More

    ಮುಷ್ಕರಕ್ಕೆ ಪ್ರಯಾಣಿಕರ ಪರದಾಟ

    ಬಾಗಲಕೋಟೆ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ದಿಢೀರ್ ಮುಷ್ಕರಕ್ಕೆ ಹಮ್ಮಿಕೊಂಡಿದ್ದರಿಂದ ಗುರುವಾರ ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು. ಇದರಿಂದ ಪ್ರಯಾಣಿಕರು ತೀವ್ರ ಸ್ವರೂಪದಲ್ಲಿ ಪರದಾಡುವಂತಾಯಿತು.

    ಬೆಳಗ್ಗೆಯಿಂದಲೇ ಬಾಗಲಕೋಟೆ ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ಇಳಕಲ್ಲ, ಹುನಗುಂದ, ಬಾದಾಮಿ, ಜಮಖಂಡಿ, ಮುಧೋಳ, ಮಹಾಲಿಂಗಪುರ, ರಬಕವಿ- ಬನಹಟ್ಟಿ ಸೇರಿದಂತೆ ಎಲ್ಲ ಬಸ್ ನಿಲ್ದಾಣಗಳಲ್ಲಿ ನೌಕರರು ಪ್ರತಿಭಟನೆ ನಡೆಸುವ ಮೂಲಕ ಮುಷ್ಕರ ಆರಂಭಿಸಿದರು. ಇದರಿಂದ ಪ್ರಯಾಣಿಕರಿಗೆ ಜೋರಾಗಿ ಮುಷ್ಕರದ ಬಿಸಿ ತಟ್ಟಿತು.

    ಬಸ್‌ನಿಲ್ದಾಣಗಳಲ್ಲಿ ಠಿಕಾಣಿ:
    ಮುಷ್ಕರದ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲದ ಕಾರಣ ಸಾರ್ವಜನಿಕರು ಬಸ್‌ನಿಲ್ದಾಣಗಳಿಗೆ ಆಗಮಿಸಿದರು. ಆದರೇ ಬಸ್ ನಿಲ್ದಾಣದಲ್ಲಿನ ಮುಷ್ಕರ ನೋಡುತ್ತಿದ್ದಂತೆ ನಿರಾಸೆ ಮೂಡಿತು. ಆಸ್ಪತ್ರೆ, ಸಂಬಂಧಿಕರ ಭೇಟಿ, ಮದುವೆ, ಉಪನಯನ ಕಾರ್ಯಕ್ರಮಗಳು ಸೇರಿದಂತೆ ತಮ್ಮ ತಮ್ಮ ಕೆಲಸಗಳಿಗೆ ಹೋಗಬೇಕಿದ್ದ ಸಾರ್ವನಿಕರು ಬಸ್‌ಗಳು ಇಲ್ಲದಿರುವುದು ಕಂಡು ದಿಕ್ಕು ತೋಚದಂತಾದರು. ಕೆಲವರಂತು ಬಂದ ದಾರಿಗೆ ಸುಂಕವಿಲ್ಲ ಅಂತ ಬರಿಗೈಯಲ್ಲಿ ವಾಪಸ್ಸ ಆದರು. ಬಡ, ಸಾಮಾನ್ಯ ವರ್ಗದ ಜನರು ನಿಲ್ದಾಣಗಳಲ್ಲಿಯೇ ಸಂಜೆ ವರೆಗೂ ಠಿಕಾಣಿ ಹೂಡಿದರು. ಗಂಟೆ ಗಟ್ಟಲೆ ಬಸ್‌ಗಳಿಗಾಗಿ ಕಾದು ಕುಳಿರು ಸುಸ್ತಾದರು. ವಯಸ್ಸಾದವರು, ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರ ಪರದಾಟ ಮುಗಿಲು ಮುಟ್ಟಿತ್ತು.

    ಇನ್ನೂ ಕೆಲವು ಪ್ರಯಾಣಿಕರು ಖಾಸಗಿ ವಾಹನಗಳನ್ನು ಬಾಡಿಗೆ ರೀತಿಯಲ್ಲಿ ಪಡೆದುಕೊಂಡು ತಾವು ತಲುಬೇಕಾದರ ಸ್ಥಳಕ್ಕೆ ತೆರಳಿದರು. ಹಲವು ಜನರು ತಮ್ಮ ಸಂಬಂಧಿಕರು, ಆತ್ಮಿಯರಿಗೆ ಕರೆ ಮಾಡಿ ವಾಹನದ ಸಹಾಯ ಪಡೆದುಕೊಂಡರು. ಗ್ರಾಮೀಣ ಹಾಗೂ ಇನ್ನೊಂದು ಸ್ಥಳಕ್ಕೆ ಹೋಗಿ ಸೇವೆ ಸಲ್ಲಿಸಬೇಕಾದ ಸರ್ಕಾರಿ, ಖಾಸಗಿ ನೌಕರರು ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ಸಾಧ್ಯವಾಗದೇ ಪರದಾಡಿದರು. ಸಾರಿಗೆ ನೌಕರರ ಮುಷ್ಕರದಿಂದ ನಗರ ಪ್ರದೇಶದ ಜತೆಗೆ ಗ್ರಾಮೀಣ ಪ್ರದೇಶದ ಜನರಿಗೆ ತೀವ್ರ ತೊಂದರೆಯಾಯಿತು.

    ಅಲ್ಲದೆ ಬಸ್‌ನಿಲ್ದಾಣಗಳಲ್ಲಿ ಬಸ್‌ಗಳು ಸಾಲು ಸಾಲಾಗಿ ನಿಂತಿರುವ ದೃಶ್ಯ ಕಂಡು ಬಂದಿತು. ಚಾಲಕರು, ನಿರ್ವಾಹಕರು ನಿಲ್ದಾಣದಲ್ಲಿಯೇ ನಿದ್ದೆ ಜಾರಿದರು. ಬಸ್ ಸಂಚಾರ ಹಾಗೂ ಜನದಟ್ಟನೆ ಕಂಡು ಬರುತ್ತಿದ್ದ ನಿಲ್ದಾಣಗಳು ಬೀಕೋ ಎನ್ನುತ್ತಿದ್ದವು. ಬಸ್ ಬಂದ್ ಪರಿಣಾಮ ನಗರದಲ್ಲಿರುವ ಮಾರುಕಟ್ಟೆ ಪ್ರದೇಶ ಹಾಗೂ ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿ ಇರುವುದು ಕಂಡು ಬಂದಿತು. ವ್ಯಾಪಾರಸ್ಥರು ಕೂಡಾ ವಹಿವಾಟು ಇಲ್ಲದೇ ಖಾಲಿ ಕುಳಿತುಕೊಂಡರು.

    ಖಾಸಗಿ ವಾಹನಗಳಿಗೆ ಬಹು ಬೇಡಿಕೆ
    ಸಾರಿಗೆ ಬಸ್‌ಗಳ ಸಂಚಾರ ಸಂರ್ಪೂಣವಾಗಿ ಬಂದ್ ಆಗಿದ್ದರಿಂದ ಪ್ರಯಾಣಿಕರು ಖಾಸಗಿ ವಾಹನಗಳನ್ನು ಅವಲಂಬಿಸುವುದು ಅನಿವಾರ್ಯವಾಯಿತು. ಕಾರು, ಟ್ರಾಕ್ಸಿ, ಅಟೋ, ಟಂಟಂ, ಕ್ರೂಸರ್‌ಗಳಿಗೆ ಮೊರೆ ಹೋದರು. ಇದನ್ನೆ ಸುವರ್ಣ ಅವಕಾಶ ಎಂದುಕೊಂಡ ಖಾಸಗಿ ವಾಹನ ಮಾಲೀಕರು ಅಧಿಕ ಬೆಲೆ ನಿಗದಿ ಮಾಡಿದರು. ತಾವು ತಲುಬೇಕಾದ ಸ್ಥಳಕ್ಕೆ ಅನಿವಾರ್ಯ ಇರುವ ಕಾರಣಕ್ಕೆ ಖಾಸಗಿಯವರು ಹೇಳುವ ಮೊತ್ತ ನೀಡಿ ಅನೇಕ ಜನರು ಪ್ರಯಾಣಿಸಿದ್ದು ಜಿಲ್ಲೆಯಲ್ಲಿ ಕಂಡು ಬಂದಿತು. ಬಸ್‌ಗಳನ್ನು ಅವಲಂಬಿಸಿದರು ನೀರವ ಮೌನಕ್ಕೆ ಜಾರಿದರು.

    ಬಾಗಲಕೋಟೆ ನಿಲ್ದಾಣದಲ್ಲಿ ಪ್ರತಿಭಟನೆ
    ಸಾರಿಗೆ ಇಲಾಖೆ ನೌಕರರು ಹಳೇ ಬಾಗಲಕೋಟೆ, ನವನಗರದ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಅನೇಕ ವರ್ಷಗಳಿಂದ ಸೇವೆ ಮಾಡುತ್ತಿದ್ದೇವೆ. ಆದರು ಸಹ ಸರ್ಕಾರ ನಮ್ಮ ಬಗ್ಗೆ ನಿರ್ಲಕ್ಷೃ ದೋರಣೆ ಅನುಸರಿಸುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ವೇತನ ನೀಡಲಿಲ್ಲ. ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಸಾರಿಗೆ ನೌಕರರುನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ತಾರತಮ್ಯ ಮನೋಭಾವದಿಂದ ನೋಡಬಾರದು. ನಮ್ಮ ಬೇಡಿಕೆ ಈಡೇರಿಸಬೇಕು ಎಂದು ನೌಕರರು ಆಗ್ರಹಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts