More

    ರಾಷ್ಟ್ರೀಯ ಯೋಜನೆ ಘೋಷಿಸಲು ತಾಂತ್ರಿಕ ತೊಂದರೆ

    ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಆದರೇ ನ್ಯಾಯಧೀಕರಣದ ತೀರ್ಪು ಬಂದು ನಮ್ಮ ಪಾಲಿನ ನೀರಿನ ಹಂಚಿಕೆಯಾದರು ಸಹ ಇದುವರೆಗೂ ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ. ಈ ತಾಂತ್ರಿಕ ಕಾರಣದಿಂದ ಕೃ.ಮೇ.ಯೋ ಮೂರನೇ ಹಂತದ ಕಾಮಗಾರಿಗೆ ವಿಳಂಬವಾಗುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

    ಭದ್ರಾ ಮೇಲ್ದಂಡೆ ಯೋಜನೆಗೆ ಗೆಜೆಟ್ ಅಧಿಸೂಚನೆಯಾಗಿದ್ದರಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಿ 16 ಸಾವಿರ ಕೋಟಿ ನೀಡುವುದಾಗಿ ಘೋಷಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ನ್ಯಾ.ಬ್ರಿಜೇಶಕುಮಾರ ತೀರ್ಪು ಪ್ರಕಾರ ರಾಜ್ಯಕ್ಕೆ 138 ಟಿಎಂಸಿ ನೀರು ಹಂಚಿಕೆಯಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳು ಸುಪ್ರೀಂಕೋರ್ಟ್‌ಗೆ ಹೋಗಿವೆ. ಕರ್ನಾಟಕ ಸರ್ಕಾರ ಕೂಡಾ ಕೋರ್ಟ್ ಮೊರೆ ಹೋಗಿದೆ. ಇದು ವರೆಗೂ ವಿಚಾರಣೆ ಪೂರ್ಣಗೊಂಡಿಲ್ಲ. ಹೀಗಾಗಿ ಕೇಂದ್ರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಲು ತಾಂತ್ರಿಕ ಹಿನ್ನಡೆಯಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕೃಷ್ಣಾ ಮೇಲ್ದಂಡೆ ಯೋಜನೆ ಮೊದಲೇ ಹಂತ 2000 ಆಗಸ್ಟ್, ಎರಡನೇ ಹಂತ 2012 ರಲ್ಲಿ ಪೂರ್ಣಗೊಂಡಿತು. 524.256 ಮೀಟರ್ ನೀರು ನಿಲ್ಲಿಸಿ ಸದ್ಬಳಕೆ ಮಾಡಿಕೊಳ್ಳುವುದು ಮೂರನೇ ಹಂತ ಕಾಮಗಾರಿ ಉದ್ದೇಶ. ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿ ಇದ್ದಾಗ 17207 ಕೋಟಿ ರೂ.ಮೊತ್ತದ ಮೂರನೇ ಹಂತದ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಆದರೇ ಪ್ರಗತಿಯಾಗಲಿಲ್ಲ. 2013-14 ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 2017-18 ಸಾಲಿನ ವರೆಗೆ 7650 ಕೋಟಿ ರೂ., ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ 2018-19 ರಲ್ಲಿ 1346 ಕೋಟಿ ರೂ. ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಳಿಕ ಈವರೆಗೆ 3 ಸಾವಿರ ಕೋಟಿ ರೂ.ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಬಂದಿದೆ. ಈ ಸಾರಿ ಬಜೆಟ್‌ನಲ್ಲಿ 5600 ಕೋಟಿ ರೂ. ಮೀಸಲು ಇಡಲಾಗಿದೆ ಎಂದರು.

    ಮೂರನೇ ಹಂತಕ್ಕೆ 2017 ರಲ್ಲಿ 51148 ಕೋಟಿ ರೂ. ಯೋಜನಾ ವೆಚ್ಚ ಅಂದಾಜು ಲೆಕ್ಕಾಚಾರ ಮಾಡಲಾಗಿತ್ತು. ಅಂದಿನಿಂದ ಪ್ರತಿವರ್ಷ 10 ಸಾವಿರ ಕೋಟಿ ನೀಡಿದ್ದರು ಪ್ರಸಕ್ತ ವರ್ಷ ಪೂರ್ಣಗೊಳ್ಳುವ ಹಂತಕ್ಕೆ ಬರುತ್ತಿತ್ತು. ಇದರಿಂದ ಕಲಬುರ್ಗಿ, ರಾಯಚೂರ, ಕೊಪ್ಪಳ, ಬಾಗಲಕೋಟೆ ವಿಜಯಪುರ ಜಿಲ್ಲೆಯ 620000 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡುತ್ತಿತ್ತು. ಇದರಲ್ಲಿ ಬಾಗಲಕೋಟೆ, ವಿಜಯಪುರ ಜಿಲ್ಲೆಯ 322000 ಹೆಕ್ಟೇರ್ ಪ್ರದೇಶ ನೀರಾವರಿಯಾಗುತ್ತಿತ್ತು. 2013-14 ರಿಂದ ಈ ವರೆಗೆ ಎಲ್ಲ ಸರ್ಕಾರಗಳಿಂದ 12432 ಕೋಟಿ ಬಿಡುಗಡೆಯಾಗಿದೆ. ಆದರೇ ಕನಿಷ್ಟ ಅಂದ್ರು 50 ಸಾವಿರ ಕೋಟಿ ರೂ. ಮೂರನೇ ಹಂತಕ್ಕೆ ಬೇಕು ಎಂದು ಹೇಳಿದರು.

    ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ, ಎಸ್ಪಿ ಲೋಕೇಶ ಜಗಲಾಸರ್, ಸಿಇಒ ಟಿ.ಭೂಬಾಲನ ಸುದ್ದಿಗೋಷ್ಠಿಯಲ್ಲಿ ಇದ್ದರು.

    1952 ರಿಂದಲು ನ್ಯಾಯ ಸಿಕ್ಕಿಲ್ಲ..
    ಕೃಷ್ಣಾ ನದಿ ನೀರು ಹಂಚಿಕೆ ಹಾಗೂ ವಿವಿಧ ವಿಷಯಗಳಲ್ಲಿ ಬಾಗಲಕೋಟೆ, ವಿಜಯಪುರ ಅವಳಿ ಜಿಲ್ಲೆಗಳಿಗೆ ನ್ಯಾಯ ಸಿಕ್ಕಿಲ್ಲ. ಕೊಯ್ನ ಆಣೆಕಟ್ಟು ನಿರ್ಮಾಣ ಮಾಡುವಾಗ 1952 ರಲ್ಲಿ ತಾಳಿಕೋಟಿ ವರೆಗೆ ಕಾಲವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಅಂದಿನ 2 ಕೋಟಿ ರೂ. ಅನುದಾನ ಕೇಳಲಾಗಿತ್ತು. ಕೇಂದ್ರದಲ್ಲಿ , ಮಹಾರಾಷ್ಟ್ರ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರು ಇದು ಸಾಕಾರಗೊಳ್ಳಲಿಲ್ಲ. 1964 ರಲ್ಲಿ ಆಲಮಟ್ಟಿಗೆ ಅಡಿಗಲ್ಲು ಹಾಕಿದರು ಕೃಷ್ಣ ಮೇಲ್ದಂಡೆ ಯೋಜನೆ ನಿರ್ಲಕ್ಷೃ ಒಳಗಾಗಿದೆ. ನಮ್ಮ ಸರ್ಕಾರ ಎಲ್ಲವನ್ನು ಬಗೆ ಹರಿಸಿ ಯೋಜನೆ ಪೂರ್ಣಗೊಳಿಸಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.

    ಕೋವಿಡ್ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಲಾಕ್‌ಡೌನ್ ಮಾಡುವ ವಿಚಾರ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ. ರಾಜ್ಯದ 3 ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈಗಾಗಲೇ ಮಮತಾ ಬ್ಯಾನರ್ಜಿ ಸೋಲು ಒಪ್ಪಿಕೊಂಡಿದ್ದಾರೆ. ಅಲ್ಲಿ ಡ್ರಾಮ ನಡೆಯುವದಿಲ್ಲ.
    – ಗೋವಿಂದ ಕಾರಜೋಳ ಡಿಸಿಎಂ



    ರಾಷ್ಟ್ರೀಯ ಯೋಜನೆ ಘೋಷಿಸಲು ತಾಂತ್ರಿಕ ತೊಂದರೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts