More

    ಆಯುಷ್ ವೈದ್ಯರಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಿ

    ಬಾಗಲಕೋಟೆ: ಭಾರತೀಯ ಆಯುಷ್ಯ ವೈದ್ಯಕೀಯ ಪದ್ಧತಿಯನ್ನು ವಿಶ್ವದ ಅನೇಕ ದೇಶಗಳು ಮೆಚ್ಚಿಕೊಂಡಿವೆ. ಈ ಪದ್ಧತಿ ಅಡಿಯಲ್ಲಿ 54 ವಿವಿಧ ಶಸ್ತ್ರ ಚಿಕಿತ್ಸೆ ನಡೆಸಲು ಆಯುಷ್ಯ ವೈದ್ಯರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೇ ಭಾರತೀಯ ವೈದ್ಯಕೀಯ ಸಂಘದ ವಿರೋಧ ವ್ಯಕ್ತಪಡಿಸಿರುವುದು ಸಲ್ಲ ಎಂದು ಆಯುಷ್ ೆಡರೇಶನ್ ಆ್ ಇಂಡಿಯಾದ ರಾಜ್ಯ ಅಧ್ಯಕ್ಷ ಡಾ.ಮೋಹನ ಬಿರಾದಾರ ಹೇಳಿದರು.

    ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಶಲ್ಯ ಮತ್ತು ಶಾಲಾಕ್ಯ ತಂತ್ರ ಸ್ನಾತಕೋತ್ತರ ಪದವಿ (ಎಂಡಿ, ಎಂಎಸ್) ವೈದ್ಯರು ಕೂಡ ಶಸ ಚಿಕಿತ್ಸೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿ ಅಧಿ ಸೂಚನೆ ಹೊರಡಿಸಿದೆ. ಈಗಾಗಲೇ ದೇಶದ 11 ರಾಜ್ಯಗಳಲ್ಲಿ ಇದು ಜಾರಿಯಲ್ಲಿದ್ದು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾರಿಗೊಳಿಸಬೇಕು. ಇದರಿಂದ ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಎಂಬಿಬಿಎಸ್, ಎಂಡಿ ಅಥವಾ ಇನ್ಯಾವುದೇ ತಜ್ಞ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಆಸಕ್ತಿ ತೋರಿಸುವದಿಲ್ಲ. ಸಣ್ಣ ಶಸ್ತ್ರಗಳಿಗೂ ಜನರು ದೊಡ್ಡ ನಗರಿಗೆ ಅಲೆಯುವ ಪರಿಸ್ಥಿತಿ ಇದೆ. ಇದರಿಂದ ಗ್ರಾಮೀಣ ಭಾಗದ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಅಂದಾಜು 2 ಸಾವಿರ ಆಯುಷ್ ವೈದ್ಯರು ಸರ್ಕಾರದ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ 480 ಜನ ಆಯುಷ್ ವೈದ್ಯರಿದ್ದು, ಅದರಲ್ಲಿ 83 ಜನ ವೈದ್ಯರು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಸುತ್ತಿದ್ದಾರೆ. ಶಸ ಚಿಕಿತ್ಸೆ ನಡೆಸಲು ಆಯುಷ್ ವೈದ್ಯರೂ ಎಲ್ಲ ಅರ್ಹತೆ ಹೊಂದಿದ್ದಾರೆ. ಹೀಗಿರುವಾಗ ಆಯುರ್ವೇದ ವೈದ್ಯರಿಗೆ ಶಸ್ತ್ರ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

    ವೈದ್ಯಕೀಯ ಕ್ಷೇತ್ರದಲ್ಲಿ ಸಾಮಾನ್ಯ ವೈದ್ಯರು ಮತ್ತು ಆಯುಷ್ ವೈದ್ಯರ ನಡುವೆ ವೇತನ ತಾರತಮ್ಯೆ ಇದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ವೇತನ ತಾರತಮ್ಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

    ಆಯುಷ್ ೆಡರೇಶನ್ ಆ್ ಇಂಡಿಯಾದ ಜಿಲ್ಲಾ ಉಪಾಧ್ಯಕ್ಷ ಡಾ.ಮೋಹನ ಚಟ್ಟೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಶಿವಪುತ್ರ ಬಾಲರಡ್ಡಿ, ಬೀಳಗಿ ತಾಲೂಕು ಅಧ್ಯಕ್ಷ ಡಾ.ರಮೇಶ ಅಕ್ಕಿಮರಡಿ, ಆಯುಷ್ ವೈದ್ಯರಾದ ಡಾ.ನಾಗೇಶ ಬೇವರಗಿ,ಡಾ.ಜಿ.ಬಿ. ಕುಂಬಾರ, ಡಾ.ಸಂತೋಷ ಚವಡಾಪುರ ಸೇರಿದಂತೆ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts