More

    ಬಣ್ಣದ ಬಂಡಿ ಇಲ್ಲದೆ ಸೊರಗಿದ ಕೋಟೆ ಬಣ್ಣ !

    ಬಾಗಲಕೋಟೆ: ದೇಶದಲ್ಲಿಯೆ ಖ್ಯಾತಿ ಪಡೆದಿರುವ ಬಾಗಲಕೋಟೆ ಹೋಳಿ ಹಬ್ಬದ ರಂಗೀನಾಟ ಮೊದಲ ದಿನ ಸೋಮವಾರ ಆರಂಭವಾಗಿದೆ. ಕೋವಿಡ್ ಹಿನ್ನಲೆಯಲ್ಲಿ ಜಿಲ್ಲಾಡಳಿತ ಬಣ್ಣದಾಟ ನಿಷೇಧ ಮಾಡಿದ್ದರಿಂದ ಕೋಟೆನಗರಿ ಹೋಳಿ ಸಂಭ್ರಮ ಸಂಪೂರ್ಣ ಮರೆಯಾಗಿತ್ತು. ನೂರಾರು ವರ್ಷಗಳ ಬಳಿಕ ಬಣ್ಣದ ಬಂಡಿಗಳ ಮೆರವಣಿಗೆ ಇಲ್ಲದೇ ಹೋಳಿ ಆಚರಣೆ ಜರುಗಿತು.

    ಮೊದಲ ದಿನದ ಕಿಲ್ಲಾಗಲ್ಲಿಯ ರಂಗೀನಾಟ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಠಿಸಿತು. ಮಹಿಳೆಯರು, ಮಕ್ಕಳು, ಯುವಕರು ಬಣ್ಣದೋಕುಳಿಯಲ್ಲಿ ಭಾಗವಹಿಸಿದ್ದರು. ಪ್ರಮುಖ ಬೀದಿಗಳಲ್ಲಿ ಜನದಟ್ಟನೆ ಇಲ್ಲದೇ ಬೀಕೋ ಎನ್ನುತ್ತಿತ್ತು. ರಂಗೀನ ಆಟದ ಪರಿಣಾಮ ಇಡೀ ಬಾಗಲಕೋಟೆ ವ್ಯಾಪಾರ ವಹಿವಾಟು ಸ್ವಯಂ ಘೋಷಿತ ಬಂದ್‌ನಂತೆ ಕಾಣಿಸಿತು.

    ಬಸ್ ನಿಲ್ದಾಣ, ರೈಲು ನಿಲ್ದಾನ ಪ್ರಮುಖ ಪ್ರದೇಶಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಬೆಳಗ್ಗಯಿಂದ ಮಕ್ಕಳು ಹಲಿಗೆ ಬಾರಿಸುವುದು ಬಣ್ಣ ಆಡುವುದು ಸಾಮಾನ್ಯವಾಗಿತ್ತು. ಮಧ್ಯಾಹ್ನದ ವೇಳೆಗೆ ಸ್ಪಲ್ಪ ಹೆಚ್ಚು ರಂಗು ಕಾಣಿಸಿತು. ಕೋವಿಡ್ ಹಿನ್ನಲೆಯಲ್ಲಿ ಬಣ್ಣದ ಬಂಡಿಗಳು, ಸಾಮೂಹಿಕ ಆಚರಣೆಗೆ ಬ್ರೇಕ್ ಹಾಕಿದ್ದರಿಂದ ಕೋಟೆನಗರಿ ಹೋಳಿ ಸಪ್ಪೆಯಾಗಿತ್ತು. ಕಿಲ್ಲಾ ಸೇರಿದಂತೆ ನಗರದ ಗೆಲವು ಗಲ್ಲಿಗಳಿಗೆ ಮಾತ್ರ ಬಣ್ಣದಾಟ ಸಿಮೀತವಾಗಿತ್ತು. ಕೋವಿಡ್ ಭೀತಿ ಹಿನ್ನಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬರಲಿಲ್ಲ. ಮಕ್ಕಳು, ಯವಕರು ಮಾತ್ರ ಬಣ್ಣ ಎರಚಿ ಸಂಭ್ರಮಿಸಿದರು. ಮನೆ ಎದುರು ಕುಟುಂಬ ಸದಸ್ಯರೊಂದಿಗೆ ಬಹುತೇಶಕರು ಹೋಳಿ ಆಚರಿಸಿದರು. ಸಡಗರದಲ್ಲಿ ಹಲಿಗೆ ಸಪ್ಪಳವೂ ಸೇರಿಕೊಂಡು ಹಬ್ಬದ ರಂಗೇರಿತು. ವಿವಿಧ ಬಡಾವಣೆಗಳಲ್ಲಿ ಯುವತಿಯರು ಪರಸ್ಪರ ಗುಲಾಲ್ ಎರಚಿ ಹಬ್ಬಕ್ಕೆ ಕಳೆ ತಂದರು. ವಿಭಿನ್ನ ವೇಷ, ಪೋಷಾಕು ಧರಿಸಿದ್ದ ಯುವಕರು ನಾನಾ ರೀತಿಯ ನಟನೆ ಮಾಡುತ್ತಾ ಗಮನ ಸೆಳೆದರು.

    ಸಾಂಪ್ರದಾಯಕ ಆಚರಣೆ
    ಇನ್ನು ಸೋಮವಾರ ಕಿಲ್ಲಾ ಓಣಿ ಬಣ್ಣ ಇದ್ದ ಕಾರಣ ಅಲ್ಲಿನ ಪ್ರದೇಶದಲ್ಲಿ ಬಣ್ಣದಾಟ ರಂಗೇರಿತ್ತು. ಚಿಕ್ಕ ಮಕ್ಕಳು, ಯುವಕರು ಪರಸ್ಪರ ಬಣ್ಣ ಹಚ್ಚಿ ಹೋಳಿ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಂಪ್ರದಾಯಕ ಆಚರಣೆ ಯಾವುದೇ ನಿರ್ಭಂದ ಹಾಕಿರಲಿಲ್ಲ. ಹೀಗಾಗಿ ಮಧ್ಯಾಹ್ನ 3.30 ಗಂಟೆಗೆ ತುರಾಯಿ ಹಲಗೆ, ನಿಶಾನೆಗಳ ಮೆರವಣಿಗೆ ಆರಂಭಗೊಂಡಿತು. ಜೈನಪೇಟ, ಹಳಪೇಟ, ಟೀಕಿನಮಠ, ಕಾಲೇಜು ರಸ್ತೆ, ಬಸವೇಶ್ವರ ವೃತ್ತ, ಎಂ.ಜಿ.ರಸ್ತೆ, ವಲ್ಲಭಾಯಿ ಚೌಕ ಮೂಲಕ ಕೊತ್ತಲೇಶ ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಿತು. ಆಕರ್ಷಕ ಸಾಂಪ್ರದಾಯಕ ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು.

    ಇಂದು ಮೂರು ಪೇಟೆ ಬಣ್ಣದಾಟ
    ಮಾ.30 ರಂದು 2ನೇ ದಿನ ಬಣ್ಣದ ರಂಗು ಮತ್ತಷ್ಟು ರಂಗು ಪಡೆಯಲಿದೆ. ಹಳಪೇಟ, ಜೈನ್‌ಪೇಟ ಮತ್ತು ವೆಂಕಟಪೇಟ ಬಣ್ಣದಾಟ ನಡೆಯಲಿದೆ. ಓಣಿಗಳಲ್ಲಿ ಓಕುಳಿ ಆಡಿದ ನಂತರ ತುರಾಯಿ ಹಲಗೆ, ನಿಶಾನೆಗಳ ಮೆರವಣಿಗೆ ಜರುಗಲಿದೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts