More

    ಮಾನವೀಯತೆ ಮೆರೆದ ವೈದ್ಯರು

    ಬಾಗಲಕೋಟೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ರೋಟರಿ ವೃತ್ತದ ಬಳಿಯ ವಾಸನದ ಆಸ್ಪತ್ರೆಯಲ್ಲಿ ಕ್ಲಿಷ್ಟಕರ ಹೆರಿಗೆಯೊಂದನ್ನು ವೈದ್ಯರು ಉಚಿತವಾಗಿ ನಡೆಸಿ ಮಾನವೀಯತೆ ಮೆರೆದ ಘಟನೆ ಸೋಮವಾರ ನಡೆದಿದೆ.

    ವಾಸನದ ಆಸ್ಪತ್ರೆಯ ಸೀರೋಗ ಹಾಗೂ ಬಂಜೆತನ ನಿವಾರಣೆ ತಜ್ಞೆ ಡಾ.ಗೌರಾ ವಾಸನದ ಹಾಗೂ ವೈದ್ಯರು ಈ ಕಾರ್ಯ ಕೈಗೊಂಡು ಮಹಿಳೆಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ಮುಖ್ಯಸ್ಥ ಡಾ.ಗಿರೀಶ ವಾಸನದ ಮಾತನಾಡಿ, ಬಾದಾಮಿ ತಾಲೂಕಿನ ಕಲಬಂದಕೇರಿ ಗ್ರಾಮದ ಮಂಜುಳಾ ನಂದಿಹಾಳ ಎಂಬ ಮಹಿಳೆ ಮಾ.7ರಂದು ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಬಂದು ದಾಖಲಾದರು. ವೈದ್ಯರು ಸಹಜ ಹೆರಿಗೆಗೆ ಪ್ರಯತ್ನಿಸಿದಾಗ ಗರ್ಭಿಣಿಗೆ ಸಹಕರಿಸಲು ಸಾಧ್ಯವಾಗಲಿಲ್ಲ. ಆಗ ಡಾ.ಗೌರಾ, ವ್ಯಾಕ್ಯೂಮ್ ಡೆಲಿವರಿಗೆ ನಿರ್ಧರಿಸಿ ಸತತ ಒಂದು ಗಂಟೆಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿ ಸಹಜ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ.

    ಡಾ.ಗೌರಾ ಅವರೊಂದಿಗೆ ಡಾ.ರಾಹುಲ್, ಚಿಕ್ಕಮಕ್ಕಳ ತಜ್ಞ ಡಾ.ಅರುಣ್, ಶುಶ್ರೂಷಕಿ ರೇಣುಕಾ ಹಾಗೂ ಇತರರು ಹೆರಿಗೆ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಗು ಹಾಗೂ ತಾಯಿಯ ಆರೈಕೆ ಮಾಡಿದ್ದಾರೆ ಡಾ.ಗಿರೀಶ ವಾಸನದ ತಿಳಿಸಿದರು.

    ಇದನ್ನು ವೈದ್ಯಕೀಯ ಭಾಷೆಯಲ್ಲಿ ವೆಂಟ್ಯೂಸ್ ಡೆಲಿವರಿ ಎನ್ನಲಾಗುತ್ತದೆ. ಸಹಜ ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಗೆ ಸರಿಯಾಗಿ ಪೇನ್ (ಹೆರಿಗೆ ನೋವು) ಕೊಡಲು ಸಾಧ್ಯವಾಗದಿದ್ದರೆ ಈ ರೀತಿ ಹೆರಿಗೆ ಮಾಡಿಸಲಾಗುತ್ತದೆ. ಮಧ್ಯರಾತ್ರಿ ಅಂದಾಜು 1 ಗಂಟೆ ಹೊತ್ತಿಗೆ ಹೆರಿಗೆ ಆಗಿದ್ದರಿಂದ ಹಾಗೂ ಮಹಿಳಾ ದಿನಾಚರಣೆಗೆ ನಮ್ಮ ಆಸ್ಪತ್ರೆಯಿಂದ ಚಿಕ್ಕ ಕೊಡುಗೆ ಸಲ್ಲಿಸಬೇಕು ಎಂಬ ಕಳಕಳಿಯಿಂದ ಈ ಹೆರಿಗೆಯನ್ನು ಉಚಿತವಾಗಿ ನೆರವೇರಿಸಲಾಗಿದೆ.
    ಡಾ.ಗೌರಾ ವಾಸನದ, ಸೀರೋಗ ತಜ್ಞೆ, ಬಾಗಲಕೋಟೆ



    ಮಾನವೀಯತೆ ಮೆರೆದ ವೈದ್ಯರು



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts