ಸಲು ತೆಗೆದ ಕಾರಣಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದವರಾಗಿದ್ದು, ಮಗಳ ಸಾಧನೆ ನಿಜಕ್ಕೂ ಖುಷಿ ತರುತ್ತಿದೆ ಎನ್ನುತ್ತಾರೆ.

    ಕೇವಲ ಓದು ಮಹತ್ವದ್ದಲ್ಲ, ವಿಷಯಗಳನ್ನು ಮನನ ಮಾಡಿಕೊಳ್ಳುವುದು ಮುಖ್ಯ. ಎಷ್ಟು ಓದಿದೆ ಎನ್ನುವುದಕ್ಕಿಂತ ಎಷ್ಟೊಂದು ಅರಿವಾಗಿದೆ ಎಂಬುದು ಮುಖ್ಯ.
    ಅಶ್ವಿನಿ ರಾಠಿ, ರ‌್ಯಾಂಕ್ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts