More

    ಇಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

    ಬಾಗಲಕೋಟೆ: ಸಾಹಿತಿ ಎ.ಎಸ್. ಪಾವಟೆ ಸರ್ವಾಧ್ಯಕ್ಷತೆಯಲ್ಲಿ ಬಾಗಲಕೋಟೆ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.೧೦ ರಂದು ಕೋಟೆನಗರಿಯ ಚರಂತಿಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.
    ಸಮ್ಮೇಳನದ ಮಹಾಮಂಟಪಕ್ಕೆ ಲಿಂ. ಮನಿಪ್ರ ಬೀಳೂರು ಗುರುಬಸವ ಮಹಾಸ್ವಾಮಿಗಳು, ಪ್ರಧಾನ ವೇದಿಕೆಗೆ ಪ್ರೊ.ಅಬ್ಬಾಸ್ ಮೇಲಿನಮನಿ, ಮಹಾದ್ವಾರಕ್ಕೆ ಮಲ್ಲೇಶಪ್ಪ ಜಿಗಜಿನ್ನಿ, ಮಂಟಪ ದ್ವಾರಗಳಿಗೆ ಆರ್.ಜಿ. ಅಳ್ಳಗಿ, ಮಳಿಗೆಗಳಿಗೆ ಡಾ. ಶಿವಣ್ಣ ಅಮಾತೆಪ್ಪನವರ, ದಾಸೋಹದ್ವಾರಕ್ಕೆ ಟೀಕಿನಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಹೆಸರು ನಾಮಕರಣ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಅಂದು ಬೆಳಗ್ಗೆ ೭.೪೫ಕ್ಕೆ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ರಾಷ್ಟ್ರ ಧ್ವಜ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪರಿಷತ್ತಿನ ಧ್ವಜ, ತಾಲೂಕಾಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ನಾಡ ಧ್ವಜಾರೋಹಣ ನೆರವೇರಿಸುವರು. ೮ ಗಂಟೆಗೆ ಸಮ್ಮೇಳನಾಧ್ಯಕ್ಷ ಎ.ಎಸ್. ಪಾವಟೆ ನೇತೃತ್ವದಲ್ಲಿ ಭುವನೇಶ್ವರಿ ತಾಯಿಯ ಭಾವಚಿತ್ರ ಮೆರವಣಿಗೆಗೆ ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ ಚಾಲನೆ ನೀಡುವರು. ಬಿವಿವಿ ಸಂಘದ ಬೀಳೂರು ಗುರುಬಸವ ಮಹಾಸ್ವಾಮಿಗಳ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚರಂತಿಮಠ ತಲುಪಲಿದೆ ಎಂದರು.
    ಬೆಳಗ್ಗೆ ೧೦ ಗಂಟೆಗೆ ಲೇಖಕಿ ರಶ್ಮಿ ಸಮ್ಮೇಳನ ಉದ್ಘಾಟಿಸುವರು. ಚರಂತಿಮಠದ ಮನಿಪ್ರ ಪ್ರಭು ಸ್ವಾಮೀಜಿ ಸಾನ್ನಿಧ್ಯ, ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸುವರು. ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸ್ಮರಣ ಸಂಚಿಕೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ವಿವಿಧ ಲೇಖಕರ ಕೃತಿ ಬಿಡುಗಡೆಗೊಳಿಸುವರು. ಸಂಸದ ಪಿ.ಸಿ. ಗದ್ದಿಗೌಡರ ಛಾಯಾಚಿತ್ರ ಪ್ರದರ್ಶನ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಸಮ್ಮೇಳನಾಧ್ಯಕ್ಷ ಎ.ಎಸ್. ಪಾವಟೆ ಉಪಸ್ಥಿತರಿರುವರು ಎಂದು ಹೇಳಿದರು.
    ಇದೇ ವೇಳೆ ಕೋಟೆ ದರ್ಪಣ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ. ಬಾಗಲಕೋಟೆ ತಾಲೂಕು ದರ್ಶನ, ಸಮ್ಮೇಳನಾಧ್ಯರೊಂದಿಗೆ ಸಂವಾದ – ಬದುಕು ಬರಹ, ಕವಿ ಸಮಯ ಎಂಬ ಮೂರು ಗೋಷ್ಠಿಗಳು ಹಾಗೂ ಬಹಿರಂಗ ಅಧಿವೇಶನ, ಸನ್ಮಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
    ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಸಚಿವ ಎಚ್.ವೈ. ಮೇಟಿ ಅಧ್ಯಕ್ಷತೆ ವಹಿಸುವರು. ವೆಂಕಟೇಶ ಮಾಚಕನೂರ ಸಮಾರೋಪ ನುಡಿಗಳನ್ನಾಡುವರು. ಮಾಜಿ ಸಚಿವ ಎಸ್.ಆರ್. ಪಾಟೀಲ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮತ್ತಿತರರು ಪಾಲ್ಗೊಳ್ಳುವರು ಎಂದು ಹೇಳಿದರು.
    ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಸಿದ್ದರಾಮ ಮನಹಳ್ಳಿ, ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಬಾಗಲಕೋಟೆ ತಾಲೂಕಾಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts