More

    ಪ್ರವಾಹದ ಬಳಿಕ ಜಿಲ್ಲೆಗೆ 700 ಕೋಟಿ ರೂ. ಬಿಡುಗಡೆ

    ಬಾಗಲಕೋಟೆ: ಪ್ರವಾಹದಿಂದ ಹಾನಿಯಾದ ಬಾಳಿಕ ಪರಿಹಾರ ಹಾಗೂ ವಿವಿಧ ಕಾಮಗಾರಿಗಳಿಗೆ ಇಲ್ಲಿವರೆಗೆ ಜಿಲ್ಲೆಗೆ ಒಟ್ಟು 700 ಕೋಟಿ ರೂ. ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎ್ ಪ್ರಕಾರ 145 ಕೋಟಿ, ಎ ಮತ್ತು ಬಿ ಕೆಟಗರಿ ಮನೆಗಳ ನಿರ್ಮಾಣಕ್ಕಾಗಿ ರಾಜೀವಗಾಂಧಿ ವಸತಿ ಯೋಜನೆ ನಿಗಮದಿಂದ 104 ಕೋಟಿ ಹಾಗೂ ಸಿ ಕೆಟಗರಿಯ ಮನೆಗಳಿಗೆ 30 ಕೋಟಿ ರೂ.ಗಳನ್ನು ತಹಸೀಲ್ದಾರ ಹಂತದಲ್ಲಿ ವಿತರಿಸಲು ನೀಡಲಾಗಿದೆ ಎಂದು ಎಂದು ಕಾರಜೋಳ ತಿಳಿಸಿದರು.

    ಪ್ರವಾಹದಿಂದ ಎ ಕೆಟಗರಿಯಲ್ಲಿ 573, ಬಿ ಕೆಟಗರಿಯಲ್ಲಿ 2632 ಹಾಗೂ ಸಿ ಕೆಟಗರಿಯಲ್ಲಿ ಒಟ್ಟು 4395 ಮನೆಗಳ ಪರಿಹಾರಕ್ಕಾಗಿ ಒಟ್ಟು 76 ಕೋಟಿ ಬಿಡುಗಡೆ ಮಾಡಲಾಗಿದೆ. 88 ಕೋಟಿ ರೂ. ಇನ್‌ಪುಟ್ ಸಬ್ಸಿಡಿ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗಕ್ಕೆ 57 ಕೋಟಿ, ಲೋಕೋಪಯೋಗಿ ಇಲಾಖೆಗೆ 51.42 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಗೆ 22 ಕೋಟಿ ರೂ.ಹಾಗೂ ಬೆಳೆ ವಿಮೆಗಾಗಿ 114 ಕೋಟಿ ರೂ., ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರದಿಂದ ಒಟ್ಟು 105.39 ಕೋಟಿ ರೂ. ಇದಕ್ಕೆ ರಾಜ್ಯ ಸರ್ಕಾರದಿಂದ ಪ್ರತಿ ರೈತ ಕುಟುಂಬಕ್ಕೆ 4 ಸಾವಿರ ರೂ.ಗಳಂತೆ ಒಟ್ಟು 22.60 ಕೋಟಿ ರೂ.ಗಳು ಸೇರಿ ಒಟ್ಟಾರೆಯಾಗಿ 700 ಕೋಟಿ ರೂ.ಗಳನ್ನು ಬಿಡುಗಡೆಯಾಗಿದೆ ಎಂದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts