More

    ಕವಯಿತ್ರಿ ಮಲ್ಲಿಕಾ ಘಂಟಿಗೆ ಕೆಎಸ್‌ನ ಕಾವ್ಯ ಪ್ರಶಸ್ತಿ ಪ್ರದಾನ

    ಬಾಗಲಕೋಟೆ: ಹಿರಿಯ ಕವಯಿತ್ರಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಅವರಿಗೆ 2020 ನೇ ಸಾಲಿನ ಕೆ.ಎಸ್.ನರಸಿಂಹಸ್ವಾಮಿ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್(ಕೆಎಸ್‌ನ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಸವೇಶ್ವರ ಕಲಾ ಮಹಾವಿದ್ಯಾಲಯ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಜೋಗತಿ ಮಲ್ಲಿಕಾ ಘಂಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 25 ಸಾವಿರ ರೂ. ಹಾಗೂ ಫಲಕ ಒಳಗೊಂಡಿದೆ.

    ಮಂಜಮ್ಮ ಜೋಗತಿ ಮಾತನಾಡಿ, ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ಆತ್ಮತೃಪ್ತಿ ಕಾಣಬೇಕು ಎಂದರು. ಕೆಎಸ್‌ನ ಟ್ರಸ್ಟ್ ಅಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಮಣ್ಯ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆ ಕೇವಲ ಮಹಾನಗರಿಗೆ ಸೀಮಿತವಾಗಬಾರದು. ವಿಕೇಂದ್ರೀಕರಣಗೊಳ್ಳಬೇಕು. ಆಳ್ವಾಸ ನುಡಿಸಿರಿ ಮಾದರಿಯಲ್ಲಿ ಬಾಗಲಕೋಟೆಯಲ್ಲೂ ಕಾರ್ಯಕ್ರಮ ಆಯೋಜಿಸಬೇಕು ಎಂದರು.

    ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಜಿ.ಎಸ್.ಸೂಳಿಭಾವಿ, ಕೆಎಸ್‌ಎನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಸದಸ್ಯರಾದ ಕೆ.ವಿ.ಬಲರಾಮು, ಎನ್.ರವಿಕುಮಾರ ಇದ್ದರು.

    ಮಹಿಳೆಯರಿಗೆ ಇಂದು ಸಮಾಜದಲ್ಲಿ ಸ್ಥಾನಮಾನ ಸಿಗುತ್ತಿದೆ. ಸಮಸ್ಯೆ ಸಮೀಪಕ್ಕೆ ಬಂದಾಗ ಹೋರಾಟ ಮಾಡಿದ್ದೇನೆ. ಧ್ವನಿ ಎತ್ತಿದ್ದೇನೆ. ಮನಸ್ಸು ಹಗರುಗೊಳಿಸಲು ಬರೆಯುತ್ತೇನೆ. ಪ್ರಶಸ್ತಿ ಸ್ವೀಕಾರ ಮಾಡಿದ್ದು ಖುಷಿ ತಂದಿದೆ.
    ಪ್ರೊ.ಮಲ್ಲಿಕಾ ಘಂಟಿ ಕೆಎಸ್‌ನ ಕಾವ್ಯ ಪ್ರಶಸ್ತಿ ಪುರಸ್ಕೃತೆ



    ಕವಯಿತ್ರಿ ಮಲ್ಲಿಕಾ ಘಂಟಿಗೆ ಕೆಎಸ್‌ನ ಕಾವ್ಯ ಪ್ರಶಸ್ತಿ ಪ್ರದಾನ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts