More

    ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಸೇವೆ ಶ್ಲಾಘನೀಯ

    ಬಾಗಲಕೋಟೆ: ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸಿಸಿ ರಸ್ತೆ, ಶವಾಗಾರ ಹಾಗೂ ಪುಡ್ ಶೆಲ್ಟರ್ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

    ನವನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ವಿವಿಧ ಆಂತರಿಕ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂದಾಜು 4 ಕೋಟಿ ರೂ.ಮೊತ್ತದಲ್ಲಿ ಈ ಮೂರು ಕಾಮಗಾರಿ ಕೈಗೊಳ್ಳಲಾಗಿದೆ.

    ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಬೇಕು. ನಿಗದಿತ ಸಮಯದಲ್ಲಿಯೇ ಪೂರ್ಣಗೊಳಿಸಬೇಕು. 331.13 ಚ.ಮೀ ಶವಾಗಾರ, ಊಟದ ಗೃಹ 80.49 ಚ.ಮೀ, 7.5 ಮೀಟರ್ ಅಗಲ ಮತ್ತು 988 ಮೀಟರ್ ಉದ್ದದ ಸಿ.ಸಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇನ್ನು ಕೋವಿಡ್19 ನಿಯಂತ್ರಣದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉತ್ತಮ ಸೇವೆ ಶ್ಲಾಘನೀಯ ಎಂದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಶಸಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಗುತ್ತಿಗೆದಾರ ಕೀರಪ್ಪ ಪಾಟೀಲ, ವೈದ್ಯಾಧಿಕಾರಿ ಬಿ.ಎಸ್.ಪಾಟೀಲ, ಅಧಿಕಾರಿಗಳಾದ ಎಂ.ಎಂ.ಕಟ್ಟಿಮನಿ, ಶರಣಬಸು ಸಾದಿಗಿರಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

    ಬಾಗಲಕೋಟೆ ನಗರ ಯೋಜನಾ ಪ್ರಾಧಿಕಾರದವನ್ನು ಮೇಲ್ದರ್ಜೆಗೆ ಏರಿಸಿ ನಗರಾಭಿವೃದ್ಧಿ ಪ್ರಾಧಿಕಾರವಾಗಿ ಪರಿವರ್ತನೆ ಮಾಡುವ ಕಾರ್ಯ ಅಂತಿಮ ಹಂತದಲ್ಲಿದೆ. ನಗರಾಭಿವೃದ್ಧಿ ಸಚಿವರ ಮುದ್ರೆ ಬಾಕಿ ಉಳಿದಿದ್ದು, ಒಂದೇರಡು ದಿನಗಳಲ್ಲಿ ಬುಡಾ ಅಸ್ತಿತ್ವಕ್ಕೆ ಬರಲಿದೆ. ಹೆರಕಲ್‌ದಿಂದ ನೀರು ಸರಬರಾಜು ಆರಂಭವಾಗಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡುವದಿಲ್ಲ. ಇನ್ನು ರಾಜ್ಯಸಭಾ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಗಳ ಆಯ್ಕ ವಿಷಯದಲ್ಲಿ ವರಿಷ್ಠರ ನಿರ್ಧಾರ ಅಂತಿಮ. ಕಾರ್ಯಕರ್ತರಿಗೆ ಅವಕಾಶ ದೊರೆತಿರುವುದು ಸಂತೋಷವಾಗಿದೆ.
    ವೀರಣ್ಣ ಚರಂತಿಮಠ ಬಾಗಲಕೋಟೆ ಶಾಸಕ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts