More

    ಸಫಾಯಿಗಳಿಗೆ ಸೂರು ಕಲ್ಪಿಸಿ

    ಬಾಗಲಕೋಟೆ: ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಯಿ ಕರ್ಮಚಾರಿಗಳಿಗೆ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಲಕಾಲಕ್ಕೆ ಸಾಯಿ ಕರ್ಮಚಾರಿಗಳಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ, ಪಿಎಫ್​, ಇಎಸ್‌ಐ ಜಮಾ ಆದ ಬಗ್ಗೆ ಪರಿಶೀಲಿಸಬೇಕು ಎಂದರು.

    ಸಫಾಯಿ ಕರ್ಮಚಾರಿ ಮಕ್ಕಳ ಶಿಕ್ಷಣ ಸೌಲಭ್ಯ ಸೇರಿದಂತೆ ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಮೊದಲ ಆದ್ಯತೆ ನೀಡಲು ಕ್ರಮಕೈಗೊಳ್ಳುವಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕ್ರಮಕೈಗೊಳ್ಳಲು ಸೂಚಿಸಿದರು.

    ಜಿಲ್ಲೆಯ ಜಮಖಂಡಿ, ರಬಕವಿ ಹಾಗೂ ಬಾದಾಮಿಯಲ್ಲಿ ಅಂಗವಿಕಲರು ಎಂದು ಹೇಳಿಕೊಂಡು ಗುರುತಿನ ಚೀಟಿ ಪಡೆದು ಸೌಲಭ್ಯಗಳನ್ನು ಪಡೆಯುತ್ತಿರುವ ಬಗ್ಗೆ ತಿಳಿದುಬಂದಿದೆ. ಅಂತವರ ಬಗ್ಗೆ ಸೂಕ್ತ ಕ್ರಮಕ್ಕಾಗಿ ಎಂ.ಆರ್.ಡಬ್ಲುೃ ಮತ್ತು ಪಿಆರ್‌ಡಬ್ಲುೃಗಳ ಮೂಲಕ ತಾಲೂಕುವಾರು ಆಂದೋಲನ ರೂಪದಲ್ಲಿ ಜಾಗೃತಿ ಮೂಡಿಸಿ ಅಂಗವಿಕಲರಿಲ್ಲದೆ ಗುರುತಿನ ಚೀಟಿ ಪಡೆದವರಿದ್ದಲ್ಲಿ ಅಂತವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಂಗವಿಕಲರ ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಅವರಿಗೆ ನಿರ್ದೇಶನ ನೀಡಿದರು.

    ಅಂಗವಿಕಲರಿಗೆ ತಾಲೂಕು ಹಂತದಲ್ಲಿ ಮೀಸಲಿರಿಸಲಾದ ಶೇ.5 ರಷ್ಟು ಅನುದಾನವನ್ನು ಬಳಕೆ ಮಾಡದೆ ಅದನ್ನು ಜಿಲ್ಲಾ ಹಂತದಲ್ಲಿ ಕ್ರೋಢಿಕರಿಸಿ ಪ್ರತಿ ವರ್ಷ ಒಂದೊಂದು ಅಂಗವಿಕಲತೆ ಹೊಂದಿರುವವರಿಗೆ ಸೌಲಭ್ಯ ನೀಡಲು ವಿನೂತನ ಯೋಜನೆ ರೂಪಿಸಬೇಕು. ಮೊದಲ ವರ್ಷದಲ್ಲಿ ವಾಕ್ ಮತ್ತು ಶ್ರವಣ ದೋಷ ಹೊಂದಿದ ಅಂಗವಿಕಲರಿಗೆ ಸೌಲಭ್ಯ ನೀಡಬೇಕು. ಈ ಕುರಿತು ಜಿಪಂ ವಾಪ್ತಿಯ ಇಲಾಖೆಗಳಿಗೆ ನಿರ್ದೇಶನ ನೀಡಲು ತಿಳಿಸಿದರು.

    ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಸಿ.ಶಿವಲಿಂಗಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಪ್ರಶಾಂತ ಗಿಡದಾನಪ್ಪಗೋಳ, ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು, ತಾಲೂಕು ಮಟ್ಟದ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

    ಗೈರಾದವರಿಗೆ ನೋಟಿಸ್ ನೀಡಿ
    ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ ಕಡಿಮೆ ಪ್ರಗತಿ ಸಾಧಿಸಿದ ಇಲಾಖೆಗಳು ಮುಂದಿನ ಸಭೆ ವೇಳೆಗೆ ಶೇ.50 ರಷ್ಟು ಸಾಧನೆಯಾಗಿರಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾಧನೆ ಕ್ಷಿಣಿಸಿದೆ. ಈ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು. ಕೂಡಲೇ ತಮ್ಮ ವ್ಯಾಪ್ತಿಯ ಮುಖ್ಯಾಧಿಕಾರಿಗಳ ಸಭೆ ಕೆರೆದು ಕ್ರಮ ಜರುಗಿಸಬೇಕು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ ಅವರಿಗೆ ಸೂಚಿಸಿದರು. ಇನ್ನು ಸಭೆಗೆ ತಡವಾಗಿ ಆಗಮಿಸಿದ ಹಾಗೂ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು.

    ಸಾಧನೆ ವಿವರ ನೀಡಿದ ಅಧಿಕಾರಿಗಳು
    ವಿವಿಧ ಇಲಾಖೆಗಳು ವಿಶೇಷ ಘಟಕ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ವಲಯದಿಂದ ಬಿಡುಗಡೆಯಾದ ಒಟ್ಟು 6050.77 ಲಕ್ಷ ರೂ. ಅನುದಾನ ಪೈಕಿ 4599.15 ಲಕ್ಷ ರೂ. ಅನುದಾನ ಖರ್ಚು ಮಾಡಿ ಶೇ.76 ರಷ್ಟು ಹಾಗೂ ಗಿರಿಜನ ಉಪಯೋಜನೆಯಡಿ ಬಿಡುಗಡೆಯಾದ ಒಟ್ಟು 2188.52 ಲಕ್ಷ ರೂ. ಪೈಕಿ 1638.86 ಲಕ್ಷ ರೂ. ಖರ್ಚು ಮಾಡಿ ಶೇ.74 ರಷ್ಟು ಸಾಧನೆಯಾಗಿರುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts