More

    ಮಸೀದಿಗಳ ಮೇಲಿನ ಧ್ವನಿ ವರ್ಧಕ ತೆರವಿಗೆ ಆಗ್ರಹ

    ಬಾಗಲಕೋಟೆ: ಅನಧಿಕೃತ ಮತ್ತು ಶಬ್ಧ ಮಾಲಿನ್ಯ ಉಂಟು ಮಾಡುತ್ತಿರುವ ಮಸೀದಿಗಳ ಮೇಲಿನ ಧ್ವನಿ ವರ್ಧಕ ತೆರುವುಗೊಳಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷದ್ ಬಜರಂಗ ದಳ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಂಘಟನೆಯ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನವಾದ ಹಕ್ಕು ಇದೆ. ಅವರವರ ಧರ್ಮ, ಆಚಾರ, ವಿಚಾರ ಪಾಲನೆ ಮಾಡಬಹುದು ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೊಟ್ಟ ಹಕ್ಕನ್ನು ದುರುಪಯೋಗ ಪಡಿಸುವ ಸ್ವತಂತ್ರ ಯಾರಿಗೂ ಇಲ್ಲ. ಸಾರ್ವಜನಿಕರಿಗೆ ಸಮಸ್ಯೆ ಆಗುವ ಬಲವಂತವಾಗಿ ಧರ್ಮಗಳ ಆಚರಣೆ ಹೇರುವುದು ತರವಲ್ಲ. ಅದರಂತೆ ಆಜಾನ್ ಇಸ್ಲಾಂ ಧರ್ಮದ ಅವಿಭಾಜ್ಯ ಭಾಗವಾಗಿರಬಹುದು. ಆದರೆ ಧ್ವನಿವರ್ಧಕಗಳ ಮೂಲಕ ಆಜಾನ್ ಪಠಣ ಮಾಡಬೇಕು ಎನ್ನುವ ಹಕ್ಕು ಇಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.

    ಸಂವಿಧಾನದ ಆರ್ಟಿಕಲ್ 19 (1), (ಎ), ಅಡಿಯಲ್ಲಿ ಶಬ್ಧ ಮಾಲಿನ್ಯ ಉಂಟು ಮಾಡುವ ಉಪಕರಣ, ಧ್ವನಿವರ್ಧಕ ಬಳಕೆ ಮಾಡಬಾರದು. ಇದು ನಾಗರಿಕ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಪರವಾನಗಿ ಇಲ್ಲದೆ ಮಸೀದಿಗಳ ಮೇಲೆ ಧ್ವನಿವರ್ಧಕ ಬಳಸಲಾಗುತ್ತಿದೆ. ಹೀಗಾಗಿ ಸರ್ಕಾರ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಉಗ್ರವಾರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಮುಖಂಡರಾದ ಶಿವಕುಮಾರ ಮೇಲ್ನಾಡ, ರಾಜು ನಾಯಕ, ಪುಂಡಲೀಕ ದಳವಾಯಿ, ವಿಜಯ ಸುಲಾಖೆ, ಬಸವರಾಜ ಕಟಗೇರಿ, ಸಂಗಮೇಶ ಹಿತ್ತಲಮನಿ, ಅಶೋಕ ಮುತ್ತಿನಮಠ, ವಿಜಯ ಕಾಂಬಳೆ ಪ್ರತಿಭಟನೆ ನೇತೃತ್ವ ವಹಿಸಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts