More

    ಉಜ್ವಲ್ ಯೋಜನೆಯಡಿ 3 ತಿಂಗಳು ಸಿಲಿಂಡರ್ ಉಚಿತ

    ಬಾಗಲಕೋಟೆ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಎಲ್ಲ ಉಜ್ವಲ ಯೋಜನೆಯ ಗ್ರಾಹಕರಿಗೆ ಮೂರು ತಿಂಗಳು ಅಂದರೆ ಏಪ್ರಿಲ್‌ದಿಂದ ಜೂನ್‌ವರೆಗೆ 14.2 ಕೆಜಿಯ ಮೂರು ಅಥವಾ 5 ಕೆಜಿಯ ಎಂಟು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.

    ಕೋವಿಡ್ ಭೀತಿ ಹಿನ್ನೆಲೆ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಈ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದೆ. ಈ ಯೋಜನೆಯಡಿ ಎಲ್ಲ ಪಿಎಂಯುವೈ ಗ್ರಾಹಕರು ಎಲ್‌ಪಿಜಿ ಮರು ಪೂರ್ಣದ ಸಿಲಿಂಡರ್‌ನ ಪೂರ್ಣ ಚಿಲ್ಲರೆ ಮಾರಾಟ ದರವನ್ನು ತಮ್ಮ ಬ್ಯಾಂಕ್ ಖಾತೆ ಮೂಲಕ ಪಡೆಯಲಿದ್ದಾರೆ. ಹಣ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಬಗ್ಗೆ ಗ್ರಾಹಕರು ದೃಢೀಕರಣದ ಎಸ್‌ಎಂಎಸ್ ಸ್ವೀಕರಿಸುತ್ತಾರೆ.

    ಮರುಪೂರ್ಣ ಸಿಲಿಂಡರ್‌ಗಳನ್ನು ಗ್ರಾಹಕರ ಮನೆಗೆ ಮಾತ್ರ ವಿತರಿಸಲಾಗುತ್ತಿದೆ. ಯಾರೊಬ್ಬರೂ ವಿತರಕರ ಬಳಿಗೆ ಬರುವ ಅಗತ್ಯವಿಲ್ಲ. ಸಿಲಿಂಡರ್‌ನ ನಗದು ಮೆಮೋದಲ್ಲಿಯೇ ಮರುಪೂರ್ಣದ ಸಿಲಿಂಡರ್ ಸ್ವೀಕೃತಿಯನ್ನು ಸೇರಿಸಲಾಗಿದೆ. ಗ್ರಾಹಕರು ಐವಿಆರ್‌ಎಸ್, ಎಸ್‌ಎಂಎಸ್ ಮೂಲಕ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಯಾವುದೇ ದೂರವಾಣಿ ಸಂಖ್ಯೆಯಿಂದ ಐವಿಆರ್‌ಎಸ್ ಮೂಲಕ ಮತ್ತು ವಾಟ್ಸ್ ಆ್ಯಪ್, ಪೇಟಿಯಂ, ಆನ್‌ಲೈನ್ ಇತ್ಯಾದಿ ಮೂಲಕ ಸಿಲಿಂಡರ್ ಬುಕ್ ಮಾಡಬಹುದಾಗಿದೆ.

    ಉಜ್ವಲ ಉಚಿತ ಮರುಪೂರ್ಣ ಸಿಲಿಂಡರ್ ಯೋಜನೆ ಅಡಿ ಪ್ರಯೋಜನ ಪಡೆಯಲು ನಿಯಮಿತವಾದ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ದಾಖಲೆ ಅಥವಾ ಪ್ರತಿಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಬ್ಯಾಂಕ್ ಖಾತೆ ಬದಲಾವಣೆ ಇದ್ದಲ್ಲಿ ಗ್ರಾಹಕರು ವಿತರಕರನ್ನು ಸಂಪರ್ಕಿಸಬೇಕು. ಕೋವಿಡ್ ನಿಬಂಧನೆಗಳ ಹಿನ್ನೆಲೆ ಗ್ರಾಹಕರು ವಿತರಕರ ಬಳಿಗೆ ಖುದ್ದು ಹೋಗುವುದನ್ನು ತಪ್ಪಿಸಿ ೋನ್ ಮೂಲಕ ಸಂಪರ್ಕಿಸಬೇಕು. ಯಾವುದೇ ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿತರಕರ ಮಳಿಗೆಗೆ ಭೇಟಿ ನೀಡಿ ಸಾಮಾಜಿಕ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಸೂಚಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts