More

    ನನ್ನ ಹಳೇ ಮೈಸೂರನವ ಅನ್ನಬೇಡಿ

    ಬಾಗಲಕೋಟೆ: ನಾನೀಗ ಉತ್ತರ ಕರ್ನಾಟಕದವನು. ನನ್ನನ್ನ ಹಳೇ ಮೈಸೂರಿನವ ಅನ್ನಬೇಡಿ. ನಾನು ಸಹ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಶೇಂಗಾ ಚಟ್ನಿ ತಿನ್ನೋದು ಅಭ್ಯಾಸ ಮಾಡ್ಕೊಂಡಿದ್ದೀನಿ. ಹೀಗಂತ ಬಾದಾಮಿ ಜನರ ಎದುರು ಹೇಳಿಕೊಂಡಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

    ಬಾದಾಮಿ ಪಟ್ಟಣದ ಕಾಳಿದಾಸ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಸೋಮವಾರ ನಡೆದ 227.80 ಕೋಟಿ ರೂ. ವೆಚ್ಚದ ಬಾದಾಮಿ, ಕೆರೂರ ಪಟ್ಟಣ ಹಾಗೂ 18 ಗ್ರಾಮಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ ನೆರವೇರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ನಾನು ಎರಡು ಕಡೆಗೆ ಸ್ಪರ್ಧೆ ಮಾಡಿದ್ದೆ. ಚಾಮುಂಡಿಯಲ್ಲಿ ಅಷ್ಟೊಂದು ಕೆಲಸ ಮಾಡಿದ್ದರೂ ಅಲ್ಲಿನ ಜನರು ಕೈ ಬಿಟ್ಟಿದ್ದಾರೆ. ಬಾದಾಮಿ ಜನರು ಕೈ ಹಿಡಿದಿದ್ದಾರೆ. ಎಸ್.ಆರ್.ಪಾಟೀಲ, ಚಿಮ್ಮನಕಟ್ಟಿ ಒತ್ತಾಯ ಹಾಕಿ ಇಲ್ಲಿಗೆ ಕರೆದುಕೊಂಡು ಬಂದಿದ್ದರು.

    ಹೀಗಾಗಿ ನಾನೀಗ ಉತ್ತರ ಕರ್ನಾಟಕದವನು. ನಿಮ್ಮ ಜತೆ ನಾನು ಜೋಳದ ರೊಟ್ಟಿ, ಶೇಂಗಾ ಚಟ್ನಿ ತಿನ್ನೋದು ಅಭ್ಯಾಸ ಮಾಡಿಕೊಂಡಿದ್ದೇನೆ. ನಾನು ಇನ್ನು ಮೂರು, ಮೂರು ಕಾಲು ವರ್ಷ ಇಲ್ಲೇ ಇರುತ್ತೇನೆ. ನಿಮ್ಮ ಕಷ್ಟ ಸುಖದಲ್ಲಿ ಭಾಗಿ ಆಗುತ್ತೇನೆ. ಕ್ಷೇತ್ರಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬಾದಾಮಿ ಶಾಸಕರು ಆಗಿರುವ ಸಿದ್ದರಾಮಯ್ಯ ಭರವಸೆ ನೀಡಿದರು.

    ರಾಜ್ಯ ಸರ್ಕಾರದಲ್ಲಿ ಬೂದಿ ಮುಚ್ಚಿದ ಕೆಂಡ:
    ರಾಜ್ಯ ಸಚಿವ ಸಂಪುಟದ ಗೊಂದಲದ ವಿಚಾರವಾಗಿ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಈಗ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. 6ನೇ ತಾರೀಖಿನ ಬಳಿಕ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದು ಹೇಳಿದರು.

    ಹಳ್ಳಿ ಹಕ್ಕಿ ವಿಶ್ವನಾಥರಿಗೆ ಸಚಿವ ಸ್ಥಾನದ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಯಾರು ಹಳ್ಳಿ ಹಕ್ಕಿ, ನನಗೆ ಗೊತ್ತಿಲ್ಲ. ಮನುಷ್ಯರು ಹಳ್ಳಿ ಹಕ್ಕಿ ಹೇಗಾಗುತ್ತಾರೆ? ನಾನಂತೂ ಹಳ್ಳಿ ಹಕ್ಕಿಗಳ್ನು ನೋಡಿಲ್ಲ ಎಂದರು.

    ಕೇಂದ್ರ ಬಜೆಟ್‌ನಲ್ಲಿ ಕಾರಜೋಳ ಅವರ ಸಮಾಜ ಕಲ್ಯಾಣ ಇಲಾಖೆ ಅನುದಾನ ಕಡಿತ ಮಾಡಿದ್ದಾರೆ. ಎನ್‌ಆರ್‌ಇಜಿಗೆ ಅನುದಾನ ಕಡಿಮೆ ಆಗಿದೆ. ಒಟ್ಟಾರೆ, ರಾಜ್ಯಕ್ಕೆ ಮುಂದಿನ ವರ್ಷದಲ್ಲಿ ಒಂಬತ್ತರಿಂದ ಹನ್ನೊಂದು ಸಾವಿರ ಕೋಟಿ ರೂ. ಕಡಿಮೆ ಅನುದಾನ ಬರುತ್ತದೆ ಎಂದು ವಿಶ್ಲೇಷಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts