More

    ಹಿಂಗಾರು, ಬೇಸಿಗೆ ಹಂಗಾಮಿಗೆ ಬಿತ್ತನೆ ಬೀಜ ವಿತರಣೆ

    ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬಿತ್ತನೆಗಾಗಿ ಎಲ್ಲ ತಾಲೂಕಿನ ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಮಾರಾಟ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲು ದಾಸ್ತಾನು ಮಾಡಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.

    ವಿವಿಧ ಬೆಳೆಗಳಾದ ಕಡಲೆ, ಜೋಳ, ಸೂರ್ಯಕಾಂತಿ, ಮೆಕ್ಕೆಜೋಳ, ಶೇಂಗಾ, ಗೋಧಿ ಇತ್ಯಾದಿ ಬೆಳೆಗಳ ಅವಶ್ಯಕತೆಗನುಗುಣವಾಗಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದ್ದು, ರೈತ ಬಾಂಧವರು ಈ ಯೋಜನೆಯ ಸದುಪಯೋಗ ಪಡೆಯಬೇಕು. ಎಲ್ಲ ವರ್ಗದ ರೈತರಿಗೆ ಗರಿಷ್ಠ 2 ಹೆಕ್ಟೇರ್ ಅಥವಾ ಅವರ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಬಿತ್ತನೆ ಬೀಜ ವಿತರಿಸಲಾಗುತ್ತದೆ.

    ರಿಯಾಯಿತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜಗಳನ್ನು ಕೆ-ಕಿಸಾನ್ ತಂತ್ರಾಂಶದ ಆನ್‌ಲೈನ್ ಬಿಲ್‌ಗಳ ಮುಖಾಂತರ ವಿತರಿಸುತ್ತಿರುವ ಕಾರಣ, ಬಿತ್ತನೆ ಬೀಜ ಪಡೆಯಲು ರೈತರು ಕೆ-ಕಿಸಾನ್ ನೋಂದಣಿ ಸಂಖ್ಯೆ, ಬೀಜದ ಪಾಸ್ ಪುಸ್ತಕ ಹಾಗೂ ಆಧಾರ್ ಕಾರ್ಡ್‌ನ್ನು ತೆಗೆದುಕೊಂಡು ಬರಬೇಕು.

    ಮಾರಾಟ ಕೇಂದ್ರಗಳ ವಿವರ ಇಂತಿದೆ. ಬಾದಾಮಿ ತಾಲೂಕಿನ ಬಾದಾಮಿ ರೈತ ಸಂಪರ್ಕ ಕೇಂದ್ರ (8277933519), ಕುಳಗೇರಿ (8277933524), ಕೆರೂರ (8277933550), ಗುಳೇದಗುಡ್ಡ (8277933524), ಬಾಗಲಕೋಟೆ ತಾಲೂಕಿನ ಬಾಗಲಕೋಟೆ ರೈತ ಸಂಪರ್ಕ ಕೇಂದ್ರ (8277933540), ಕಲಾದಗಿ (8277933532), ರಾಂಪುರ (8277933538), ಹುನಗುಂದ ತಾಲೂಕಿನ ಹುನಗುಂದ ಮತ್ತು ಕೂಡಲಸಂಗಮ ರೈತ ಸಂಪರ್ಕ ಕೇಂದ್ರ (8277933566), ಅಮೀನಗಡ ಮತ್ತು ಗುಡೂರ (8277933557), ಕರಡಿ ಮತ್ತು ಹುನಗುಂದ ಎಪಿಎಂಸಿ (8277933566), ಇಳಕಲ್ಲ ಮತ್ತು ಕಂದಗಲ್, ನಂದವಾಡಗಿ ಪಿಕೆಪಿಎಸ್ (8277933562).

    ಬೀಳಗಿ ತಾಲೂಕಿನ ಬೀಳಗಿ, ಅನಗವಾಡಿ ರೈತ ಸಂಪರ್ಕ ಕೇಂದ್ರ (8277933543), ಜಮಖಂಡಿ ತಾಲೂಕಿನ ಜಮಖಂಡಿ (8277933572), ಸಾವಳಗಿ, ಚಿಕ್ಕಲಕಿ ಕ್ರಾಸ್, ಗೋಠೆ (8277933580), ತೇರದಾಳ, ಮಹಾಲಿಂಗಪೂರ (8277933579), ಮುಧೋಳ ತಾಲೂಕಿನ ಮುಧೋಳ ರೈತ ಸಂಪರ್ಕ ಕೇಂದ್ರ (8277933588), ಲೋಕಾಪುರ, ಮುಧೋಳ ಹೆಚ್ಚುವರಿ ಮಾರಾಟ ಕೇಂದ್ರ (8277927771)ವನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

    ಬೆಳೆವಾರು ರಿಯಾಯಿತಿ ದರಗಳ ವಿವರ
    ಜೋಳ ಸಾರ್ವಜನಿಕ ತಳಿ ಪ್ರತಿ ಕೆ.ಜಿ.ಗೆ ಸಾಮಾನ್ಯ ವರ್ಗದವರಿಗೆ 20 ರೂ., ಪರಿಶಿಷ್ಟ ಜಾತಿ, ಪಂಗಡದವರಿಗೆ 30 ರೂ. ನಿಜ ಚೀಟಿ ಅವರಿಗೆ ಸಾಮಾನ್ಯರಿಗೆ 19 ರೂ., ಎಸ್‌ಸಿ, ಎಸ್‌ಟಿಗೆ 28.50 ರೂ., ಕಡಲೆ ಸಾಮಾನ್ಯ 25 ರೂ., ಎಸ್‌ಸಿ, ಎಸ್‌ಟಿಗೆ 37.50 ರೂ., ಸೂರ್ಯಕ್ರಾಂತಿ ಸಂಕರ ಸಾಮಾನ್ಯ 80 ರೂ., ಎಸ್‌ಸಿ, ಎಸ್‌ಟಿಗೆ 120 ರೂ., ಮೆಕ್ಕಜೋಳ ಸಾಮಾನ್ಯ 20 ರೂ., ಎಸ್‌ಸಿ, ಎಸ್‌ಟಿಗೆ 30 ರೂ., ಶೇಂಗಾ ಕಾಳು ಹೊಸ ತಳಿ ಪ್ರಾಮಾಣಿತ ಸಾಮಾನ್ಯರಿಗೆ 22 ರೂ, ಎಸ್‌ಸಿ ಎಸ್‌ಟಿ ಅವರಿಗೆ 33 ರೂ, ನಿಜಚೀಟಿ ಸಾಮಾನ್ಯರಿಗೆ 21 ರೂ, ಎಸ್‌ಸಿ, ಎಸ್‌ಟಿಗೆ 32 ರೂ, ಹಳೆ ತಳಿಗೆ ಸಾಮಾನ್ಯ 20 ರೂ, ಎಸ್‌ಸಿ, ಎಸ್‌ಟಿಗೆ 30 ರೂ, ನಿಜಚೀಟಿ ವಿಧಕ್ಕೆ ಸಾಮಾನ್ಯರಿಗೆ 19 ರೂ, ಎಸ್‌ಸಿ, ಎಸ್‌ಟಿಗೆ 28.50 ರೂ. ದರ ನಿಗದಿ ಪಡಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts